ಕನ್ನಡಪ್ರಭ ವಾರ್ತೆ ಕೋಲಾರಅನೇಕ ವರ್ಷದಿಂದ ನೆನಗುದಿಗೆ ಬಿದ್ದಿರುವ ಗುರುಭವನ ನಿರ್ಮಾಣ ಕಾರ್ಯ ತಮ್ಮ ಆದ್ಯತೆಯಾಗಿದ್ದು ಇದಕ್ಕಾಗಿ ಈಗಾಗಲೇ ಸಿಎಂ ವಿಶೇಷ ಅನುದಾನದಲ್ಲಿ ೨.೫೦ ಕೋಟಿ ರು. ಬಿಡುಗಡೆ ಮಾಡಿಸಿದ್ದು, ಕಾರ್ಯ ಸಮರೋಪಾದಿಯಲ್ಲಿ ನಡೆದಿದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು. ನಗರದಲ್ಲಿ ಜಿಲ್ಲಾ ಹಾಗೂ ತಾಲೂಕು ಸಂಘದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳನ್ನು ಅಭಿನಂದಿಸಿ ಅವರು ಮಾತನಾಡಿದರು. ಶಿಕ್ಷಕರ ಅರ್ಹತಾ ಪರೀಕ್ಷೆ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚೆ ನಡೆಸಿ, ಪರಿಹಾರ ಕಂಡು ಹಿಡಿಯಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು. ಸರ್ಕಾರಿ ಶಾಲೆಗಳನ್ನು ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ವಿದ್ಯಾರ್ಥಿಗಳ ದಾಖಲಾತಿ ಹಾಜರಾತಿ ಬಗ್ಗೆ ಗಮನಹರಿಸಿ ಎಂದರು. ಉತ್ತಮ ಶಿಕ್ಷಣ ನೀಡಲು ಸಹಕಾರಿಗಳಾಗುವ ಮೂಲಕ ಜಿಲ್ಲೆಯನ್ನು ಶೈಕ್ಷಣಿಕ ಪ್ರಗತಿಯತ್ತ ಕೊಂಡೊಯ್ಯುವಂತೆ ಶಿಕ್ಷಕರಿಗೆ ಶಾಸಕರು ಕರೆ ನೀಡಿದರು.ಎಂಎಲ್ಸಿ ಎಂ.ಎಲ್. ಅನಿಲ್ ಕುಮಾರ್ ಮಾತನಾಡಿ, ಈಗಾಗಲೇ ಹಿಂದಿನ ಸಂಸದ ಮುನಿಸ್ವಾಮಿ ರವರು ೨೫ ಲಕ್ಷ ಮತ್ತು ತಮ್ಮಿಂದ ಹತ್ತು ಲಕ್ಷ ನೀಡಿದ್ದು ಗುರುಭವನ ಕಾಮಗಾರಿ ಪ್ರಗತಿಪಥದತ್ತ ಕೊಂಡೊಯ್ಯವಂತೆ ಮತ್ತು ಗುರುಭವನ ಪೂರ್ಣಗೊಳಿಸಲು ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.ಈಗಾಗಲೇ ಶಿಕ್ಷಕರ ಸಂಘಕ್ಕೆ ನೂತನವಾಗಿ ಆಯ್ಕೆಯಾಗಿರುವ ಪದಾಧಿಕಾರಿಗಳು ಪ್ರಾಮಾಣಿಕವಾಗಿ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ, ಗುರುಭವನ ಶೀಘ್ರ ನಿರ್ಮಾಣಗೊಳ್ಳಲು ಮುಂಚೂಣಿಯಲ್ಲಿ ನಿಂತು ಕ್ರಮವಹಿಸಿ ಎಂದರು.ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಆರ್.ಅನಿಲ್ ಕುಮಾರ್ ಮಾತನಾಡಿ, ಶಾಲೆಯಲ್ಲಿ ಖಾಲಿರುವ ಹುದ್ದೆಗಳ ಶೀಘ್ರವೇ ತುಂಬುವ ಮೂಲಕ ಶೈಕ್ಷಣಿಕ ಪ್ರಗತಿಗೆ ನೆರವಾಗುವ ಅಗತ್ಯವಿದೆ. ಶಿಕ್ಷಕರಿಗೆ ಆನ್‌ಲೈನ್ ಸೇರಿ ಕೆಲವು ಕೆಲಸಗಳಿಂದ ಹೊರೆ ಕಡಿಮೆ ಮಾಡುವುದು. ಇದರೊಂದಿಗೆ ಶಿಕ್ಷಕರ ಸಮಸ್ಯೆ ಬಗೆಹರಿಸಲು ಸಂಘ ಕಟಿಬದ್ಧವಾಗಿ ದುಡಿಯತ್ತದೆ ಎಂದರು.ಬೆಂಗಳೂರು ಉತ್ತರ ವಿವಿ ಸಿಂಡಿಕೇಟ್ ಸದಸ್ಯ ಸಿಸಂದ್ರ ಗೋಪಾಲಗೌಡ, ಕೋಮುಲ್ ನಿರ್ದೇಶಕ ಚಿಂಚಿಮಲೆ ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುರಳಿ, ಸಂಘದ ಮುಖಂಡರಾದ ಸಿ. ನಾರಾಯಣಸ್ವಾಮಿ, ಸುರೇಶ್ ಕುಮಾರ್, ರಘುನಾಥರೆಡ್ಡಿ ಶ್ರೀನಿವಾಸಮೂರ್ತಿ, ರಾಜಮ್ಮ, ಕಾಂತಮ್ಮ, ವೆಂಕಟಚಲಪತಿಗೌಡ, ಸತೀಶ್ ಅಯಾಜ್, ರೇಷ್ಮಾ ತಲಾಖ್ ಖಾನಂ, ಮುನಿರಾಜ್ ಸುಬ್ರಮಣಿ ಭಾಗ್ಯಲಕ್ಷ್ಮಮ್ಮ, ಶಿವರಾಜ್, ಭಾರತಿ, ಸವಿತಾ, ಮಂಜುಳಾ, ಜಯಲಕ್ಷ್ಮಿ, ಸೋಮಶೇಖರ್ ಇದ್ದರು.
ಕೋಲಾರದಲ್ಲಿ ಜಿಲ್ಲಾ ಹಾಗೂ ತಾಲೂಕು ಸಂಘದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಆಯ್ಕೆಯಾದ ಪದಾಧಿಕಾರಿಗಳನ್ನು ಶಾಸಕ ಕೊತ್ತೂರು ಮಂಜುನಾಥ್ ಅವರು ಅಭಿನಂದಿಸಿದರು.