ಕನ್ನಡಪ್ರಭ ವಾರ್ತೆ ಅರಸೀಕೆರೆ
ಅಂಕುರಾರ್ಪಣೆಯೊಂದಿಗೆ ಮೂಲ ಶ್ರೀ ಕರಿಯಮ್ಮ ದೇವಸ್ಥಾನದಲ್ಲಿ ರುದ್ರಾಭಿಷೇಕ, ಮಹಾಪೊಜೆ ನಂತರ ಶ್ರೀ ಕರಿಯಮ್ಮ ನವರು ಮಧುವಣಗಿತ್ತಿಯಾಗಲು ಪಕ್ಕದ ತಾಲೂಕು ಕಡೂರಿನ ಬಿಟ್ಟೇನಹಳ್ಳಿ ಗ್ರಾಮಕ್ಕೆ ತೆರಳಿ ಬೆಳಿಗ್ಗೆ ಉತ್ಸವದೊಂದಿಗೆ ಪುರ ಪ್ರವೇಶ, ಶ್ರೀ ಸುಕ್ಷೇತ್ರ ಕೆರೆಗೊಡಿ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿರವರ ಪಾದಪೂಜೆ ಅದ್ಧೂರಿ ಸ್ವಾಗತ, ಬೇವಿನ ಸೀರೆ, ಬಾಯಿಬೀಗ, ಹರಕೆ ಸೇವೆ, ಚೋಮನ ಕುಣಿತ,ಊರಿನ ಮೂರು ಕಣ್ಣು ಮಾರಮ್ಮ ದೇವಸ್ಥಾನದಿಂದ ಶ್ರೀ ಕರಿಯಮ್ಮ ದೇವಿ ದೇವಾಲಯದವರೆಗೆ ಉತ್ಸವದ ನಂತರ ರಾತ್ರಿ ಶ್ರೀ ವೀರಭದ್ರೇಶ್ವರ ಸ್ವಾಮಿಯವರ ಉಯ್ಯಾಲೆ ಉತ್ಸವ ಜರುಗಲಿದೆ.
ಏಪ್ರಿಲ್ 24ರಂದು ಶ್ರೀ ಮೂರು ಕಣ್ಣು ಮಾರಮ್ಮ ದೇವಿಯ ನೇತೃತ್ವದಲ್ಲಿ ಹಾಗೂ ಶ್ರೀ ಚೌಡಮ್ಮನೊಂದಿಗೆ ಅದ್ಧೂರಿ ರಥೋತ್ಸವ ನಡೆಯುತ್ತದೆ. ಅಂದು ರಾತ್ರಿ ಶ್ರೀ ಕರಿಯಮ್ಮ ದೇವಿಗೆ ಶ್ರೀ ಮೂರು ಕಣ್ಣು ಮಾರಮ್ಮ ಅವರಿಂದ ಕತ್ತಿ ಮೇಲೆ ಮಹಾಮಂಗಳಾರತಿ ನಡೆಯುತ್ತಾರೆ. ಏಪ್ರಿಲ್ 25ರಂದು ಶ್ರೀ ವೀರಭದ್ರೇಶ್ವರ ಸ್ವಾಮಿಯವರ ರಥೋತ್ಸವ ಕಾರ್ಯಕ್ರಮ ನೆಡೆದು ಸಂಪನ್ನಗೊಳ್ಳುತ್ತದೆ. ಪ್ರತಿನಿತ್ಯ ಪೂಜೆ, ಅಭಿಷೇಕ, ದಾಸೋಹ, ನಡೆಯುತ್ತದೆ. ಈ ಜಾತ್ರಾ ಮಹೋತ್ಸವಕ್ಕೆ ಭಕ್ತರು ಆಗಮಿಸಿ ಪುನೀತರಾಗುತ್ತಾರೆ.