ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ರಥಕ್ಕೆ ಚಾಲನೆ

KannadaprabhaNewsNetwork |  
Published : Sep 28, 2024, 01:22 AM IST
ತಾಳಿಕೋಟೆ 2 | Kannada Prabha

ಸಾರಾಂಶ

ತಾಳಿಕೋಟೆ ತಾಲೂಕು ಕೇಂದ್ರವಾದ ಮೇಲೆ ಪಟ್ಟಣದಲ್ಲಿ ಅ.೧ ರಂದು ನಡೆಯುತ್ತಿರುವ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ರಥಕ್ಕೆ ಗುರುವಾರ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಆರ್.ಎಲ್.ಕೊಪ್ಪದ ನೇತೃತ್ವದಲ್ಲಿ ಸಾಹಿತ್ಯ ಪರಿಷತ್ತಿನ ಸದಸ್ಯರು ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ತಾಲೂಕು ಕೇಂದ್ರವಾದ ಮೇಲೆ ಪಟ್ಟಣದಲ್ಲಿ ಅ.೧ ರಂದು ನಡೆಯುತ್ತಿರುವ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ರಥಕ್ಕೆ ಗುರುವಾರ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಆರ್.ಎಲ್.ಕೊಪ್ಪದ ನೇತೃತ್ವದಲ್ಲಿ ಸಾಹಿತ್ಯ ಪರಿಷತ್ತಿನ ಸದಸ್ಯರು ಚಾಲನೆ ನೀಡಿದರು.

ಈ ಸಮಯದಲ್ಲಿ ಆರ್.ಎಲ್.ಕೊಪ್ಪದ ಮಾತನಾಡಿ, ಕನ್ನಡ ಸಾಹಿತ್ಯ ಬೆಳವಣಿಗೆಯಲ್ಲಿ ಜಾನಪದ ಸಾಹಿತ್ಯ ಬಹಳ ಮುಖ್ಯಪಾತ್ರ ವಹಿಸಿದ್ದಾಗಿದೆ. ತಾಳಿಕೋಟೆ ಐತಿಹಾಸಿಕ ನಗರಿಯಲ್ಲಿ ತಾಲೂಕು ಕೇಂದ್ರವಾದ ಬಳಿಕ ಮೊದಲ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಈ ಸಮ್ಮೇಳನದ ಸವಿಯನ್ನು ಎಲ್ಲರೂ ಭಾಗವಹಿಸಲು ರಥವನ್ನು ಸಿದ್ಧಪಡಿಸಿ ಚಾಲನೆ ನೀಡಲಾಗಿದೆ. ಕಾರಣ ಎಲ್ಲ ಕನ್ನಡಾಭಿಮಾನಿಗಳು ಅ.೧ ರಂದು ನಡೆಯುವ ಐತಿಹಾಸಿಕ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಬೇಕು ಎಂದು ಕೋರಿದರು.ಈ ಸಮಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಭುಗೌಡ ಮದರಕಲ್ಲ, ಮಾಸುಮಸಾಬ್‌ ಕೇಂಭಾವಿ, ಆರ್.ವಿ.ಜಾಲವಾದಿ, ಜೈಭೀಮ ಮುತ್ತಗಿ, ಆನಂದ ಮದರಕಲ್ಲ, ಘನಶಾಮ ಚವ್ಹಾಣ, ಬಿ.ಆರ್.ಪೋಲೀಸ್‌ಪಾಟೀಲ, ವಿ.ಬಿ.ಸಜ್ಜನ, ಡೋಣಿ, ಕಟ್ಟಿಮನಿ ಮೊದಲಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಸ್ಯೆ ಬಗೆಹರಿದ್ರೆ 6 ತಿಂಗಳಲ್ಲಿ 1 ಲಕ್ಷ ನೇಮಕಾತಿ : ಸಾರಿಗೆ ಸಚಿವ
ಸರ್ಕಾರದಿಂದ ಮಹತ್ವದ ನಿರ್ಧಾರ : ವಿಪತ್ತು ವೇಳೆ ಇಡೀ ಊರಿನ ರೈತರಿಗೆ ಪರಿಹಾರ