ಕೊಪ್ಪ ಗ್ಯಾರಂಟಿ ಅನುಷ್ಠಾನ ಸಮಿತಿಗೆ ಪ್ರಥಮ ಸ್ಥಾನ

KannadaprabhaNewsNetwork |  
Published : Apr 26, 2025, 12:48 AM IST
ಫೋಟೋ: | Kannada Prabha

ಸಾರಾಂಶ

ಕೊಪ್ಪ: ರಾಜ್ಯಸರ್ಕಾರದ ಪಂಚಗ್ಯಾರಂಟಿಗಳ ಅನುಷ್ಠಾನದಲ್ಲಿ ಕೊಪ್ಪ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದೆ ಎಂದು ಸಮಿತಿ ಅಧ್ಯಕ್ಷ ಶಶಿಕುಮಾರ್ ಹೇಳಿದರು.

ಕೊಪ್ಪ: ರಾಜ್ಯಸರ್ಕಾರದ ಪಂಚಗ್ಯಾರಂಟಿಗಳ ಅನುಷ್ಠಾನದಲ್ಲಿ ಕೊಪ್ಪ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದೆ ಎಂದು ಸಮಿತಿ ಅಧ್ಯಕ್ಷ ಶಶಿಕುಮಾರ್ ಹೇಳಿದರು. ತಾಪಂಲ್ಲಿ ಶುಕ್ರವಾರ ನಡೆದ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿ ಗ್ಯಾರಂಟಿ ಯೋಜನೆ ಸಮಾಜದ ಕಡೆ ವ್ಯಕ್ತಿಗೂ ತಲುಪಬೇಕೆನ್ನುವ ನಿಟ್ಟಿನಲ್ಲಿ ಸಮಿತಿ ಸದಸ್ಯರು, ಅಧಿಕಾರಿಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತಿದ್ದು ಈ ಪ್ರಯತ್ನದ ಫಲವಾಗಿ ತಾಲೂಕು ಪ್ರಥಮ ಸ್ಥಾನ ಗಳಿಸಿದೆ. ಅನುಷ್ಠಾನ ಸಮಿತಿ ಮುಂದಿನ ಸಭೆ ಗ್ರಾಮೀಣ ಭಾಗದಲ್ಲಿ ನಡೆಯಬೇಕೆನ್ನುವ ಉದ್ದೇಶ ದಿಂದ ಬಸ್ರಿಕಟ್ಟೆ ಸಮೀಪ ಮೆಣಸಿನಹಾಡ್ಯದಲ್ಲಿ ಸಭೆ ನಡೆಸಲು ತೀರ್ಮಾನಿ ಸಲಾಗಿದೆ ಎಂದರು.

ಈ ಭಾಗದಲ್ಲಿ ಅತೀ ಹೆಚ್ಚು ತೋಟದ ಕೂಲಿ ಕಾರ್ಮಿಕರು, ಗಿರಿಜನರಿರುವ ಪ್ರದೇಶವಾಗಿರುವುದರಿಂದ ಇಲ್ಲಿನ ೨-೩ ಪಂಚಾಯಿತಿ ಸೇರಿಸಿಕೊಂಡು ಸಭೆ ನಡೆಸುವ ಬಗ್ಗೆ ಯೋಚಿಸಲಾಗುತ್ತಿದೆ. ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನ ವಾಗಬೇಕು. ಒಬ್ಬರಿಗೆ ೫ ಕೆಜಿ ಅಕ್ಕಿಯ ಹೆಚ್ಚುವರಿ ಹಣ ನೀಡುತ್ತಿದ್ದು ಅದರ ಬದಲು ಕಳೆದೆರಡು ತಿಂಗಳಿಂದ ತಲಾ ೧೦ ಕೆ.ಜಿ. ಅಕ್ಕಿ ನೀಡಲಾಗುತ್ತಿದೆ. ಪಡಿತರ ಅಕ್ಕಿ ಕೆಲವೆಡೆ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಆಹಾರ ನೀರೀಕ್ಷಕರೊಡನೆ ತೆರಳಿ ಪರಿಶೀಲನೆ ನಡೆಸಲಾಗಿದೆ. ಪ್ರತಿಯೊಂದು ಪಡಿತರ ಅಂಗಡಿ ಗಳಲ್ಲೂ ಅನ್ನ ಭಾಗ್ಯ ಯೋಜನೆ ಸಂಪೂರ್ಣ ವಿವರ ಮತ್ತು ಮಾಹಿತಿಯ ನಾಮಫಲಕ ಅಳವಡಿಸಲು ತಿಳಿಸಲಾಗಿದೆ ಎಂದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್, ಸದಸ್ಯರಾದ ಸಂತೋಷ್ ಡಿ.ಎಸ್., ವಸಂತಿ ಪಾಂಡುರಂಗ, ಅನಿಲ್ ಶೆಟ್ಟಿ, ಶೋಭಾ, ಪೂರ್ಣಿಮಾ, ಪ್ರವೀಣ್, ಎಸ್.ಪಿ. ಪ್ರವೀಣ, ರಾಘವೇಂದ್ರ, ವಿಜಯಾನಂದ, ರಾಜೇಂದ್ರ ಪ್ರಸಾದ್, ಎಚ್.ಎಸ್. ಆದರ್ಶ, ನರೇಂದ್ರ ಶೆಟ್ಟಿ, ವಿಜಯ್ ಕುಮಾರ್, ಅಬ್ದುಲ್ ಖಾದರ್, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ