ಬೇಸಿಗೆ ಶಿಬಿರ ಕಾರ್ಯಾಗಾರ
ಅಪಘಾತ, ಅವಘಡಗಳಾದ ಸಂದರ್ಭದಲ್ಲಿ ಪ್ರಾಣಾಪಾಯದಿಂದ ರಕ್ಷಣೆ ನೀಡುವಾಗ ಪ್ರಥಮ ಚಿಕಿತ್ಸೆ ಮಹತ್ತರ ಪಾತ್ರ ವಹಿಸುತ್ತದೆ. ವ್ಯಕ್ತಿ ಗಾಯ ಅಥವಾ ಅವಘಡಗಳಿಗೆ ಸಿಲುಕಿದಾಗ ಒದಗಿಸುವ ಆರಂಭಿಕ ಆರೈಕೆ ಇದಾಗಿದೆ ಎಂದು ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಎಚ್.ಎಂ.ಪ್ರಿಯಾಂಕ ಅಭಿಪ್ರಾಯಪಟ್ಟರು.
ಆಲೂರು ತಾಲೂಕು ತಾಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರ ಕಾರ್ಯಾಗಾರದಲ್ಲಿ ಪ್ರಥಮ ಚಿಕಿತ್ಸೆಯ ಬಗ್ಗೆ ಮಾತನಾಡಿ, ಅಪಘಾತಗಳ ಸಂದರ್ಭದಲ್ಲಿ ಅಪಘಾತಕ್ಕೀಡಾದ ವ್ಯಕ್ತಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮುನ್ನ ಸ್ಥಳದಲ್ಲಿಯೇ ಕೊಡುವ ಸಕಾಲಿಕ ತತ್‌ಕ್ಷಣದ ಚಿಕಿತ್ಸೆಯನ್ನೇ ಪ್ರಥಮ ಚಿಕಿತ್ಸೆ ಎನ್ನುವರು. ಪ್ರಥಮ ಚಿಕಿತ್ಸೆಯಲ್ಲಿ ಮೂರು ಸುವರ್ಣ ನಿಯಮಗಳಿವೆ. ಇವುಗಳನ್ನು ಕಡ್ಡಾಯವಾಗಿ ಪಾಲಿಸಿದಾಗ ವ್ಯಕ್ತಿಯ ಜೀವ ಕಾಪಾಡಲು ಸಾಧ್ಯ ಎಂದು ಹೇಳಿದರು.ಪ್ರತಿ ಮನೆಯಲ್ಲೂ, ಪ್ರತಿ ವಾಹನಗಳಲ್ಲಿಯೂ ಪ್ರಥಮ ಚಿಕಿತ್ಸೆ ಕಿಟ್ ಹಾಗೂ ಸಲಕರಣೆಗಳು ಅಗತ್ಯವಾಗಿ ಇರಬೇಕಾಗುತ್ತದೆ. ಪ್ರಥಮ ಚಕಿತ್ಸೆ ನೀಡುವ ವ್ಯಕ್ತಿಯು ಧೈರ್ಯಶಾಲಿಯಾಗಿರಬೇಕು, ಸಮಯಪ್ರಜ್ಞೆ ಉಳ್ಳವನಾಗಿರಬೇಕು, ಉಸಿರಾಟ ಪ್ರಕ್ರಿಯೆ ಬಗ್ಗೆ ಮಾಹಿತಿ ಗೊತ್ತಿರಬೇಕು. ಆಗ ಮಾತ್ರ ರೋಗಿಯನ್ನು ಉಳಿಸಲು ಸಾಧ್ಯ ಎಂದು ತಿಳಿಸಿದರು.
ಆಲೂರು ತಾಲೂಕು ತಾಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರ ಕಾರ್ಯಾಗಾರದಲ್ಲಿ ಪ್ರಥಮ ಚಿಕಿತ್ಸೆಯ ಪ್ರಥಮ ಚಿಕಿತ್ಸೆ ನೀಡುವ ಕುರಿತು ಮಕ್ಕಳಿಗೆ ತಿಳಿಹೇಳಲಾಯಿತು.