ರಾತ್ರಿ ವೇಳೆ ಮೀನುಗಾರಿಕೆ ಮಾಡುವಾಗ ಅಥವಾ ಲಂಗರು ಹಾಕಿರುವಾಗ ನೆವಿಗೇಷನಲ್ ಲೈಟ್ಸ್ ಅನ್ನು ಆನ್ ಮಾಡಿಕೊಳ್ಳಬೇಕು. ರಕ್ಷಣಾ ಪಡೆಯವರು ತಪಾಸಣೆ ಮಾಡುವಾಗ ಸಹಕರಿಸಬೇಕು ಹಾಗೂ ಎಲ್ಲರೂ ಕ್ಯೂಆರ್ ಕೋಡೆಡ್ ಆಧಾರ್ ಕಾರ್ಡ್, ನೋಂದಣಿ ಪ್ರಮಾಣ ಪತ್ರ, ಮೀನುಗಾರಿಕೆ ಪರವಾನಗಿ ಮತ್ತು ಇನ್ನಿತರ ದಾಖಲಾತಿಗಳನ್ನು ಇಟ್ಟುಕೊಳ್ಳಬೇಕು. ಸಂದಿಗ್ಧ ಪರಿಸ್ಥಿತಿಯಲ್ಲಿ ಮೀನುಗಾರಿಕೆಗೆ ತೆರಳದಿರುವುದು ಸೂಕ್ತ ಎಂದು ಉಡುಪಿ ಜಿಲ್ಲಾ ಮೀನುಗಾರಿಕಾ ಇಲಾಖೆ ಜಂಟಿ ನಿರ್ದೇಶಕ ವಿವೇಕ್ ಆರ್. ಮೀನುಗಾರರಿಗೆ ಸೂಚನೆ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಮೀನುಗಾರರು ಸಮುದ್ರದಲ್ಲಿ ಅನುಮಾನಾಸ್ಪದ ಬೋಟುಗಳ ಚಲನವಲನ ಹಾಗೂ ಅಪರಿಚಿತ ವ್ಯಕ್ತಿಗಳ ಬಗ್ಗೆ ತೀವ್ರ ನಿಗಾ ಇಡಬೇಕು ಮತ್ತು ತಕ್ಷಣ ಈ ಕುರಿತು ರಕ್ಷಣಾ ಸಿಬ್ಬಂದಿಗೆ (ಭಾರತೀಯ ನೌಕಪಡೆ, ಕೋಸ್ಟ್ ಗಾರ್ಡ್, ಕರಾವಳಿ ಕಾವಲು ಪೊಲೀಸ್) ಮಾಹಿತಿ ನೀಡಬೇಕು ಎಂದು ಉಡುಪಿ ಜಿಲ್ಲಾ ಮೀನುಗಾರಿಕಾ ಇಲಾಖೆ ಜಂಟಿ ನಿರ್ದೇಶಕ ವಿವೇಕ್ ಆರ್. ಮೀನುಗಾರರಿಗೆ ಸೂಚನೆ ನೀಡಿದ್ದಾರೆ.ಸಮುದ್ರದಲ್ಲಿರುವ ನಡುಗುಡ್ಡೆಗಳ ಮೇಲೆ ಜನರು ಕಾಣಿಸಿಕೊಂಡಲ್ಲಿ ತಕ್ಷಣ ಮಾಹಿತಿ ನೀಡಬೇಕು. ಇಲಾಖೆಯಿಂದ ಅಳವಡಿಸಿದ ಟ್ರಾನ್ಸ್‌ಪಂಡರ್‌ಗಳನ್ನು ಚಾಲನೆಯಲ್ಲಿ ಇಟ್ಟುಕೊಳ್ಳಬೇಕು ಹಾಗೂ ನಭಮಿತ್ರ ಆ್ಯಪ್ ಮುಖಾಂತರ ಮಾಹಿತಿ ನೀಡಬೇಕು. ಸುರಕ್ಷತೆ ಹಾಗೂ ಭದ್ರತೆಯ ಹಿತದೃಷ್ಟಿಯಿಂದ ಸಮುದ್ರದಲ್ಲಿ 2-3 ಬೋಟುಗಳು ಗುಂಪಿನಲ್ಲಿ ಮೀನುಗಾರಿಕೆ ಮಾಡುವುದು ಸೂಕ್ತವಾಗಿದೆ ಎಂದವರು ಸಲಹೆ ನೀಡಿದ್ದಾರೆ.
ರಾತ್ರಿ ವೇಳೆ ಮೀನುಗಾರಿಕೆ ಮಾಡುವಾಗ ಅಥವಾ ಲಂಗರು ಹಾಕಿರುವಾಗ ನೆವಿಗೇಷನಲ್ ಲೈಟ್ಸ್ ಅನ್ನು ಆನ್ ಮಾಡಿಕೊಳ್ಳಬೇಕು. ರಕ್ಷಣಾ ಪಡೆಯವರು ತಪಾಸಣೆ ಮಾಡುವಾಗ ಸಹಕರಿಸಬೇಕು ಹಾಗೂ ಎಲ್ಲರೂ ಕ್ಯೂಆರ್ ಕೋಡೆಡ್ ಆಧಾರ್ ಕಾರ್ಡ್, ನೋಂದಣಿ ಪ್ರಮಾಣ ಪತ್ರ, ಮೀನುಗಾರಿಕೆ ಪರವಾನಗಿ ಮತ್ತು ಇನ್ನಿತರ ದಾಖಲಾತಿಗಳನ್ನು ಇಟ್ಟುಕೊಳ್ಳಬೇಕು. ಸಂದಿಗ್ಧ ಪರಿಸ್ಥಿತಿಯಲ್ಲಿ ಮೀನುಗಾರಿಕೆಗೆ ತೆರಳದಿರುವುದು ಸೂಕ್ತ ಎಂದು ಅವರು ಮೀನುಗಾರರಿಗೆ ಸೂಚನೆ ನೀಡಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.