ಡಿ.ಕೆ. ಶಿವಕುಮಾರ್‌ (ಮುಖ್ಯಮಂತ್ರಿ)

ಕ್ಷೇತ್ರ: ಕನಕಪುರ

ಜಾತಿ: ಒಕ್ಕಲಿಗ


ವಿದ್ಯಾರ್ಹತೆ: ಎಂಎ (ರಾಜ್ಯಶಾಸ್ತ್ರ)

ಎಂಟು ಬಾರಿ ಶಾಸಕ

ಆರನೇ ಬಾರಿ ಸಚಿವ

ನಾಡಿನ ನೂತನ ಮುಖ್ಯಮಂತ್ರಿಯಾಗಿರುವ ಡಿ.ಕೆ. ಶಿವಕುಮಾರ್‌ ಕನಕಪುರದ ಡಿ.ಕೆ. ಕೆಂಪೇಗೌಡ ಹಾಗೂ ಗೌರಮ್ಮ ದಂಪತಿಗೆ 1962 ಮೇ 15 ರಂದು ಜನಿಸಿದರು. ಓದಿದ್ದು ಎಂಎ (ರಾಜ್ಯಶಾಸ್ತ್ರ) ವೃತ್ತಿಯಿಂದ ಕೃಷಿಕರು ಹಾಗೂ ಉದ್ಯಮಿ.ವಿದ್ಯಾರ್ಥಿ ಸಂಘಟನೆ ಮೂಲಕ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟ ಅವರು ನಿಧಾನವಾಗಿ ಒಂದೊಂದೆ ಹೆಜ್ಜೆ ಇಡುತ್ತಾ ಎನ್‌ಎಸ್‌ಯುಐ ಸಂಘಟನೆ ಮೂಲಕ ತಮ್ಮ ಸಂಘಟನಾ ಶಕ್ತಿ ಪ್ರದರ್ಶಿಸುವ ಮೂಲಕ ನಾಯಕರ ಗಮನ ಸೆಳೆದರು.

1989ರಲ್ಲಿ ಸಾತನೂರು ಕ್ಷೇತ್ರದಿಂದ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾದಾಗ ಅವರ ವಯಸ್ಸು ಕೇವಲ 27 ಆಗಿತ್ತು. ಅಲ್ಲಿಂದ ಸತತವಾಗಿ ಎಂಟು ಬಾರಿ ಕನಕಪುರ ಕ್ಷೇತ್ರದಿಂದ ಆಯ್ಕೆಯಾಗುತ್ತಾ ಬಂದಿದ್ದಾರೆ.

ಬಂಗಾರಪ್ಪ ಅವರ ಸರ್ಕಾರದಲ್ಲಿ ಬಂಧೀಖಾನೆ ಸಚಿವರಾದ ಡಿ.ಕೆ. ಶಿವಕುಮಾರ್‌ ನಂತರದಲ್ಲಿ ಸಹಕಾರ, ನಗರಾಭಿವೃದ್ಧಿ, ಇಂಧನ, ಭಾರಿ ಮತ್ತು ಮತ್ತು ಮಧ್ಯಮ ನೀರಾವರಿ, ವೈದ್ಯಕೀಯ ಶಿಕ್ಷಣ ಕನ್ನಡ ಮತ್ತು ಸಂಸ್ಕೃತಿ, ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಸಿದ್ದರಾಮಯ್ಯ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗುವ ಜೊತೆಗೆ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಬಲಿಷ್ಠವಾಗಿ ಕಟ್ಟಿದರು.

ರಾಜಧಾನಿ ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಹಲವು ಕನಸು ಇಟ್ಟುಕೊಂಡು ಹತ್ತಾರು ಯೋಜನೆ ರೂಪಿಸಿರುವ ಡಿ.ಕೆ. ಶಿವಕುಮಾರ್‌. ತಮ್ಮ ಛಲ, ಹಠ, ಪಕ್ಷ ನಿಷ್ಠೆ, ತಾಳ್ಮೆಯ ಫಲವಾಗಿ ರಾಜ್ಯದ 25ನೇ ಮುಖ್ಯಮಂತ್ರಿಯಾಗಿದ್ದಾರೆ.

ಹೊಸ ಸಚಿವರು

1. ಡಾ. ಜಿ. ಪರಮೇಶ್ವರ್‌

ಕ್ಷೇತ್ರ: ಕೊರಟಗೆರೆ

6ನೇ ಬಾರಿ ಸಚಿವ

--

2. ಕೆ.ಎಚ್‌. ಮುನಿಯಪ್ಪ

ಕ್ಷೇತ್ರ: ದೇವನಹಳ್ಳಿ

2ನೇ ಸಲ ಸಚಿವ

--

3. ಕೆ.ಜೆ. ಜಾರ್ಜ್‌

ಕ್ಷೇತ್ರ: ಸರ್ವಜ್ಞನಗರ

6ನೇ ಬಾರಿ ಮಂತ್ರಿ

--

4. ಎಂ.ಬಿ. ಪಾಟೀಲ್‌

ಕ್ಷೇತ್ರ: ಬಬಲೇಶ್ವರ

4ನೇ ಸಲ ಸಚಿವ

--5. ರಾಮಲಿಂಗಾರೆಡ್ಡಿಕ್ಷೇತ್ರ: ಬಿಟಿಎಂ ಲೇಔಟ್‌

6 ಬಾರಿಗೆ ಮಂತ್ರಿ

--

6. ಸತೀಶ್‌ ಜಾರಕಿಹೊಳಿ

ಕ್ಷೇತ್ರ: ಯಮಕನಮರಡಿ

5ನೇ ಸಲ ಸಚಿವ

--

7. ಕೃಷ್ಣ ಬೈರೇಗೌಡ

ಕ್ಷೇತ್ರ: ಬ್ಯಾಟರಾಯನಪುರ

4ನೇ ಬಾರಿಗೆ ಸಚಿವ

--

8. ಪ್ರಿಯಾಂಕ್ ಖರ್ಗೆಕ್ಷೇತ್ರ: ಚಿತ್ತಾಪುರ

4ನೇ ಬಾರಿಗೆ ಸಚಿವ

-

9. ಯು.ಟಿ. ಖಾದರ್‌

ಕ್ಷೇತ್ರ: ಮಂಗಳೂರು

4ನೇ ಬಾರಿಗೆ ಸಚಿವ

--

10. ಈಶ್ವರ್‌ ಖಂಡ್ರೆ

ಕ್ಷೇತ್ರ: ಭಾಲ್ಕಿ

3ನೇ ಸಲ ಸಚಿವ

--

11. ಯತೀಂದ್ರ ಸಿದ್ದರಾಮಯ್ಯ

ಕ್ಷೇತ್ರ: ಎಂಎಲ್‌ಸಿ

ಮೊದಲ ಬಾರಿಗೆ ಸಚಿವ

--

12. ಬೈರತಿ ಸುರೇಶ್

ಕ್ಷೇತ್ರ: ಹೆಬ್ಬಾಳ

2ನೇ ಬಾರಿಗೆ ಸಚಿವ

--

13. ಶರಣಪ್ರಕಾಶ್ ಪಾಟೀಲ್ಕ್ಷೇತ್ರ: ಸೇಡಂ

3ನೇ ಸಲ ಮಂತ್ರಿ

ಮಂತ್ರಿಗಿರಿ: ಯಾವ ಜಾತಿಗೆ ಎಷ್ಟು?

ಸಮುದಾಯ ಸ್ಥಾನ ಒಕ್ಕಲಿಗ 2

ಲಿಂಗಾಯತ 3

ಕುರುಬ 2

ಪ.ಜಾತಿ 2

ಪ.ಪಂಗಡ 1

ರೆಡ್ಡಿ 1

ಮುಸ್ಲಿಂ 1

ಕ್ರಿಶ್ಚಿಯನ್‌ 1

==

-ಡಿ.ಕೆ. ಶಿವಕುಮಾರ್ (ಮುಖ್ಯಮಂತ್ರಿ)- ಒಕ್ಕಲಿಗ

-ಡಾ। ಜಿ. ಪರಮೇಶ್ವರ್‌ (ಉಪಮುಖ್ಯಮಂತ್ರಿ)- ದಲಿತ (ಬಲಗೈ)

-ಕೆ.ಎಚ್.ಮುನಿಯಪ್ಪ- ದಲಿತ (ಎಡಗೈ)

-ಕೆ.ಜೆ. ಜಾರ್ಜ್- ಕ್ರಿಶ್ಚಿಯನ್

-ಎಂ.ಬಿ.ಪಾಟೀಲ್- ಲಿಂಗಾಯತ

-ರಾಮಲಿಂಗಾರೆಡ್ಡಿ- ರೆಡ್ಡಿ

-ಸತೀಶ್ ಜಾರಕಿಹೊಳಿ- ನಾಯಕ (ಪರಿಶಿಷ್ಟ ಪಂಗಡ)

-ಕೃಷ್ಣಬೈರೇಗೌಡ- ಒಕ್ಕಲಿಗ

-ಪ್ರಿಯಾಂಕ್ ಖರ್ಗೆ-ದಲಿತ (ಬಲಗೈ)

-ಯು.ಟಿ. ಖಾದರ್- ಮುಸ್ಲಿಂ

-ಈಶ್ವರ ಖಂಡ್ರೆ- ಲಿಂಗಾಯತ

-ಯತೀಂದ್ರ ಸಿದ್ದರಾಮಯ್ಯ- ಕುರುಬ

-ಬೈರತಿ ಸುರೇಶ್‌- ಕುರುಬ

-ಶರಣ ಪ್ರಕಾಶ್ ಪಾಟೀಲ್- ಲಿಂಗಾಯತ

-----