ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ವಿದೇಶಿ ಪ್ರಜೆ ಸೇರಿ ಐವರ ಸೆರೆ

KannadaprabhaNewsNetwork |  
Published : Nov 05, 2025, 04:15 AM ISTUpdated : Nov 05, 2025, 10:16 AM IST
Drugs

ಸಾರಾಂಶ

ನಗರದಲ್ಲಿ ಮಾದಕ ವಸ್ತು ಮಾರಾಟ ಜಾಲದಲ್ಲಿ ನಿರತರಾಗಿದ್ದ ವಿದೇಶಿ ಪ್ರಜೆ ಸೇರಿದಂತೆ ಐವರನ್ನು ಬಂಡೇಪಾಳ್ಯ ಹಾಗೂ ಮಲ್ಲೇಶ್ವರ ಠಾಣೆ ಪೊಲೀಸರು ಬಂಧಿಸಿ, 95 ಲಕ್ಷ ರು. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.

 ಬೆಂಗಳೂರು :  ನಗರದಲ್ಲಿ ಮಾದಕ ವಸ್ತು ಮಾರಾಟ ಜಾಲದಲ್ಲಿ ನಿರತರಾಗಿದ್ದ ವಿದೇಶಿ ಪ್ರಜೆ ಸೇರಿದಂತೆ ಐವರನ್ನು ಬಂಡೇಪಾಳ್ಯ ಹಾಗೂ ಮಲ್ಲೇಶ್ವರ ಠಾಣೆ ಪೊಲೀಸರು ಬಂಧಿಸಿ, 95 ಲಕ್ಷ ರು. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.

95 ಲಕ್ಷ ರು. ಮೌಲ್ಯದ ಡ್ರಗ್ಸ್ ಜಪ್ತಿ

ನೈಜೀರಿಯಾ ಚಿಬ್ಯುಜೂ ಗಾಡ್ವಿನ್‌ ಓನ್ಲಗ್ಬು, ಶಂಕರ್ ಅಲಿಯಾಸ್ ತಮಿಳ್‌, ವಿರಾಮ್ ಅಲಿಯಾಸ್ ಸೈತಾನ್‌, ಶಂಕರ್‌ ಹಾಗೂ ಮುಬಾರಕ್ ಬಂಧಿತರಾಗಿದ್ದು, ಆರೋಪಿಗಳಿಂದ 752 ಗ್ರಾಂ ಎಂಡಿಎಂಎ, 8 ಗ್ರಾಂ ಮಿಲಿ ಕೊಕೇನ್‌, 4.195 ಕೆಜಿ ಗಾಂಜಾ, 1.250 ಕೆಜಿ ಗಾಂಜಾ ಆಯಿಲ್‌ ಹಾಗೂ ಬೈಕ್‌ಗಳು ಸೇರಿದಂತೆ 95 ಲಕ್ಷ ರು. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ.

ಸೋಮಸಂದ್ರಪಾಳ್ಯದ ಬಳಿ ಗಾಡ್ವಿನ್‌ನನ್ನು ಬಂಡೇಪಾಳ್ಯ ಠಾಣೆ ಪೊಲೀಸರು ಸೆರೆ ಹಿಡಿದರೆ, ಮಲ್ಲೇಶ್ವರ ರೈಲ್ವೆ ಸೇತುವೆ ಹಾಗೂ ಆರ್‌.ಪಿ.ರಸ್ತೆಯ ಜಟಕಾ ಗಾಡಿ ನಿಲ್ದಾಣ ಬಳಿ ಇನ್ನುಳಿದ ನಾಲ್ವರು ಮಲ್ಲೇಶ್ವರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

2018ರಲ್ಲಿ ವ್ಯಾಪಾರದ ವೀಸಾದಡಿ ಭಾರತಕ್ಕೆ ಬಂದಿದ್ದ 

2018ರಲ್ಲಿ ವ್ಯಾಪಾರದ ವೀಸಾದಡಿ ಭಾರತಕ್ಕೆ ಬಂದಿದ್ದ ಗಾಡ್ವಿನ್, ಆರಂಭದಲ್ಲಿ ದೆಹಲಿಯಲ್ಲಿ ಬಟ್ಟೆ ವ್ಯಾಪಾರ ನಡೆಸುತ್ತಿದ್ದ. ತರುವಾಯ ಡ್ರಗ್ಸ್ ದಂಧೆಗಿಳಿದಿದ್ದಾನೆ. ಮೂರು ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಆರೋಪಿ, ಸೋಮಸಂದ್ರ ಪಾಳ್ಯ ಸಮೀಪ ವಾಸವಾಗಿದ್ದನು. ಬೇರೊಬ್ಬ ಪೆಡ್ಲರ್‌ನಿಂದ ಕಡಿಮೆ ಬೆಲೆಗೆ ಡ್ರಗ್ಸ್ ಖರೀದಿಸಿ ನಗರದಲ್ಲಿ ದುಬಾರಿ ಬೆಲೆಗೆ ಗಾಡ್ವಿನ್ ಮಾರುತ್ತಿದ್ದ. ಈ ಬಗ್ಗೆ ಖಚಿತ ಬಾತ್ಮಿ ಪಡೆದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಳಿ ಎಂಡಿಎಂಎ ಸೇರಿದಂತೆ 75 ಲಕ್ಷ ರು. ಮೌಲ್ಯದ ಡ್ರಗ್ಸ್ ಜಪ್ತಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇನ್ನುಳಿದ ನಾಲ್ವರು ಸಹ ನಗರದಲ್ಲಿ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದರು. ಹೊರ ರಾಜ್ಯದಿಂದ ಗಾಂಜಾ ಹಾಗೂ ಹಶೀಶ್ ಆಯಿಲ್ ತಂದು ನಗರದಲ್ಲಿ ಆರೋಪಿಗಳು ಮಾರಾಟ ಮಾಡುತ್ತಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

PREV
Read more Articles on

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ