ಮಹಿಳಾ ಮಂಡಳಗಳಿಂದ ಆರೋಗ್ಯ ಉಚಿತ ತಪಾಸಣೆ ಶಿಬಿರ

KannadaprabhaNewsNetwork |  
Published : Dec 19, 2025, 03:15 AM IST
ಆರೋಗ್ಯ  | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ದೂರದರ್ಶನ ನಗರದ ಸಂಸ್ಕೃತಿ ಮಹಿಳಾ ಮಂಡಳ ಹಾಗೂ ರಡ್ಡಿ ಮಹಿಳಾ ಮಂಡಳ ಜಂಟಿ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಯೂನಿಕೇರ್ ಆಸ್ಪತ್ರೆಯ ವೈದ್ಯರಾದ ಡಾ.ಪವನ್ ಅಲ್ ಕುಂಟೆ, ಮುಕ್ತ ಪವನ್ ಅಲ್ಕುಂಟೆ ಹಾಗೂ ವಿನೋದ್ ಹಳ್ಳಿಗೌಡರ ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ದೂರದರ್ಶನ ನಗರದ ಸಂಸ್ಕೃತಿ ಮಹಿಳಾ ಮಂಡಳ ಹಾಗೂ ರಡ್ಡಿ ಮಹಿಳಾ ಮಂಡಳ ಜಂಟಿ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಯೂನಿಕೇರ್ ಆಸ್ಪತ್ರೆಯ ವೈದ್ಯರಾದ ಡಾ.ಪವನ್ ಅಲ್ ಕುಂಟೆ, ಮುಕ್ತ ಪವನ್ ಅಲ್ಕುಂಟೆ ಹಾಗೂ ವಿನೋದ್ ಹಳ್ಳಿಗೌಡರ ಭಾಗವಹಿಸಿದ್ದರು.

ಈ ವೇಳೆ ಡಾ.ಪವನ್ ಅಲ್ಕುಂಟೆ ಮಾತನಾಡಿ, ಸಾಮಾನ್ಯವಾಗಿ ವಯಸ್ಕರಲ್ಲಿ ತಲೆದೋರುವ ಕೀಲು ಹಾಗೂ ಮೂಳೆಯ ಸಮಸ್ಯೆಗಳ ಬಗ್ಗೆ ವಿವರಿಸಿದರು. ಪ್ರತಿಯೊಬ್ಬರೂ ದಿನ ನಿತ್ಯ ಮಾಡಲೇಬೇಕಾದ ಯೋಗಾಸನಗಳ ಬಗ್ಗೆ ಮತ್ತು ಮೂಳೆಯ ಸವೆತ ಹಾಗೂ ಅದರ ಶಸ್ತ್ರ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದರು. ಮುಕ್ತ ಮಾತನಾಡಿ, ಹೆಣ್ಣು ಮಕ್ಕಳು ವಯಸ್ಸಿಗೆ ಅನುಗುಣವಾಗಿ ಯಾವ ಯಾವ ರೀತಿ ಬದಲಾವಣೆಗಳನ್ನು ಕಾಣುತ್ತಾರೆ ಹಾಗೂ ಯಾವ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂಬುದರ ಬಗ್ಗೆ ಮಾಹಿತಿ ನೀಡಿದರು. ಅಲ್ಲದೇ, ವಹಿಸಬೇಕಾದ ಮುಂಜಾಗ್ರತೆಯ ಬಗ್ಗೆ ತಿಳಿಸಿದರು.ಬಳಿಕ ಮಾತನಾಡಿದ ವಿನೋದ್ ಹಳ್ಳಿಗುಡಿ, ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ವಿವರಿಸಿದರು ಹಾಗೂ ಹೃದಯಾಘಾತ ಮತ್ತು ಅದರ ಮುಂಜಾಗ್ರತೆಯನ್ನು ಹೇಗೆ ತೆಗೆದುಕೊಳ್ಳಬೇಕು ಎಂದು ವಿವರಿಸಿದರು.

ಉಚಿತ ಸೇವೆ ಸಲ್ಲಿಸಿದ ಎಲ್ಲಾ ವೈದ್ಯರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಸಾಹಿತಿಯಾಗಿ, ಕವಿತ್ರಿಯಾಗಿ, ವಿಮರ್ಶಕಿಯಾಗಿ ಅನೇಕ ಪ್ರಶಸ್ತಿಗಳನ್ನು ಪಡೆದ ಸುಧಾ ಪಾಟೀಲ ಅವರನ್ನು ಹಾಗೂ ನಾಗನೂರು ರುದ್ರಾಕ್ಷಿಮಠದಿಂದ ಸೇವಾ ರತ್ನ ಪ್ರಶಸ್ತಿ ಪಡೆದ ಕಾವೇರಿ ಕಿಲಾರಿ ಅವರನ್ನು ಸನ್ಮಾನಿಸಲಾಯಿತು.ಸಂಸ್ಕೃತಿ ಮಹಿಳಾ ಮಂಡಳದ ಅಧ್ಯಕ್ಷೆ ಸುನಿತಾ ಸುರೇಶ್ ಸ್ವಾಗತಿಸಿದರು. ರಡ್ಡಿ ಸಂಘದ ಹೇಮರೆಡ್ಡಿ ಮಲ್ಲಮ್ಮ ಮಹಿಳಾ ಮಂಡಳದ ಅಧ್ಯಕ್ಷೆ ಶಾಂತಾ ಜಂಗಲ, ಕಾರ್ಯದರ್ಶಿ ಲತಾ ಅರಕೇರಿ, ವಿಜಯಲಕ್ಷ್ಮಿ ಮಂಟೂರ ಹಾಗೂ ಸಂಸ್ಕೃತಿ ಮಹಿಳಾ ಮಂಡಳದ ಕಾರ್ಯದರ್ಶಿ ಅರಕೇರಿ, ವಿಜಯಲಕ್ಷ್ಮಿ ಮಂಟೂರ ಹಾಗೂ ಸಂಸ್ಕೃತಿ ಮಹಿಳಾ ಮಂಡಳದ ಕಾರ್ಯದರ್ಶಿ ಅನುಶ್ರೀ ದೇಶಪಾಂಡೆ, ಸುವರ್ಣ ಶೆಟ್ಟರ್ ಹಾಗೂ ಖಜಾಂಚಿ ಪ್ರತಿಭಾ ಸಿದ್ಧಪ್ಪಗೌಡರ ಉಪಸ್ಥಿತರಿದ್ದರು. ಸಂಗೀತ ಕುಲಕರ್ಣಿ ಹಾಗೂ ರೋಹಿಣಿ ಪಾಟೀಲ ನಿರೂಪಿಸಿದರು, ಅನುಶ್ರೀ ದೇಶಪಾಂಡೆ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು