ಫಿಟ್ ಇಂಡಿಯಾ-ಫಿಟ್ ಯಲಹಂಕ ವಾಕಥಾನ್

KannadaprabhaNewsNetwork |  
Published : Jul 21, 2025, 01:30 AM IST
ಯಲಹಂಕ  | Kannada Prabha

ಸಾರಾಂಶ

ಯಲಹಂಕ ಕೆರೆ ಆವರಣದಲ್ಲಿ "ಫಿಟ್ ಇಂಡಿಯಾ-ಫಿಟ್ ಯಲಹಂಕ " ಘೋಷವಾಕ್ಯದಡಿ ಹಮ್ಮಿಕೊಂಡಿದ್ದ ವಾಕಥಾನ್‌ನಲ್ಲಿ ಶಾಸಕ ಎಸ್.ಆರ್.ವಿಶ್ವನಾಥ್, ಸಿಂಗನಾಯಕನಹಳ್ಳಿ ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷೆ ಡಾ.ವಾಣಿಶ್ರೀ ವಿಶ್ವನಾಥ್, ಬಿಜೆಪಿ ಮುಖಂಡರಾದ ಅಲೋಕ್ ವಿಶ್ವನಾಥ್, ಸಾರ್ವಜನಿಕರು ಪಾಲ್ಗೊಂಡಿದ್ದರು.

ಕನ್ನಡಪ್ರಭ ವಾರ್ತೆ ಯಲಹಂಕ

ಶಾಸಕ ಎಸ್.ಆರ್.ವಿಶ್ವನಾಥ್ ಅವರ ಜನ್ಮದಿನದ ಪ್ರಯುಕ್ತ ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಉದ್ದೇಶದಿಂದ ಯಲಹಂಕ ಕೆರೆ ಆವರಣದಲ್ಲಿ "ಫಿಟ್ ಇಂಡಿಯಾ-ಫಿಟ್ ಯಲಹಂಕ " ಘೋಷವಾಕ್ಯದಡಿ ಹಮ್ಮಿಕೊಂಡಿದ್ದ ವಾಕಥಾನ್‌ನಲ್ಲಿ 2 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡು ಯಶಸ್ವಿಗೊಳಿಸಿದರು.

ಭಾನುವಾರ ಬೆಳಗ್ಗೆ 6 ಗಂಟೆಗೆ ವಿಶ್ವನಾಥ್ ಅವರ ನೇತೃತ್ವದಲ್ಲಿ ಆರಂಭವಾದ ವಾಕಥಾನ್ 7:30ರವರೆಗೂ ನಡೆಯಿತು. ಈ ವೇಳೆ ಮಾತನಾಡಿದ ಶಾಸಕರು, ಕೆರೆಯ ಸಂರಕ್ಷಣೆ ಮತ್ತು ಉತ್ತಮ ಆರೋಗ್ಯದ ಧ್ಯೇಯಕ್ಕಾಗಿ ವಾಕಥಾನ್ ಆಯೋಜಿಸಲಾಗಿದೆ. ಹತ್ತಾರು ಕೋಟಿ ಅನುದಾನದಲ್ಲಿ‌ ಯಲಹಂಕ ಕೆರೆಯನ್ನು ಅಭಿವೃದ್ಧಿಪಡಿಸಿದ್ದು, ಕೆರೆಯ ಸೊಬಗು ಜನರನ್ನು ಕೈಬೀಸಿ ಕರೆಯುವಂತಿದೆ. ಇಂತಹ ಅಪೂರ್ವವಾದ ಕೆರೆಯನ್ನು ಜನತೆ ವೀಕ್ಷಿಸಬೇಕು, ತನ್ಮೂಲಕ ಕೆರೆಯ ಸಂರಕ್ಷಣೆಗೆ ಕಂಕಣಬದ್ಧರಾಗಬೇಕು ಎಂದರು.

ಜನ್ಮದಿನಕ್ಕೆ ಹಲವು ಕಾರ್ಯಗಳು:

ಜು.24ರಂದು ನನ್ನ ಜನ್ಮದಿನದ ಪ್ರಯುಕ್ತ ವಿಶ್ವವಾಣಿ ಫೌಂಡೇಶನ್, ಬಿಜೆಪಿ ಯುವ ಮೋರ್ಚಾ, ಎಸ್‌ಸಿ ಮೋರ್ಚಾ ಯಲಹಂಕ ನಗರ ಹಾಗೂ ಗ್ರಾಮಾಂತರ ಮಂಡಲ ಮತ್ತು ರಾಷ್ಟ್ರೋತ್ಥಾನ ಪರಿಷತ್, ನಾರಾಯಣ ಹೃದಯಾಲಯ, ಲಯನ್ಸ್ ಕ್ಲಬ್, ಬಿಜೆಪಿ ವೈದ್ಯಕೀಯ ಪ್ರಕೋಷ್ಠ, ಸಪ್ತಗಿರಿ ಆಸ್ಪತ್ರೆ, ನೇತ್ರಧಾಮ, ಕೃಷ್ಣ ನೇತ್ರಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಸಿಂಗನಾಯಕನಹಳ್ಳಿಯ ರಮಡ ಹೋಟೆಲ್‌ನಲ್ಲಿ ಬೃಹತ್ ರಕ್ತದಾನ ಶಿಬಿರ, ಉಚಿತ ಆರೋಗ್ಯ ಮತ್ತು ನೇತ್ರ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಹಾಗೆಯೇ ಶಾಲಾ ಮಕ್ಕಳಿಗೆ 1 ಲಕ್ಷ ಉಚಿತ ನೋಟ್ ಪುಸ್ತಕಗಳ ವಿತರಣೆ, ವಿಶೇಷಚೇತರಿಗೆ 30 ತ್ರಿಚಕ್ರ ವಾಹನಗಳ ವಿತರಣೆ, ಪತ್ರಿಕಾ ವಿತರಕರಿಗೆ 50 ಬೈಸಿಕಲ್ ವಿತರಣೆ, ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.

ವಾಕಥಾನ್‌ನಲ್ಲಿ ಸಿಂಗನಾಯಕನಹಳ್ಳಿ ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷೆ ಡಾ.ವಾಣಿಶ್ರೀ ವಿಶ್ವನಾಥ್, ಬಿಜೆಪಿ ಮುಖಂಡರಾದ ಅಲೋಕ್ ವಿಶ್ವನಾಥ್, ದಿಬ್ಬೂರು ಜಯಣ್ಣ, ಮುರಾರಿರಾಮು, ವಿ.ಪವನ್ ಕುಮಾರ್, ಈಶ್ವರ್, ವಿಶ್ವನಾಥಪುರ ಮಂಜುನಾಥ್, ವಿ.ವಿ.ರಾಮಮೂರ್ತಿ, ನರಸಿಂಹಮೂರ್ತಿ, ಮು.ಕೃಷ್ಣಮೂರ್ತಿ, ಎ.ಎಸ್.ರಾಜ, ಈಶ್ವರಪ್ಪ, ಡಾ.ಶಶಿಕುಮಾರ್, ಎ.ಸಿ.ಮುನಿಕೃಷ್ಣಪ್ಪ, ಟಿ.ಮುನಿರೆಡ್ಡಿ, ಎಸ್.ಜಿ.ಪ್ರಶಾಂತ್ ರೆಡ್ಡಿ, ಪಕ್ಷದ ಕಾರ್ಯಕರ್ತರು, ವಿವಿಧ ಸಂಘಸಂಸ್ಥೆಗಳ ಮುಖಂಡರು, ಸಾರ್ವಜನಿಕರು ಪಾಲ್ಗೊಂಡಿದ್ದರು.

PREV

Latest Stories

ಜಾಗತಿಕ ತಂತ್ರಜ್ಞಾನ ಶ್ರೇಷ್ಠತೆಗೆ ನೋವಿಗೋ ಸೊಲ್ಯೂಷನ್ಸ್
ಡಿಸಿ ಖಾತೆಯಲ್ಲಿ ಬಳಕೆಯಾಗದ ಮೊತ್ತ ವಾಪಸಿಗೆ ಗಡಿ ಪ್ರಾಧಿಕಾರ ಸಿಎಸ್‌ಗೆ ದೂರು
ಜಲ ಜೀವನ್ ಮಿಷನ್, ನರೇಗಾ ಕಾಮಗಾರಿ ಪರಿಶೀಲನೆ