ಶಿವಾನಂದ ಅಂಗಡಿ
2023ರ ಮೇ ತಿಂಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಪಂಚಗ್ಯಾರಂಟಿಗಳು ಜಾರಿಗೆ ಬಂದಿದ್ದು, ಈ ಪೈಕಿ ಪ್ರತಿ ಕುಟುಂಬಕ್ಕೆ 200 ಯೂನಿಟ್ ವರೆಗೆ ಉಚಿತವಾಗಿ ವಿದ್ಯುತ್ ಪೂರೈಸುವ ಗೃಹಜ್ಯೋತಿ ಯೋಜನೆ 2023ರ ಜುಲೈ ತಿಂಗಳಿನಿಂದ ಜಾರಿಗೆ ಬಂದಿದೆ.
ಗ್ರಾಮೀಣ, ನಗರ ಪ್ರದೇಶದಲ್ಲಿ ಒಂದು ಯೂನಿಟ್‌ಗೆ ಈಗ ₹5.80 ಇದ್ದು, ಕನಿಷ್ಠ 100 ಯೂನಿಟ್ ನಿಗದಿಯಾದವರಿಗೆ ನಿಗದಿತ ಮಾಸಿಕ ಶುಲ್ಕ ₹145 ಸೇರಿ ₹700 ಹಾಗೂ 200 ಯೂನಿಟ್ ನಿಗದಿಯಾದವರಿಗೆ ₹1400 ವರೆಗೂ ಉಳಿತಾಯವಾಗುತ್ತಿದೆ. ಹುಬ್ಬಳ್ಳಿ ಮಹಾನಗರದಲ್ಲಿ 230,000 ಕುಟುಂಬಗಳು ಗೃಹಜ್ಯೋತಿ ಯೋಜನೆ ಲಾಭವನ್ನು ಪಡೆದುಕೊಂಡಿವೆ ಎನ್ನುತ್ತಾರೆ ಹೆಸ್ಕಾಂ ಸಿಬ್ಬಂದಿ.ಬೆಸ್ಕಾಂ, ಜೆಸ್ಕಾಂ, ಮೆಸ್ಕಾಂ, ಹೆಸ್ಕಾಂ, ಚೆಸ್ಕಾಂ ಹೆಸರಿನ ವಿದ್ಯುತ್ ಸರಬರಾಜು ಕಂಪನಿಗಳಿಗೆ ರಾಜ್ಯ ಸರ್ಕಾರ ಪ್ರತಿ ತಿಂಗಳು ಈ ಗ್ರಾಹಕರ ವಿದ್ಯುತ್ ಬಿಲ್ಲನ್ನು ಭರಿಸುತ್ತಿದೆ. ಒಂದೇ ಹಂತದಲ್ಲಿ ವಿದ್ಯುತ್ ಸರಬರಾಜು ಕಂಪನಿಗಳಿಗೆ ಬಿಲ್ ಪಾವತಿ ಆಗುತ್ತಿರುವುದರಿಂದ ಅವುಗಳ ಆರ್ಥಿಕ ಶಕ್ತಿಯನ್ನು ಇದು ಹೆಚ್ಚಿಸಿದೆ.
ಯೋಜನೆ ಅನುಷ್ಠಾನ ಮಾಡುವಾಗ ಫಲಾನುಭವಿಗಳ ಹಿಂದಿನ ವರ್ಷದ ವಾರ್ಷಿಕ ವಿದ್ಯುತ್ ಉಪಯೋಗಿಸುವ ಬಿಲ್ ಆಧರಿಸಿ ಅದರ ಮೇಲೆ ಶೇ. 10 ಹೆಚ್ಚುವರಿ ಯೂನಿಟ್‌ಗಳನ್ನು ಸರ್ಕಾರ ನಿಗದಿಗೊಳಿಸಿದೆ. ಹೀಗಾಗಿ ಎಲ್ಲರಿಗೂ ಯೋಜನೆಯಂತೆ ಗರಿಷ್ಠ 200 ಯೂನಿಟ್ ಬಳಕೆಗೆ ಅವಕಾಶ ದೊರೆತಿಲ್ಲ.
ಪ್ರತಿ ತಿಂಗಳು ಬಿಲ್ ಬರುತ್ತದೆ. ಆದರೆ ಅದರಲ್ಲಿ ಬಳಕೆಯ ವಿವರಗಳ ಜತೆಗೆ ಶೂನ್ಯ ಬಿಲ್ ತೋರಿಸುತ್ತಾರೆ. ಆಯಾ ಕುಟುಂಬಕ್ಕೆ ನಿಗದಿಯಾದ ಯೂನಿಟ್ ದಾಟಿದ್ದರೆ ಅದಕ್ಕೆ ಹೆಚ್ಚುವರಿ ಮೊತ್ತವನ್ನು ಗ್ರಾಹಕರು ಕಟ್ಟುತ್ತಿದ್ದಾರೆ.
ಗೃಹಲಕ್ಷ್ಮಿ, ಅನ್ನಭಾಗ್ಯ, ಗೃಹಜ್ಯೋತಿ, ಯುವನಿಧಿಯಂಥ ಯೋಜನೆಗಳು ಫಲಾನುಭವಿಗಳಿಗೆ ಆರ್ಥಿಕವಾಗಿ ಬಹಳ ಅನುಕೂಲವಾಗಿದೆ. ಅದರಲ್ಲೂ ಹುಬ್ಬಳ್ಳಿಯಂಥ ಮಹಾನಗರದಲ್ಲಿ ಒಂದು ಕುಟುಂಬಕ್ಕೆ ಆರ್ಥಿಕ ಹೊರೆಯನ್ನು ಪಂಚ ಗ್ಯಾರಂಟಿ ಯೋಜನೆಗಳು ತಗ್ಗಿಸಿವೆ ಎಂದು ಹುಬ್ಬಳ್ಳಿ ಶಹರದ ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್ ಭೋಲಾ ಭಾಯಿ ಹೇಳಿದರು. 2024ರ ಏಪ್ರಿಲ್‌ದಿಂದ 25ರ ಮಾರ್ಚ್ ವರೆಗೆ
ಬಾಗಲಕೋಟೆ418203 ₹186.47
ಧಾರವಾಡ494540₹268.89
ಹಾವೇರಿ391031₹170.12
ಉತ್ತರ ಕನ್ನಡ383326 ₹212.36ವಿಜಯಪುರ435984₹206.51
ಒಟ್ಟು ಫಲಾನುಭವಿಗಳು 3388094 ₹1645.72