ಕನ್ನಡಪ್ರಭ ವಾರ್ತೆ ಗೌರಿಬಿದನೂರು
ನಗರದ ಹೊರವಲಯದಲ್ಲಿರುವ ತಾಲೂಕು ಆಡಳಿತ ಕಚೇರಿಯ ಸಭಾಂಗಣದಲ್ಲಿ ಬುಧವಾರ ರಾಣಿ ಚೆನ್ನಮ್ಮರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಿತ್ತೂರು ರಾಣಿ ಚೆನ್ನಮ್ಮನವರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ನಂತರ ಮಾತನಾಡಿದ ಅವರು, ಕಿತ್ತೂರು ರಾಣಿ ಚೆನ್ನಮ್ಮನ ಹೆಸರು ಧೈರ್ಯದ ಪ್ರತೀಕವಾಗಿದೆ, ಸಣ್ಣ ಸಾಮ್ರಾಜ್ಯದ ರಾಣಿಯಾಗಿದ್ದರೂ ದೇಶಕ್ಕಾಗಿ ಮಾಡಿದ ಹೋರಾಟದಲ್ಲಿ ಬ್ರಿಟಿಷರು ಹಲವು ಬಾರಿ ಜೈಲಿಗೆ ಕಳಿಸಿದರೂ ಎದೆಗುಂದದೆ ತುಂಬಾ ಧೈರ್ಯದಿಂದ ಬ್ರಿಟಿಷರನ್ನು ಎದುರಿಸಿ, ದೇಶ ಪ್ರೇಮ ಮೆರೆದಿದ್ದಾರೆ, ಇಂತಹ ಅಪ್ಪಟ ದೇಶ ಪ್ರೇಮಿಯ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.ಚೆನ್ನಮ್ಮಾಜೀ 1778ರ ಅಕ್ಟೋಬರ್ 23ರಂದು ಕರ್ನಾಟಕ ಬೆಳಗಾವಿ ಜಿಲ್ಲೆಯ ಕಾಕತಿ ಎಂಬ ಸಣ್ಣ ಹಳ್ಳಿಯಲ್ಲಿ ಲಿಂಗಾಯಿತ ಸಮುದಾಯದಲ್ಲಿ ಜನಿಸಿದರು. ಚಿಕ್ಕಂದಿನಿಂದಲೂ ಕೌಟುಂಬಿಕ ಸಂಪ್ರದಾಯದಂತೆ ಕತ್ತಿವರಸೆ, ಬಿಲ್ಲುಗಾರಿಕೆ ಮತ್ತು ಕುದುರೆ ಸವಾರಿಯಲ್ಲಿ ತರಬೇತಿಯನ್ನು ಪಡೆದಿದ್ದರು. ಕಿತ್ತೂರಿನ ರಾಣಿಚೆನ್ನಮ್ಮ ಎಂದು ಕರೆಯಲ್ಪಡುವ ಅವರು, ಬ್ರಿಟಿಷರ ವಿರುದ್ಧ ದಂಗೆಯೆದ್ದ ಮೊದಲ ಮಹಿಳಾ ಹೋರಾಟಗಾರರೆಂದು ಪ್ರಶಂಸಿಸಲ್ಪಟ್ಟಿದ್ದಾರೆ ಎಂದು ತಿಳಿಸಿದರು.
ಕೆ.ಎಚ್.ಪಿ. ಸಹಾಯಕ ಕಾರ್ಯನಿರ್ವಾಹಕ ಶ್ರೀನಿವಾಸಗೌಡ, ಪುಣ್ಯವತಿ ಜಯಣ್ಣ , ರೂಪಾ ಅನಂತರಾಜು, ರೈತಸಂಘದ ರಾಜಣ್ಣ, ಮಹೇಂದ್ರ, ಎಚ್ ಪಿ, ನಟರಾಜ್, ಶಿವಶಂಕರ ಆರಾಧ್ಯ, ಬಾಲಾಜಿ, ಚಂದ್ರಶೇಖರ್, ಅಬ್ದುಲ್, ರವಿಕುಮಾರ್, ಮಲ್ಲಿಕಾರ್ಜುನ್, ತಾಲೂಕು ಆಡಳಿ ಕಚೇರಿಯ ಸಿಬ್ಬಂದಿ ಪಾಲ್ಗೊಂಡಿದ್ದರು.