ಐದು ಗ್ಯಾರಂಟಿ ಯೋಜನೆಗಳೂ ಯಶಸ್ವಿ: ದೇಶಪಾಂಡೆ

KannadaprabhaNewsNetwork |  
Published : Sep 06, 2024, 01:00 AM IST
ಎಚ್05.9-ಡಿಎನ್‌ಡಿ1: 5ಗ್ಯಾರಂಟಿಗಳ ಕಚೇರಿ ಉದ್ಘಾಟನೆ | Kannada Prabha

ಸಾರಾಂಶ

ಪಂಚ ಯೋಜನೆಗಳು ರಾಜ್ಯದ ಪ್ರತಿಯೊಬ್ಬ ಪ್ರಜೆಗೂ ತಲುಪಿಸುವ ನಿಟ್ಟಿನಲ್ಲಿ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಗ್ಯಾರಂಟಿ ಪ್ರಾಧಿಕಾರ ಸಮಿತಿಗಳನ್ನು ರಚಿಸಲಾಗಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.

ದಾಂಡೇಲಿ: ರಾಜ್ಯದ ಜನತೆಗೆ ಗ್ಯಾರಂಟಿ ಯೋಜನೆಗಳನ್ನು ನೀಡುವಲ್ಲಿ ಸರ್ಕಾರ ಯಶಸ್ವಿಯಾಗಿದೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.

ಇಲ್ಲಿಯ ನಗರಸಭೆಯ ಕಟ್ಟಡದಲ್ಲಿ ಗುರುವಾರ ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಐದು ಗ್ಯಾರಂಟಿಗಳು ಯಶಸ್ವಿ ಯೋಜನೆಗಳ ಹೆಚ್ಚಿನ ಸೇವೆಗಾಗಿ ದಾಂಡೇಲಿ ತಾಲೂಕು ಮಟ್ಟದಲ್ಲಿ ಗ್ಯಾರಂಟಿಗಳ ಕಚೇರಿ ಆರಂಭಿಸಲಾಗಿದೆ. ಪಂಚ ಯೋಜನೆಗಳು ರಾಜ್ಯದ ಪ್ರತಿಯೊಬ್ಬ ಪ್ರಜೆಗೂ ತಲುಪಿಸುವ ನಿಟ್ಟಿನಲ್ಲಿ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಗ್ಯಾರಂಟಿ ಪ್ರಾಧಿಕಾರ ಸಮಿತಿಗಳನ್ನು ರಚಿಸಲಾಗಿದೆ ಎಂದರು.

ಅನುಕೂಲಸ್ಥರು, ಸ್ಥಿತಿವಂತರು, ಆರ್ಥಿಕವಾಗಿ ಸಾಧಾರಣ ಇದ್ದವರು ಈ ಗ್ಯಾರಂಟಿಗಳನ್ನು ಪಡೆಯದೇ ಇದ್ದು, ಅತಿ ಅವಶ್ಯವಿರುವ ಜನರು, ಬಡವರು, ಕೂಲಿಕಾರ್ಮಿಕರು, ಬಡ ವೃದ್ಧರು ಮುಂತಾದವರಿಗೆ ಸಿಗುವಂತಾದರೆ ಅದರ ಉಪಯೋಗ ಸರಿಯಾಗಿದೆ ಎಂದುಕೊಳ್ಳಬೇಕು. ಉಳ್ಳವರೇ ಈ ಗ್ಯಾರಂಟಿಗಳ ಸೌಲಭ್ಯ ಅನುಭವಿಸದೆ ಹಿಂದೆ ಸರಿಯಬೇಕು ಎಂದು ಕರೆ ನೀಡಿದರು.

ನಮ್ಮ ಮುಖ್ಯಮಂತ್ರಿಗಳ ಕನಸಿನಂತೆ ೫ ಗ್ಯಾರಂಟಿಗಳ ಯಶಸ್ವಿಯಾಗಿ ನಡೆಯುತ್ತಿದ್ದು, ಅದು ಇನ್ನು ಹೆಚ್ಚಿನ ಜನರಿಗೆ ಮುಟ್ಟಲಿ ಎಂಬ ಕಾರಣಕ್ಕೆ ಸಮಿತಿಗಳನ್ನು ಮಾಡಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ತಹಸೀಲ್ದಾರ ಶೈಲೇಶ ಪರಮಾನಂದ, ನಗರಸಭೆಯ ಪೌರಾಯುಕ್ತ ರಾಜಾರಾಮ ಪವಾರ, ನಗರಸಭಾ ಸದಸ್ಯರು, ದಾಂಡೇಲಿ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ, ಗ್ಯಾರಂಟಿಗಳ ಸಮಿತಿ ಅಧ್ಯಕ್ಷ ರಿಯಾಜ ಅಹ್ಮದ ಬಾಬುಸಾಬ ಸಯ್ಯದ, ಸಮಿತಿ ಸದಸ್ಯರಾದ ರೇಷ್ಮಾ ಇಮ್ತಿಯಾಜ್‌ ಮೆಟ್ಗುಡ್, ಸಿದ್ಧಾರೂಢ, ಛಾಯಾ, ಜಾನು ಕೊಕರೆ, ರಮೇಶ ಕೊಡಟ್ಟಿ, ರವಿಕುಮಾರ ಚಾಟ್ಲಾ, ದೇವೇಂದ್ರಪ್ಪ, ಅಶೋಕ ನಾಯ್ಕ, ಅಡಿವೆಪ್ಪ ಭದ್ರಕಾಳಿ, ವೀರೇಶ ಮಲ್ಲಪ್ಪ, ದಾವಲ್‌ಸಾಬ್‌ ಕಾಶಿಮ್‌ಸಾಬ್‌, ಚಂದ್ರು ಉಪಸ್ಥಿತರಿದ್ದರು.ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ: ದೇಶಪಾಂಡೆ

ದಾಂಡೇಲಿ: ರಾಜ್ಯದಲ್ಲಿ ಮುಖ್ಯಮಂತ್ರಿ ಖುರ್ಚಿ ಖಾಲಿ ಇಲ್ಲ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ತಿಳಿಸಿದರು.ಗುರುವಾರ ನಗರದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಅವರು, ಪ್ರತಿಯೊಬ್ಬರೂ ಜೀವನದಲ್ಲಿ ಗುರಿ ಇಟ್ಟುಕೊಳ್ಳುವುದು ಸಹಜ. ರಾಜ್ಯದಲ್ಲಿ ಈಗ ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದಾರೆ. ಹಾಗಿರುವಾಗ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ