ಕನ್ನಡಪ್ರಭ ವಾರ್ತೆ ಪಾಂಡವಪುರ
ಭಾರತೀಯರ ಕಲ್ಪನೆಯಲ್ಲಿ ಗುರುಪರಂಪರೆ ಬಹಳ ಶಕ್ತಿಯುತವಾಗಿ ಪುರಾಣ ಕಾಲದಿಂದಲೂ ಬೆಳೆದುಬಂದಿದೆ ಎಂದು ಉಪನ್ಯಾಸಕ ಡಾ.ಎಚ್.ಎಸ್.ಸತ್ಯನಾರಾಯಣ ಹೇಳಿದರು.ಪಟ್ಟಣದ ಟಿಎಪಿಸಿಎಂಎಸ್ ರೈತಸಭಾಂಗಣದಲ್ಲಿ ತಾಲೂಕು ಆಡಳಿತ, ಶಿಕ್ಷಣ ಇಲಾಖೆಯಿಂದ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಪ್ರಧಾನ ಭಾಷಣ ಮಾಡಿ, ಗುರುಗಳಿಗೆ ಕಳ್ಳನನ್ನು ಮನಪರಿವರ್ತನೆ ಮಾಡುವ ಶಕ್ತಿ ಇದ್ದು, ಮಕ್ಕಳ ಆಲೋಚನ ಕ್ರಮಗಳಿಗೆ ಅನುಗುಣವಾಗಿ ಶಿಕ್ಷಕರು ಭೋದನೆ ಮಾಡಬೇಕು ಎಂದರು.
ಶಿಕ್ಷಕರಿಗೆ ಕಲಿಯುವ ಆಸಕ್ತಿ ಹೊಂದಿರುವ ಮಕ್ಕಳು ಸಿಕ್ಕರೆ ಸಾಕಷ್ಟು ಸಂತೋಷದಿಂದ ತಮಗೆ ಗೊತ್ತಿರುವುದು ಬೋಧನೆ ಮಾಡುತ್ತಾರೆ. ಈ ಹಿಂದೆ ಗುರುಗಳು ಜ್ಞಾನದ ಹಸಿವಿನ ಜತೆಗೆ ಹೊಟ್ಟೆ ಹಸಿವು ನೀಗಿಸುವ ಶಿಕ್ಷಣವನ್ನುನೀಡುತ್ತಿದ್ದರು. ಶಾಲೆಗಳಲ್ಲಿ ಮಕ್ಕಳು ಶಿಕ್ಷಕರನ್ನು ಪ್ರಶ್ನೆ ಮಾಡುವ ಗುಣಗಳನ್ನು ಬೆಳೆಸಿಕೊಂಡು, ಗುರುಗಳು ನೀಡುವ ಶಿಕ್ಷಣ ಕಲಿತು ಉಜ್ವಲವಾದ ಭವಿಷ್ಯರೂಪಿಸಿಕೊಳ್ಳಬೇಕು ಎಂದರು.ಪಾಠಮಾಡುವ ಶಿಕ್ಷಕರು ಮಕ್ಕಳ ಆಲೋಚನೆ ಕ್ರಮಕ್ಕೆ ಅನುಗುಣವಾಗಿ ಬೋಧನೆ ಮಾಡುವು ಜತೆಗೆ ಪುಸ್ತಕ ಜ್ಞಾನದ ಜತೆಗೆ ಲೋಕಜ್ಞಾನವನ್ನು ಮೂಡಿಸುವ ಶಿಕ್ಷಣದ ಅಗತ್ಯವಿದೆ. ಮಕ್ಕಳಿಗೆ ಓದುವ ಅಭ್ಯಾಸ ಮೂಡಿಸುವ ಮೊದಲ ನಾವು ಓದುತ್ತಿದ್ದೇವೆ ಎಂಬ ಬಗ್ಗೆ ಶಿಕ್ಷಕರು ದೃಢಪಡಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಜಗತ್ತಿನ ಅನುಗುಣವಾಗಿ ಶಿಕ್ಷಕರು ಮುನ್ನಡೆಯಬೇಕು ಎಂದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ದೇಶದ ಭವಿಷ್ಯ ರೂಪಿಸುವ ಮಕ್ಕಳ ಜವಬ್ದಾರಿ ಪ್ರತಿಯೊಬ್ಬ ಶಿಕ್ಷಕರ ಮೇಲಿದೆ. ಹಾಗಾಗಿ ಪ್ರತಿಯೊಬ್ಬ ಶಿಕ್ಷಕರು ತಮ್ಮ ಜವಬ್ದಾರಿ ಅರಿತು ಕೆಲಸ ಮಾಡಬೇಕು ಎಂದರು.ಪಟ್ಟಣದ ಶಿಕ್ಷಕರ ಭವನ ಅಭಿವೃದ್ಧಿಪಡಿಸುವಂತೆ ಶಿಕ್ಷಕರ ಸಂಘದವರು ಮನವಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಭವನ ಅಭಿವೃದ್ಧಿ ಪಡಿಸಲಾಗುವುದು, ಜತೆಗೆ ಭವನದ ಮೇಲೆ ಮಕ್ಕಳ ಪ್ರಯೋಗ, ಹೊಸಹೊಸ ಅಧ್ಯಾಯನ ನಡೆಸಲು ಲುಕ್ ಸೆಂಟರ್ ತೆರೆಯಲು ಕ್ರಮ ವಹಿಸಲಾಗುವುದು, ಶಿಕ್ಷಕರು ಸಹ ಕಾಲಕಾಲಕ್ಕೆ ತಕ್ಕಂತೆ ಹೊಸ ಟೆಕ್ನಾಲಜಿಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ತಹಸೀಲ್ದಾರ್ ಸಂತೋಷ್, ಇಒ ಲೋಕೇಶ್ ಮೂರ್ತಿ ಮಾತನಾಡಿದರು. ಇದೇ ವೇಳೆ ವಯೋನಿವೃತ್ತಿ ಹೊಂದಿದ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ಶಿಕ್ಷಕರು, ಉಪನ್ಯಾಸಕರನ್ನು ಸನ್ಮಾನಿಸಲಾಯಿತು. ಶಿಕ್ಷಕ ಧನಂಜಯ್ ಬರೆದಿರು ‘ಸ್ಫೂರ್ತಿಸೌರಭ’ ಬಿಡುಗಡೆ ಮಾಡಲಾಯಿತು.ಸಮಾರಂಭದಲ್ಲಿ ಪುರಸಭೆ ಅಧ್ಯಕ್ಷೆ ಜ್ಯೋತಿಲಕ್ಷ್ಮಿಬಾಬು, ಉಪಾಧ್ಯಕ್ಷ ಎಲ್.ಅಶೋಕ್ ಬಿಇಒ ರವಿಕುಮಾರ್, ಬಿಆರ್ ಸಿ ಪ್ರಕಾಶ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಂಗಸ್ವಾಮಿ, ಪ್ರೌಢಶಾಲ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಕೇಶವಮೂರ್ತಿ, ಪ್ರಾ.ಶಾ.ಶಿ.ಸ.ಅಧ್ಯಕ್ಷ ಮಂಜುನಾಥ್, ಯುವರಾಜು, ಎಂ.ರಮೇಶ್, ತ್ಯಾಗರಾಜು, ಕರುಣಾಕುಮಾರ್, ಸಿಆರ್ ಪಿ ಅನುಸೂಯ ಸೇರಿದಂತೆ ಹಲವರು ಇದ್ದರು.