ಬೆಂಗಳೂರು : ವಿಶ್ವದಲ್ಲೇ ಮೊದಲ ಬಾರಿಗೆ ಭಾರೀ ವಾಹನಗಳಿಗೂ ಬ್ಯಾಟರಿ ಸ್ವಾಪಿಂಗ್‌ ತಂತ್ರಜ್ಞಾನ !

KannadaprabhaNewsNetwork |  
Published : Aug 30, 2024, 01:14 AM ISTUpdated : Aug 30, 2024, 07:31 AM IST
SUN | Kannada Prabha

ಸಾರಾಂಶ

ವಿಶ್ವದಲ್ಲೇ ಮೊದಲ ಬಾರಿಗೆ ದ್ವಿಚಕ್ರ ವಾಹನ ಮತ್ತು ಆಟೋಗಳಲ್ಲಿ ಬ್ಯಾಟರಿ ವಿನಿಮಯ (ಸ್ವಾಪಿಂಗ್‌) ಮಾಡುವ ರೀತಿಯಲ್ಲಿಯೇ ಭಾರೀ ವಾಹನಗಳಲ್ಲಿಯೂ ಆ ತಂತ್ರಜ್ಞಾನವನ್ನು ಸಂಶೋಧಿಸಲಾಗಿದ್ದು, ನಗರದಲ್ಲಿ ಆಯೋಜಿಸಲಾಗಿರುವ ಪ್ರವಾಸ್‌ 4.0 ಸಮಾವೇಶದಲ್ಲಿ ಪ್ರದರ್ಶನಗೊಳ್ಳುತ್ತಿದೆ.

 ಬೆಂಗಳೂರು :  ವಿಶ್ವದಲ್ಲೇ ಮೊದಲ ಬಾರಿಗೆ ದ್ವಿಚಕ್ರ ವಾಹನ ಮತ್ತು ಆಟೋಗಳಲ್ಲಿ ಬ್ಯಾಟರಿ ವಿನಿಮಯ (ಸ್ವಾಪಿಂಗ್‌) ಮಾಡುವ ರೀತಿಯಲ್ಲಿಯೇ ಭಾರೀ ವಾಹನಗಳಲ್ಲಿಯೂ ಆ ತಂತ್ರಜ್ಞಾನವನ್ನು ಸಂಶೋಧಿಸಲಾಗಿದ್ದು, ನಗರದಲ್ಲಿ ಆಯೋಜಿಸಲಾಗಿರುವ ಪ್ರವಾಸ್‌ 4.0 ಸಮಾವೇಶದಲ್ಲಿ ಪ್ರದರ್ಶನಗೊಳ್ಳುತ್ತಿದೆ.

ಭಾರತ ಬಸ್‌ ಮತ್ತು ಕಾರು ನಿರ್ವಾಹಕರ ಒಕ್ಕೂಟ (ಬಿಒಸಿಐ)ದಿಂದ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಲಾಗಿರುವ 3 ದಿನಗಳ ಭಾರತದ ಬಹುಮಾದರಿ ಸಾರಿಗೆ ಪ್ರದರ್ಶನ ಪ್ರವಾಸ್‌ 4.0ನಲ್ಲಿ ವಿವಿಧ ಸಂಶೋಧನೆಗಳು ಅನಾವರಣಗೊಂಡವು.

ಪ್ರಮುಖವಾಗಿ ಎಲೆಕ್ಟ್ರಿಕ್‌ ವಾಹನಗಳ ಪೂರೈಕೆದಾರರು ಹಾಗೂ ಉತ್ಪಾದನೆಗೆ ಅಗತ್ಯವಿರುವ ಮೂಲಸೌಕರ್ಯ ಒದಗಿಸುವ ಸನ್‌ ಮೊಬಿಲಿಟಿ ಹಾಗೂ ವೀರ ವಾಹನ ಸಂಸ್ಥೆಗಳು ಭಾರೀ ವಾಹನಗಳಿಗೆ ವಿಶ್ವದಲ್ಲೇ ಮೊದಲ ಮಾಡ್ಯುಲರ್‌ ಬ್ಯಾಟರಿ ವಿನಿಮಯ ತಂತ್ರಜ್ಞಾನವನ್ನು ಸಮಾವೇಶದಲ್ಲಿ ಪರಿಚಯಿಸಿದವು. ಅಂತರ ನಗರ ಮತ್ತು ಗ್ರಾಮಾಂತರ ಮಾರ್ಗಗಳಲ್ಲಿ ಸೇವೆ ನೀಡುವ ಎಲೆಕ್ಟ್ರಿಕ್‌ ಬಸ್‌ಗಳು, ಟ್ರಕ್‌ಗಳು ಪದೇಪದೆ ಚಾರ್ಜ್‌ ಮಾಡುವ ಬದಲು, ಬ್ಯಾಟರಿಯನ್ನು ಬದಲಿಸುವ ಮೂಲಕ ಸಂಚರಿಸುವ ಸಂಶೋಧನೆ ಇದಾಗಿದೆ. ಅದಕ್ಕೆ ಪೂರಕವಾಗಿ ಬ್ಯಾಟರಿ ವಿನಿಮಯ ವ್ಯವಸ್ಥೆ ಹೊಂದಿರುವ 10.5 ಮೀ ಉದ್ದದ ಬಸ್ಸನ್ನು ಸಮಾವೇಶದಲ್ಲಿ ಪರಿಚಯಿಸಲಾಗಿದೆ.

ನೂತನ ತಂತ್ರಜ್ಞಾನದ ಕುರಿತು ಪ್ರತಿಕ್ರಿಯಿಸಿರುವ ವೀರ ವಾಹನ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ರೆಡ್ಡಿ, ವಾಣಿಜ್ಯ ಬಸ್ ಮತ್ತು ಟ್ರಕ್‌ಗಳ ಸೇವೆಯನ್ನು ಮತ್ತಷ್ಟು ಉತ್ತಮವಾಗಿಸಲು ನೂತನ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ. ಇದರಿಂದ ಎಲೆಕ್ಟ್ರಿಕ್‌ ಭಾರೀ ವಾಹನಗಳು ಬ್ಯಾಟರಿ ಚಾರ್ಜ್‌ ಮಾಡಲು ಸಮಯ ತೆಗೆದುಕೊಳ್ಳುವುದನ್ನು ತಪ್ಪಿಸಬಹುದಾಗಿದೆ. ಬ್ಯಾಟರಿ ವಿನಿಮಯದಿಂದಾಗಿ ಭಾರೀ ವಾಹನಗಳು ಸೇವೆ ನೀಡುವ ಸಮಯದಲ್ಲಿ ಚಾರ್ಜ್‌ ಮಾಡಲು ಸಮಯ ವ್ಯರ್ಥ ಮಾಡುವುದನ್ನು ತಪ್ಪಿಸಬಹುದಾಗಿದೆ. ಶೀಘ್ರದಲ್ಲಿ ಮಾರುಕಟ್ಟೆಗೂ ಪರಿಚಯಿಸಲಾಗುತ್ತಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!