ಕನ್ನಡಪ್ರಭ ಸರಣಿಯ ಇಬ್ಬರು ರೈತರು ಸೇರಿದಂತೆ ಐವರಿಗೆ ಸನ್ಮಾನ

KannadaprabhaNewsNetwork |  
Published : Jun 23, 2025, 11:53 PM ISTUpdated : Jun 24, 2025, 12:10 PM IST
29 | Kannada Prabha

ಸಾರಾಂಶ

ಕನ್ನಡಪ್ರಭದಲ್ಲಿ ಕಳೆದ 85 ದಿನಗಳಿಂದ ನಿರಂತರವಾಗಿ ಪ್ರಕಟವಾಗುತ್ತಿರುವ ''''ಉಳುವ ಯೋಗಿಯ ನೋಡಲ್ಲಿ'''' ಸರಣಿಯ ಇಬ್ಬರು ಸೇರಿದಂತೆ ಐವರು ರೈತರನ್ನು ಟಿ. ನರಸೀಪುರ ತಾಲೂಕು ಯಾಚೇನಹಳ್ಳಿಯಲ್ಲಿ ಸೋಮವಾರ ಬಾಗಲಕೋಟೆ ತೋಟಗಾರಿಕೆ ವಿವಿ ಹಾಗೂ ಮೈಸೂರು ತೋಟಗಾರಿಕೆ ಕಾಲೇಜು ವತಿಯಂದ ಸನ್ಮಾನಿಸಲಾಯಿತು.

 ಮೈಸೂರು  : ಕನ್ನಡಪ್ರಭದಲ್ಲಿ ಕಳೆದ 85 ದಿನಗಳಿಂದ ನಿರಂತರವಾಗಿ ಪ್ರಕಟವಾಗುತ್ತಿರುವ ''''''''ಉಳುವ ಯೋಗಿಯ ನೋಡಲ್ಲಿ'''''''' ಸರಣಿಯ ಇಬ್ಬರು ಸೇರಿದಂತೆ ಐವರು ರೈತರನ್ನು ಟಿ. ನರಸೀಪುರ ತಾಲೂಕು ಯಾಚೇನಹಳ್ಳಿಯಲ್ಲಿ ಸೋಮವಾರ ಬಾಗಲಕೋಟೆ ತೋಟಗಾರಿಕೆ ವಿವಿ ಹಾಗೂ ಮೈಸೂರು ತೋಟಗಾರಿಕೆ ಕಾಲೇಜು ವತಿಯಂದ ಸನ್ಮಾನಿಸಲಾಯಿತು.

ಬಾಳೆ, ಅಡಿಕೆ, ತೆಂಗು ನರ್ಸರಿಯಲ್ಲಿ ಹೆಸರು ಮಾಡಿರುವ ಕೊಡಗಳ್ಳಿಯ ಕೆ. ಪುಟ್ಟಸ್ವಾಮಿ ಅವರ ಪುತ್ರ ಕಿರಣ್‌. ಬೀಡನಹಳ್ಳಿಯ ಮೀನು ಕೃಷಿಕ ಬಸವೇಗೌಡ, ಅವರ ಬಗ್ಗೆ ಕನ್ನಡಪ್ರಭ ಸರಣಿಯಲ್ಲಿ ಯಶೋಗಾಥೆಗಳು ಪ್ರಕಟವಾಗಿವೆ.

ಈ ಇಬ್ಬರ ಜೊತೆಗೆ ಸಾವಯವ ತೋಟಗಾರಿಕೆಯಲ್ಲಿ ಯಾಚೇನಹಳ್ಳಿಯ ವೈ.ಕೆ. ಚಂದ್ರು, ತೋಟಗಾರಿಕೆಯಲ್ಲಿ ಮಾದಿಗಹಳ್ಳಿಯ ಮರೀಗೌಡ, ಹೈನುಗಾರಿಕೆಯಲ್ಲಿ ಬನ್ನೂರಿನ ಬಿ.ಎಲ್‌. ಶಿವಲಿಂಗೇಗೌಡ ಅವರನ್ನು ಸನ್ಮಾನಿಸಲಾಯಿತು.ಬಿ.ಎ. ಪ್ರಕಾಶ್‌ಗೆ ಎಸ್‌.ವಿ. ಗೌಡಪ್ರ ಪ್ರಶಸ್ತಿ:ಈಗಾಗಲೇ ಕನ್ನಡಪ್ರಭ ಸರಣಿಯಲ್ಲಿ ಪ್ರಕಟವಾಗಿರುವ ಪಿರಿಯಾಪಟ್ಟಣ ತಾಲೂಕು ಪಿ. ಬಸವನಹಳ್ಳಿಯ ಬಿ.ಎ. ಪ್ರಕಾಶ್‌ ಅವರಿಗೆ ಮೈಸೂರಿನ ಹಿರಿಯ ನಾಗರಿಕ ಮಂಡಳಿಯು ಎಸ್‌.ವಿ. ಗೌಡಪ್ಪ ಪ್ರಶಸ್ತಿ ನೀಡಿದೆ. ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ಯಶೋಗಾಥೆಯ ಆಧಾರದ ಮೇಲೆ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ