ಚಿತ್ರದುರ್ಗದಲ್ಲಿ ಉತ್ತಮ ರಸ್ತೆ ನಿರ್ಮಾಣಕ್ಕೆ ಮೊದಲ ಆಧ್ಯತೆ

KannadaprabhaNewsNetwork |  
Published : Jul 15, 2024, 02:02 AM ISTUpdated : Jul 15, 2024, 11:34 AM IST
ಚಿತ್ರದುರ್ಗ ಎರಡನೇ ಪುಟದ ಬಾಟಂ | Kannada Prabha

ಸಾರಾಂಶ

ಅಲ್ಪ ಸಂಖ್ಯಾತರ ಇಲಾಖೆಯಡಿ ಬಿಡುಗಡೆಯಾದ ಅನುದಾನದಲ್ಲಿ ಚಿತ್ರದುರ್ಗ ನಗರದ ವಿವಿದೆಡೆ ಕೈಗೆತ್ತಿಕೊಳ್ಳಲಾದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೀರೇಂದ್ರ ಪಪ್ಪಿ ಭೂಮಿ ಪೂಜೆ ನೆರವೇರಿಸಿದರು.

  ಚಿತ್ರದುರ್ಗ :  ಸರ್ಕಾರದ ವಿವಿಧ ಇಲಾಖೆಯ ಅನುದಾನವನ್ನು ಬಳಸಿಕೊಂಡು ಚಿತ್ರದುರ್ಗ ನಗರದಲ್ಲಿ ಉತ್ತಮ ರಸ್ತೆ ನಿರ್ಮಾಣಕ್ಕೆ ಮೊದಲ ಆಧ್ಯತೆ ನೀಡಲಾಗುವುದೆಂದು ಶಾಸಕ ವೀರೇಂದ್ರ ಪಪ್ಪಿ ಹೇಳಿದರು.ಅಲ್ಪ ಸಂಖ್ಯಾತರ ಇಲಾಖೆಯಿಂದ ಬಿಡುಗಡೆಯಾದ ₹5 ಕೋಟಿ ಅನುದಾನದಲ್ಲಿ ನಗರದ 11,12,14,16 ಮತ್ತು 23ನೇ ವಾರ್ಡಗಳಲ್ಲಿ ಕೈಗೆತ್ತಿಕೊಳ್ಳಲಾದ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಅಲ್ಪಸಂಖ್ಯಾತರ ಸಚಿವ ಜಮೀರ್ ಆಹ್ಮದ್‍ ಖಾನ್‌ರವರು ಎಲ್ಲಿ ಮುಸ್ಲಿಂ ಜನಾಂಗದವರು ಹೆಚ್ಚಾಗಿ ವಾಸ ಮಾಡುತ್ತಿದ್ದಾರೋ ಅಂತಹ ವಾರ್ಡ್‌ಗಳಲ್ಲಿ ಉತ್ತಮವಾದ ರಸ್ತೆ ನಿರ್ಮಾಣ ಮಾಡಲು ತಮ್ಮ ಇಲಾಖೆ ವತಿಯಿಂದ ಅನದಾನ ನೀಡಿದ್ದಾರೆ. ಚಿತ್ರದುರ್ಗ ನಗರದಲ್ಲಿ ಇನ್ನೂ ಅನೇಕ ಕಡೆಗಳಲ್ಲಿ ರಸ್ತೆ ನಿರ್ಮಾಣ ಮಾಡಬೇಕಿದೆ, ಕೆಲವಡೆ ರಸ್ತೆ ಇಲ್ಲವಾಗಿದ್ದು ಅಂತಹ ಕಡೆ ಆಧ್ಯತೆ ಮೇರೆಗೆ ಕಾಮಗಾರಿ ಆರಂಭಿಸಲಾಗುವುದು ಎಂದರು.

ಚಿತ್ರದುರ್ಗ ನಗರದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ₹20 ಕೋಟಿ ಅನುದಾನ ನೀಡಿದ್ದಾರೆ. ಇದರಲ್ಲಿ ₹8 ಕೋಟಿ ಹಣವನ್ನು ನಗರದ ವಿವಿಧ ಕಾಮಗಾರಿಗಳಿಗೆ ಬಳಕೆ ಮಾಡಲಾಗುವುದು. ಹೊಸದಾಗಿ ಸಿಸಿ ರಸ್ತೆ ನಿರ್ಮಾಣ ಮಾಡಲಾಗುವುದು. ಸಚಿವ ಜಮೀರ್ ಆಹ್ಮದ್‍ ಖಾನ್‌ರವರು ನಗರದ ಅಭಿವೃದ್ಧಿಗಾಗಿ ಈಗ ನೀಡಿದ ಅನುದಾನ ಜೊತೆಗೆ ಹೆಚ್ಚುವರಿಯಾಗಿ ₹10 ಕೋಟಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ವಾರ್ಡ್‌ ನಂ.11ರಲ್ಲಿ ಉಸ್ಮಾನೀಯ ಮಸೀದಿ ರಸ್ತೆ, ಕೊಹಿನೂರು ಈದ್ಗಾ, 12 ರಲ್ಲಿ ಟಿಪ್ಪುಸುಲ್ತಾನ್ ಸರ್ಕಲ್ ರಸ್ತೆ, 14ರಲ್ಲಿ ಮಹಮದೀಯ ಮಸೀದಿ ರಸ್ತೆ, 16ರಲ್ಲಿ ಎಂ.ಕೆ.ಪ್ಯಾಲೇಸ್ ರಸ್ತೆ, 23ರಲ್ಲಿ ಪ್ರಸನ್ನ ಟಾಕೀಸ್ ರಸ್ತೆಗಳನ್ನು ನಿರ್ಮಾಣ ಮಾಡಲು ಶಾಸಕ ವೀರೇಂದ್ರ ಪಪ್ಪಿ ಪೂಜೆ ನೆರವೇರಿಸಿದರು.

ಈ ವೇಳೆ ರಾಜ್ಯ ವಕ್ಛ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ, ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ತಾಜ್‍ಪೀರ್, ನಗರಸಭೆಯ ಮಾಜಿ ಅಧ್ಯಕ್ಷ ಮಂಜುನಾಥ್ ಗೊಪ್ಪೆ, ಸರ್ದಾರ್ ಆಹ್ಮದ್, ವೆಂಕಟೇಶ್ ಶಬ್ಬೀರ್ ಬಾಷಾ, ಆನ್ವರ್ ಬಾಷಾ, ಸೈಯದ್ ಹನೀಫ್, ಸೈಯದ್ ಖುದ್ದುಸ್, ಮುನ್ನಾ,ಸೈದು, ಮಸೀದಿಯ ಮುತ್ತುವಲ್ಲಿ ದಾದಾಪೀರ್ ಪಾಟೀಲ್, ಬಾಷಿಧ್‍ಖಾನ್ ಇದ್ದರು.

PREV

Recommended Stories

ಜಿಎಸ್ಟಿ ಸ್ಲ್ಯಾಬ್‌ ಕಡಿತದಿಂದ 2.5 ಲಕ್ಷ ಕೋಟಿ ರು. ನಷ್ಟ
ಯುದ್ಧಪೀಡಿತ ಉಕ್ರೇನಿಯರಿಗೆ ಆರ್ಟ್ ಆಫ್ ಲಿವಿಂಗ್ ಆಸರೆ