ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ತಾಲೂಕಿನ ಜಾಲವಾದ ಗ್ರಾಮದಲ್ಲಿ ಗುರುವಾರ 11ನೇ ದಿನದ ರೈತ ಸಂಘ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ರೈತರ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಅವರು, ಗ್ರಾಮದಲ್ಲಿ ಆರ್.ಎಫ್.ಝಡ್ ಕಂಪನಿ ಮಾಲೀಕರು ದಲ್ಲಾಳಿಗಳು ರೈತರಿಗೆ ನ್ಯಾಯಯುತ ಬೆಲೆ ನೀಡಲು ಒತ್ತಾಯ ಮಾಡಿದರು. ಸುಮಾರು 20 ಜನ ರೈತರಿಂದ 69 ಎಕರೆ ಜಮೀನು ಖರೀದಿಸಿದ್ದು ಕೆಲ ರೈತರಿಗೆ ಎಕರೆಗೆ 28 ಲಕ್ಷ ನೀಡಿದ್ದಾರೆ, ಇನ್ನು ಕೆಲ ಜನರಿಗೆ 16 ಲಕ್ಷ ನೀಡಿದ್ದಾರೆ. ಎಲ್ಲಾ ಒಂದೇ ತರನಾದ ಜಮೀನುಗಳಿಗೆ ಈ ರೀತಿಯ ಬೆಲೆ ನಿಗದಿ ಮಾಡಿದ್ದು ರೈತರಿಗೆ ಅನ್ಯಾಯ ಎಸಗಿದ್ದಾರೆ. ಕೂಡಲೇ ಕಂಪನಿಯವರು ರೈತರ ಜಮೀನುಗಳಲ್ಲಿ ಕೆಲಸ ನಿರ್ವಹಿಸುತ್ತಿರುವುದನ್ನು ಬಂದ್ ಮಾಡಿ ರೈತರಿಗೆ ಒಂದೇ ರೀತಿಯಾಗಿ ಪರಿಹಾರ ಒದಗಿಸಬೇಕು ಅಲ್ಲಿಯವರೆಗೆ ಕಂಪನಿಯವರಿಗೆ ನೋಟಿಸ್ ನೀಡಿ ಎಂದು ತಹಸೀಲ್ದಾರ್‌ಗೆ ನಿರ್ದೇಶನ ನೀಡಿದರು. ಉತ್ತರ ಕರ್ನಾಟಕದ ರೈತ ಸಂಘದ ಅಧ್ಯಕ್ಷ ಶಂಕರಗೌಡ ಹಿರೇಗೌಡ ಮಾತನಾಡಿ, ರೈತರ ಜಮೀನುಗಳಿಗೆ ಒಂದೇ ರೀತಿ ಬೆಲೆ ನಿಗದಿ ಮಾಡಿ ಪರಿಹಾರ ಒದಗಿಸಬೇಕು. ಜಮೀನು ಕಳೆದುಕೊಂಡ ರೈತರ ಕುಟುಂಬದ ಒಬ್ಬರಿಗೆ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು.ಇದೇ ಸಂದರ್ಭದಲ್ಲಿ ಜಾಲವಾದ ಶ್ರೀಗಳು, ಮುಖಂಡರುಗಳಾದ ಭೀಮರಾಯ ಮನಗೂಳಿ, ಚಾಂದ ಇನಾಮದಾರ, ಮಡು ದಳವಾಯಿ, ಶಿವರಾಜ ನೀರಲಗಿ, ಪ್ರಧಾನಿ ನೀರಲಗಿ, ಈರಪ್ಪ ನಡುಗೇರಿ, ಸಲೀಂ ಮುಲ್ಲಾ, ಅಲ್ಲಾಬಾಕ್ಷ್ ಇನಾಮದಾರ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ರೈತರು ಉಪಸ್ಥಿತರಿದ್ದರು.ನಾನು ರೈತನ ಮಗನಾಗಿ ರೈತರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ. ಅಧಿಕಾರಿಗಳು, ದಲ್ಲಾಳಿಗಳು ರೈತರ ಜಮೀನುಗಳಿಗೆ ಪರಿಹಾರ ಒದಗಿಸುವಲ್ಲಿ ತಾರತಮ್ಯ ಎಸಗಿದ್ದಾರೆ. ಕಂಪನಿ ನಿರ್ಮಾಣದ ಕೆಲಸ ಬಂದ್ ಮಾಡಿಸಿ, ರೈತರಿಗೆ ನ್ಯಾಯಯುತ ಬೆಲೆ ನಿಗದಿ ಮಾಡಿ ಪರಿಹಾರ ಒದಗಿಸಬೇಕು ಎಂದು ಕ್ಷೇತ್ರದ ಜನಪ್ರತಿನಿಧಿಯಾಗಿ ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ. ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿ, ರೈತರ ಸಮಸ್ಯೆಗಳ ಕುರಿತು ಸರ್ಕಾರದ ಗಮನಕ್ಕೆ ತರಲಾಗುವುದು. ಈ ಕುರಿತು ಮುಂದಿನ ಅಧಿವೇಶನದಲ್ಲಿ ಮಾತನಾಡುತ್ತೇನೆ.
-ರಾಜುಗೌಡ ಪಾಟೀಲ ಕುದರಿಸಾಲವಾಡಗಿ, ಶಾಸಕರು, ವಿಧಾನಸಭಾ ಕ್ಷೇತ್ರ ದೇವರಹಿಪ್ಪರಗಿ.