ಚನ್ನಗಿರಿ: ತಾಲೂಕಿನ ಇತಿಹಾಸ ಪ್ರಸಿದ್ಧ ಸಂತೆಬೆನ್ನೂರು ಗ್ರಾಮದಲ್ಲಿರುವ ಪುಷ್ಕರಣಿಯಲ್ಲಿ ಮೂರ್ನಾಲ್ಕು ದಿನಗಳಿಂದ ಮೀನುಗಳು ಸಾವನ್ನಪ್ಪುತ್ತಿವೆ. ಸುಂದರವಾದ ಈ ಪುಷ್ಕರಣಿ ವೀಕ್ಷಿಸಲು ನಾಡಿನ ವಿವಿಧ ಪ್ರದೇಶಗಳಿಂದ ಪ್ರವಾಸಿಗರು ಬರುತ್ತಾರೆ.
ಪುಷ್ಕರಣಿಯ ಜಲರಾಶಿ ಮಧ್ಯದಲ್ಲಿ ಆಕರ್ಷಣೀಯ ವಸಂತ ಮಂಟಪವಿದೆ. ಅದರಲ್ಲಿ ಅಧಿಕ ಸಂಖ್ಯೆಯಲ್ಲಿ ಪಾರಿವಾಳಗಳು ವಾಸವಿವೆ. ಇವುಗಳ ತ್ಯಾಜ್ಯದಿಂದ ಏನಾದರೂ ನೀರು ಮಲೀನವಾಗಿರ ಬಹುದೇ ಅಥವಾ ಬರುವ ಪ್ರವಾಸಿಗರು ಮೀನಿಗೆ ಹಾಕುವ ತಿನಿಸುಗಳಿಂದ ಸಾವು ಕಂಡಿವಿಯೇ ಎಂಬ ಶಂಕೆ ಗ್ರಾಮಸ್ಥರು, ಪ್ರವಾಸಿಗರಲ್ಲಿ ವ್ಯಕ್ತವಾಗುತ್ತಿದೆ.
ಪೋಟಾಶಿಯಂ ಪರರ್ಮಾಗ್ನೆಟ್ ಔಷಧಿ:ಈ ಬಗ್ಗೆ ಜಿಲ್ಲಾ ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ ಅಣ್ಣಪ್ಪ ಮತ್ತು ವಾಯು ಮಾಲಿನ್ಯ ನಿಯಂತ್ರಣಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪುಷ್ಕರಣಿ ನೀರಿನಲ್ಲಿ ಪೋಷಕಾಂಶ ಹಾಗೂ ಆಮ್ಲಜನಕದ ಕೊರತೆಯಾಗಿದೆ. ಪೋಟಾಶಿಯಂ ಪರರ್ಮಾಗ್ನೆಟ್ ಔಷಧಿಯನ್ನು 7 ದಿನಗಳ ಕಾಲ ಪುಷ್ಕರಣಿ ನೀರಿಗೆ ಸಿಂಪರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
- - --5ಕೆಸಿಎನ್‌ಜಿ3: