ಕನ್ನಡಪ್ರಭ ವಾರ್ತೆ ಬೀಳಗಿ
ಬೆಳಗ್ಗೆ ೭.೩೦ ಗಂಟೆಗೆ ಧ್ವಜಾರೋಹಣ, ೮.೩೦ಕ್ಕೆ ಬಕ್ಕೇಶ್ವರ ಮಠದ ಪೀಠಾಧಿಕಾರಿಗಳ ನೇತೃತ್ವದಲ್ಲಿ ಬಾಲಕಿಯರ ಮತ್ತು ಪುರುಷರ ಡೊಳ್ಳು, ಕರಡಿ ಮಜಲು, ಹಲಗೆ, ಸಂಬಾಳ ವಾದನ, ಕೊಂಬು ಕಹಳೆ, ಭಜನಾ ತಂಡ ಸೇರಿ ವಿವಿಧ ಕಲಾತಂಡದೊಂದಿಗೆ ಸಮ್ಮೇಳನಾಧ್ಯಕ್ಷರ ಮೆರವಣೆಗೆ ಜರುಗಲಿದೆ.
ಬಕ್ಕೇಶ್ವರ ಮಠದ ಫಕೀರಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಗ್ರಾಪಂ ಅಧ್ಯಕ್ಷೆ ಜನ್ನತಬಿ ಮುಜಾವರ್, ಪಿಕೆಪಿಎಸ್ ಅಧ್ಯಕ್ಷ ಪರಮಾನಂದ ಕುರಿ ಮೆರವಣಿಗೆಗೆ ಚಾಲನೆ ನೀಡುವರು. ಮುಖ್ಯ ಅತಿಥಿಗಳಾಗಿ ಗ್ರಾಪಂ ಉಪಾಧ್ಯಕ್ಷೆ ಯಲ್ಲವ್ವ ಮಾದರ, ಪಿಕೆಪಿಎಸ್ ಉಪಾಧ್ಯಕ್ಷ ಶ್ರೀಶೈಲ ಮಾದರ ಸೇರಿದಂತೆ ಮತ್ತಿತರ ಗಣ್ಯರು ಆಗಮಿಸುವರು. ಬೆಳಗ್ಗೆ ೯.೩೦ಕ್ಕೆ ಸಮ್ಮೇಳನದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯವನ್ನು ಗಿರಿಸಾಗರದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಬಕ್ಕೇಶ್ವರ ಮಠದ ಬಕ್ಕಯ್ಯ ಸ್ವಾಮೀಜಿ ವಹಿಸಲಿದ್ದು, ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ.ಎಸ್. ಬಾಲಾಜಿ ಉದ್ಘಾಟಿಸುವರು. ಜಿಲ್ಲಾಧ್ಯಕ್ಷ ಡಿ. ಎಂ. ಸಾವಕಾರ ಅಧ್ಯಕ್ಷತೆ ವಹಿಸುವರು. ಕಜಾಪ ರಾಜ್ಯ ಕಾರ್ಯದರ್ಶಿ ಪ್ರೊ. ಕೆ.ಎಸ್. ಕೌಜಲಗಿ, ಚಿಕ್ಕಾಲಗುಂಡಿಯ ಮೇಲಪ್ಪ ಕೆಂಪಲಿಂಗಣ್ಣವರ ರಚಿತ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಕೃತಿ ಲೋಕಾರ್ಪಣೆ ಗೊಳಿಸುವರು. ಕಸಾಪ ರಾಜ್ಯ ಕಾರ್ಯಕಾರಿಣಿ ಸದಸ್ಯ ಜಿ.ಕೆ. ತಳವಾರ, ಬಾದಾಮಿಯ ಚಾಲುಕ್ಯ ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾರ್ಥಿನಿ ಗಂಗಾ ನುಚ್ಚಿನರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ನೀಡುವರು. ಕಜಾಪ ತಾಲೂಕಾಧ್ಯಕ್ಷ ಬಸವರಾಜ ನಾಯ್ಕ ಪ್ರಾಸ್ತಾವಿಕ ನುಡಿ ಹೇಳುವರು. ಕನ್ನಡ ಜಾನಪದ ಪರಿಷತ್ ತಾಲೂಕು ಘಟಕ ಮತ್ತು ಮಹಿಳಾ ಘಟಕಗಳ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸುವರು. ಮುಖ್ಯ ಅತಿಥಿಗಳಾಗಿ ಪ್ರಗತಿಪರ ರೈತ ಎಸ್ ಟಿ. ಪಾಟೀಲ, ಇನಾಂಹಂಚಿನಾಳ ಪಿಕೆಪಿಎಸ್ ಅಧ್ಯಕ್ಷ ಶ್ರೀಶೈಲ ನಿರಾಣಿ, ತಹಸೀಲ್ದಾರ ವಿನೋದ ಹತ್ತಳ್ಳಿ, ಸಿಪಿಐ ಹನುಮಂತ ಸಣಮನಿ, ಜಾನಪದ ಆಶುಕವಿ ಸಿದ್ದಪ್ಪ ಬಿದರಿ, ಕಜಾಪ ಜಿಲ್ಲಾ ಕಾರ್ಯದರ್ಶಿ ಆರ್.ಬಿ. ನಬಿವಾಲೆ, ಪೀಕಾರ್ಡ್ ಬ್ಯಾಂಕ್ ನಿರ್ದೇಶಕ ಹನುಮಂತ ಸಿಂಗರಡ್ಡಿ, ಮುಖಂಡರಾದ ವೆಂಕಣ್ಣ ದ್ಯಾವಣ್ಣವರ, ಸತ್ಯಪ್ಪ ಕುರಿ, ರವೀಂದ್ರ ಜಕರಡ್ಡಿ, ಶಿವಾನಂದ ಹಿರೇಮಠ, ಚಂದ್ರಶೇಖರ ನಡುವಿನಮನಿ, ಮಂಜುನಾಥ ಧೂಪದ, ಸುಭಾಸ ರಾಠೋಡ ಆಗಮಿಸುವರು.ಬೆಳಗ್ಗೆ ೧೧.೩೦ ಗಂಟೆಗೆ ಸರ್ವಾಧ್ಯಕ್ಷರ ಬದುಕು ಮತ್ತು ಸಾಧನೆಯ ಗೋಷ್ಠಿಯ ಸಾನ್ನಿಧ್ಯವನ್ನು ಬಕ್ಕೇಶ್ವರ ಮಠದ ಶಿವಾನಂದ ಸ್ವಾಮೀಜಿ ವಹಿಸಲಿದ್ದು, ಸಾಹಿತಿ ವೀರೇಂದ್ರ ಶೀಲವಂತ ಅಧ್ಯಕ್ಷತೆ ವಹಿಸುವರು. ಸರ್ವಾಧ್ಯಕ್ಷ ಪುಂಡಲೀಕಪ್ಪ ಗಾಣಗೇರ ಅವರ ಬದುಕು-ಸಾಧನೆ ಕುರಿತು ಡಾ.ಎಸ್. ಕೆ. ಬಂಗಾರಿ ಮಾತನಾಡುವರು. ಮುಖ್ಯ ಅತಿಥಿಗಳಾಗಿ ಎಲ್.ಬಿ. ಕುರ್ತಕೋಟಿ, ಬಿ.ಆರ್. ಸೊನ್ನದ, ಜಿ.ಆರ್. ಹವೇಲಿ ಮತ್ತಿತರ ಗಣ್ಯರು ಆಗಮಿಸುವರು. ಬಳಿಕ ವಿವಿಧ ಗ್ರಾಮಗಳಿಂದ ಆಗಮಿಸುವ ೩೦ಕ್ಕೂ ಹೆಚ್ಚು ಕಲಾತಂಡಗಳಿಂದ ಕಲೆಯ ಪ್ರದರ್ಶನ ನಡೆಯಲಿವೆ. ಮಧ್ಯಾಹ್ನ ೩.೩೦ಕ್ಕೆ ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಿ.ಎಂ. ಸಾವಕಾರ ಉಪಸ್ಥಿಯಲ್ಲಿ ಬಹಿರಂಗ ಅಧಿವೇಶನ ನಡೆಯಲಿದ್ದು, ಕಜಾಪ ತಾಲೂಕಾಧ್ಯಕ್ಷ ಬಸವರಾಜ ನಾಯ್ಕ ಅಧ್ಯಕ್ಷತೆ ವಹಿಸುವರು. ಕಜಾಪ ಕಾರ್ಯದರ್ಶಿಗಳಾದ ಎಂ. ಬಿ. ತಾಂಬೋಳಿ, ಗೋದಾವರಿ ಮೂರಜಾವದಮಠ ನಿರ್ಣಯ ಮಂಡಿಸುವರು. ಮಹಿಳಾ ಘಟಕದ ಅಧ್ಯಕ್ಷೆ ಎಚ್.ಬಿ. ಮಾಳಗೊಂಡ, ವಲಯಾಧ್ಯಕ್ಷ ದಯಾನಂದ ಪೂಜಾರಿ ಮತ್ತು ಪದಾಧಿಕಾರಿಗಳು ಉಪಸ್ಥಿತರಿರುವರು.
ಸಂಜೆ ೪.೧೦ಕ್ಕೆ ಸನ್ಮಾನ ಮತ್ತು ಸಮಾರೋಪ ಸಮಾರಂಭದ ಸಾನ್ನಿಧ್ಯವನ್ನು ಕಲ್ಮಠದ ಗುರುಪಾದ ಶಿವಾಚಾರ್ಯ ಸ್ವಾಮೀಜಿ, ಬಕ್ಕೇಶ್ವರ ಮಠದ ಸಂಗಯ್ಯ ಸಾಮೀಜಿ, ಮಾಜಿ ಸಚಿವ ಎಸ್.ಆರ್. ಪಾಟೀಲ ಅಧ್ಯಕ್ಷತೆ ವಹಿಸುವರು. ಚಂದ್ರಶೇಖರ ದೇಸಾಯಿ ಅಭಿನಂದನಾ ನುಡಿ, ಸಿದ್ದು ದಿವಾಣ ಸಮಾರೋಪ ನುಡಿ ಹೇಳುವರು. ಮುಖ್ಯ ಅತಿಥಿಗಳಾಗಿ ಕ್ಷೇತ್ರಶಿಕ್ಷಣಾಧಿಕಾರಿ ಆರ್.ಎಸ್. ಆದಾಪೂರ, ಸಿದ್ದಪ್ಪ ಕಡಪಟ್ಟಿ, ಅಶೋಕ ಲೆಂಕೆನ್ನವರ, ಶಿವಪ್ಪ ಅವಟಿ, ಎಚ್.ಬಿ. ಸಿಂಗರಡ್ಡಿ, ಗೌಡಪ್ಪಗೌಡ ಪಾಟೀಲ, ರಮೇಶ ಜಕರಡ್ಡಿ, ವಿರೂಪಾಕ್ಷಯ್ಯ ಹಿರೇಮಠ, ಎ.ಐ. ಮುಲ್ಲಾ ಆಗಮಿಸುವರು.ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅರುಣ ದೇಸಾಯಿ, ಶಾಹೀರ ಬೀಳಗಿ, ರಾಯಪ್ಪ ಗುರಾಣ , ಮಹಾದೇವ ಆಸೋದಿ, ಆನಂದ ಮೋಖಾಶಿ, ಗಂಗಪ್ಪ ಮಾದರ, ಗೂಳಪ್ಪ ಬಿದರಿ, ಪ್ರಭಯ್ಯ ಹಿರೇಮಠ, ಯಲ್ಲಪ್ಪ ಸುಳಕೋಡ, ಸೋಮಲಿಂಗ ಬೇಡರ, ಶ್ರೀಶೈಲಪ್ಪ ಜತ್ತಿ ಸೇರಿದಂತೆ ೪೦ಕ್ಕೂ ಅಧಿಕ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ.