ನಾಳೆ, ನಾಡಿದ್ದು 1008 ಕುಂಭಮೇಳ, ಲಕ್ಷ ದೀಪೋತ್ಸವ

KannadaprabhaNewsNetwork |  
Published : Dec 19, 2025, 03:15 AM IST
ಅಮೀನಗಡ ಸಮೀಪದ ಸೂಳೇಬಾವಿಯಲ್ಲಿ ಜರುಗಲಿರುವ ಸುವರ್ಣ ಸಂಭ್ರಮ,ಲಕ್ಷ ದೀಪೋತ್ಸವ ಕಾರ್ಯಕ್ರಮದ ಪ್ರಚಾರ ಸಮಾಗ್ರಿಗಳನ್ನು ಬಿಡುಗಡೆಗೊಳಿಸಲಾಯಿತು. | Kannada Prabha

ಸಾರಾಂಶ

ಅಮೀನಗಡ ಸಮೀಪದ ಸೂಳೇಬಾವಿಯ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಹಾಗೂ ಗ್ರಾಮೀಣಾ ಭಿವೃದ್ಧಿ ಸಂಸ್ಥೆಯ ಆಶ್ರಯದಲ್ಲಿ ಶಬರಿಮಲೆ ಯಾತ್ರೆಯ ಹಿರಿಯ ಗುರುಸ್ವಾಮಿ ನರಸಿಂಹ ಮೂರ್ತಿಯವರ 50ನೇ ವರ್ಷದ ಶಬರಿಯಾತ್ರೆ ನಿಮಿತ್ತ ಸುವರ್ಣ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ನಾಗೇಶ ಗಂಜೀಹಾಳ ಹೇಳಿದರು.

ಕನ್ನಡಪ್ರಭವಾರ್ತೆ ಅಮೀನಗಡ

ಸಮೀಪದ ಸೂಳೇಬಾವಿಯ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಹಾಗೂ ಗ್ರಾಮೀಣಾ ಭಿವೃದ್ಧಿ ಸಂಸ್ಥೆಯ ಆಶ್ರಯದಲ್ಲಿ ಶಭರೀಮಲೆ ಯಾತ್ರೆಯ ಹಿರಿಯ ಗುರುಸ್ವಾಮಿ ನರಸಿಂಹ ಮೂರ್ತಿಯವರ 50ನೇ ವರ್ಷದ ಶಬರಿಯಾತ್ರೆ ನಿಮಿತ್ತ ಸುವರ್ಣ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ನಾಗೇಶ ಗಂಜೀಹಾಳ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, 20ರಂದು ಬೆಳಗ್ಗೆ 10ಕ್ಕೆ ಅಯ್ಯಪ್ಪಸ್ವಾಮಿಯ ಭಾವಚಿತ್ರದೊಂದಿಗೆ 1008 ಕುಂಭ ವಿವಿಧ ಕಲಾತಂಡಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ, ಸಂಜೆ 7 ಗಂಟೆಗೆ ರಾಮಯ್ಯಸ್ವಾಮಿ ವಿದ್ಯಾಸಂಸ್ಥೆ ಆವರಣದಲ್ಲಿ ಲಕ್ಷ ದೀಪೋತ್ಸವ ಜರುಗಲಿದೆ. ಅಂಕಲಿಮಠದ ವೀರಭಧ್ರೇಶ್ವರ ಶ್ರೀ, ಮುರನಾಳದ ಮೇಘರಾಜೇಂದ್ರ ಶ್ರೀ, ಬಬಲಾದಿಯ ಸಿದ್ದರಾಮಯ್ಯ ಅಜ್ಜನವರು, ನೀಲಗುಂದದ ಡಾ.ಮಂಜುನಾಥ ಅಪ್ಪಾಜಿ, ಸಿದ್ದನಕೊಳ್ಳದ ಡಾ.ಶಿವಕುಮಾರ ಶ್ರೀಗಳು ಸಾನ್ನಿಧ್ಯ ವಹಿಸುವರು. ಶಾಸಕ ವಿಜಯಾನಂದ ಕಾಶಪ್ಪನವರ ಅಧ್ಯಕ್ಷತೆ ವಹಿಸಲಿದ್ದು, ಸಂಸದ ಪಿ.ಸಿ. ಗದ್ದಿಗೌಡರ ಜ್ಯೋತಿ ಬೆಳಗಿಸಲಿದ್ದಾರೆ. ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ, ದೊಡ್ಡನಗೌಡ ಪಾಟೀಲ ಹಾಗೂ ವಿವಿಧ ಗಣ್ಯರು ಭಾಗವಹಿಸುವರು.

21ರಂದು ಸಂಜೆ 6 ಗಂಟೆಗೆ ಗುರುವಂದನಾ, ತುಲಾಭಾರ, ಪ್ರಶಸ್ತಿ ವಿತರಣೆ, ಅಯ್ಯಪ್ಪಸ್ವಾಮಿ ಮಹಾಪೂಜೆಯ ಸಾನ್ನಿಧ್ಯ ಕಮತಗಿ ಹೊಳೆಹುಚ್ಚೇಶ್ವರ ಸ್ವಾಮೀಜಿ, ಗುಳೇದಗುಡ್ಡ ಒಪ್ಪತ್ತೇಶ್ವರ ಸ್ವಾಮೀಜಿ, ಕುಂದರಗಿ ಅಮರಶಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ, ಶಾಸಕ ವಿಜಯಾನಂದ ಕಾಶಪ್ಪನವರ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಹಕಾರಿ ಧುರೀಣ ರವೀಂದ್ರ ಕಲಬುರ್ಗಿ, ಗ್ರಾಪಂ ಅಧ್ಯಕ್ಷ ಪಿಡ್ಡಪ್ಪ ಕುರಿ, ಹಿರಿಯ ಗುರುಸ್ವಾಮಿ ನರಸಿಂಹ ಮೂರ್ತಿ, ಪ್ರಶಸ್ತಿ ವಿಜೇತ ಡಾ.ಗಣೇಶ ಚಿತ್ರಗಾರ, ಸಂಸ್ಥೆಯ ಅಧ್ಯಕ್ಷ ನಾಗೇಶ ಗಂಜೀಹಾಳ ವಹಿಸಲಿದ್ದು, ಜಿಲ್ಲೆಯ ಎಲ್ಲ ಅಯ್ಯಪ್ಪ ಮಾಲಾಧಾರಿಗಳು ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಲಾಧಾರಿಗಳಾದ ಮಂಜುನಾಥ ಬದ್ರಣ್ಣವರ, ರವಿ ಬುಳ್ಳಾ, ಮಂಜುನಾಥ ಹೂಲಗೇರಿ, ಶ್ರೀಶೈಲ ಹಿರೇಮಠ, ರಮೇಶ ಕುರಿ, ಹನುಮಂತ ಮಾಗಿ(ಸರಗಂಟಿ), ಸಂಗಮೇಶ ಗಂಟಿ, ಬಾಹುಬಲಿ ಮಣಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು