ಜಾನುವಾರುಗಳ ಮೇವಿಗೆ ನಾಡಬಾಂಬ್ ಇಡುತ್ತಿದ್ದ ಐವರು ಆರೋಪಿಗಳ ಸೆರೆ

KannadaprabhaNewsNetwork |  
Published : Apr 04, 2025, 12:49 AM ISTUpdated : Apr 04, 2025, 12:44 PM IST
ಜಾನುವಾರುಗಳ ಮೇವಿಗೆ ನಾಡಬಾಂಬ್ ಇಡುತ್ತಿದ್ದ ಐವರು ಆರೋಪಿಗಳ | Kannada Prabha

ಸಾರಾಂಶ

ಜಮೀನುಗಳಲ್ಲಿ ಮೇವು ಮೇಯಲು ತೆರಳುತ್ತಿದ್ದ ಜಾನುವಾರುಗಳ ಮೇವಿಗೆ ನಾಡಬಾಂಬ್ ಇಡುತ್ತಿದ್ದ ಐವರು ಆರೋಪಿಗಳನ್ನು ರಾಮಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

  ಹನೂರು : ಜಮೀನುಗಳಲ್ಲಿ ಮೇವು ಮೇಯಲು ತೆರಳುತ್ತಿದ್ದ ಜಾನುವಾರುಗಳ ಮೇವಿಗೆ ನಾಡಬಾಂಬ್ ಇಡುತ್ತಿದ್ದ ಐವರು ಆರೋಪಿಗಳನ್ನು ರಾಮಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿ ಗ್ರಾಮದ ನಾರಾಯಣಸ್ವಾಮಿ, ಶಿವಣ್ಣ ಹನೂರು ತಾಲೂಕಿನ ಚಿಕ್ಕಲತ್ತೂರು ಗ್ರಾಮದ ಜಡೆಯಪ್ಪ,ಈತನ ಮಗ ರುದ್ರ, ಭದ್ರಯ್ಯನಹಳ್ಳಿ ಗ್ರಾಮದ ಶ್ರೀರಂಗಶೆಟ್ಟಿ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತ ನಾರಾಯಣಸ್ವಾಮಿ ರವರಿಂದ 43 ಜೀವಂತ ನಾಡ ಗುಂಡುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಜಮೀನುಗಳಲ್ಲಿ ಮೇವು ಮೇಯಲು ತೆರಳುತ್ತಿದ್ದ ಜಾನುವಾರುಗಳನ್ನು ಗುರಿಯಾಗಿಸಿಕೊಂಡು ಮೇವಿನ ಮಧ್ಯೆ ನಾಡ ಬಾಂಬ್ ಇಟ್ಟು ತೆರಳುತ್ತಿದ್ದರು. ಹಸುಗಳು ಮೇವು ಮೇಯುವಾಗ ನಾಡ ಬಾಂಬ್ ಗಳನ್ನು ಮೇವು ಎಂದು ಜಿಗಿಯುವಾಗ ಸ್ಫೋಟಗೊಂಡು ಜಾನುವಾರುಗಳ ಮುಖ ಛಿದ್ರ ವಾಗುತ್ತಿತ್ತು. ಮೂಕ ಪ್ರಾಣಿಗಳು ನೋವು ತಾಳಲಾರದೆ, ಮೇವು ಮೇಯಲಾಗದೆ ನರಳಾಡಿ ಪ್ರಾಣ ಬಿಡುತ್ತಿದ್ದವು.

ಈ ಸಂಬಂಧ ಹನೂರು ಹಾಗೂ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ತಂಡ ರಚನೆ

ಜಾನುವಾರುಗಳ ಮುಖ ಸಿಡಿದು ಮೃತಪಡುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ. ಟಿ ಕವಿತಾರವರು ವಿಶೇಷ ತಂಡ ರಚನೆ ಮಾಡಿ ತಪ್ಪಿತಸ್ಥರ ಬಂಧನಕ್ಕೆ ಬಲೆ ಬೀಸಲಾಗಿತ್ತು. ಈ ಸಂಬಂಧ ಫೆಬ್ರವರಿ 25ರಂದು ನಾಡ ಬಾಂಬ್ ಇಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು, ಜೀವಂತ ಇಪ್ಪತ್ತು ನಾಡ ಬಾಂಬ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

ಇದಾದ ನಂತರವೂ ಹಲವು ಪ್ರಕರಣ ನಡೆದಿತ್ತು ಈ ಹಿನ್ನೆಲೆ ಎಸ್ ಪಿ ಡಾ. ಬಿ. ಟಿ. ಕವಿತಾ ಹಾಗೂ ಕೊಳ್ಳೇಗಾಲ ಉಪ ವಿಭಾಗದ ಡಿವೈಎಸ್ಪಿ ಧರ್ಮೇಂದ್ರ ಮಾರ್ಗದರ್ಶನದಲ್ಲಿ ರಾಮಾಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಚಿಕ್ಕ ರಾಜ ಶೆಟ್ಟಿ, ಸಬ್ ಇನ್ಸ್ಪೆಕ್ಟರ್ ಲೋಕೇಶ್ ಹಾಗೂ ಸಿಬ್ಬಂದಿಗಳು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇಂತಹ ಪ್ರಕರಣಗಳು ನಡೆಯದಂತೆ ಎಚ್ಚರಿಕೆ: ತಾಲೂಕಿನಲ್ಲಿ ಹಲವಾರು ನಾಡ ಬಾಂಬ್ ಗುಂಡುಗಳನ್ನು ಇಟ್ಟು ವಿವಿಧ ಗ್ರಾಮಗಳಲ್ಲಿ ಜಾನುವಾರುಗಳ ಬಾಯಿಮುಖ ಛಿದ್ರಗೊಂಡು ಪ್ರಾಣಿಗಳು ನರಳಿ ಸಾವನ್ನಪ್ಪುತ್ತಿದ್ದವು ಹೀಗಾಗಿ ಕೌರಳ್ಳಿ ಗ್ರಾಮದಲ್ಲಿ ನಡೆದ ಘಟನೆ ಯಿಂದ ಗ್ರಾಮದಲ್ಲಿ ಜಾಗೃತಿ ಸಭೆ ನಡೆಯುವ ವೇಳೆಯಲ್ಲಿಯೇ ನಡೆದ ಘಟನೆಯನ್ನು ಹೋಲಿಸ ಇಲಾಖೆ ಗಂಭೀರವಾಗಿ ಪರಿಗಣಿಸಿ 24 ಗಂಟೆಗಳ ಮುನ್ನವೇ ಐವರು ಆರೋಪಿಗಳನ್ನು ನಾಡ ಬಾಂಬುಗಳ ಸಮೇತ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವಲ್ಲಿ ಯಶಸ್ವಿಯಾಗಿರುವುದರಿಂದ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಜೊತೆಗೆ ಇಂತಹ ಪ್ರಕರಣಗಳು ನಡೆದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ