ಕಡೂರಿನ 100 ಅಡಿ ಎತ್ತರದ ಧ್ವಜ ಕಂಬದಲ್ಲಿ ಧ್ವಜಾರೋಹಣ

KannadaprabhaNewsNetwork |  
Published : Aug 16, 2025, 12:00 AM IST
15ಕೆಕೆಡಿಯು1ಎ. | Kannada Prabha

ಸಾರಾಂಶ

ಕಡೂರು , ಪಟ್ಟಣದ ವೇದಾ ಪಾರ್ಕಿನಲ್ಲಿ ಕಡೂರು ಪುರಸಭೆಯಿಂದ ದೇಶಕ್ಕೆ ಸ್ವಾತಂತ್ರ ಬಂದ 79 ನೇ ವರ್ಷದ ಸವಿ ನೆನಪಿಗಾಗಿ 100 ಅಡಿ ಎತ್ತರದ ಧ್ವಜ ಕಂಬ ನಿರ್ಮಿಸಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ವಿಶೇಷವಾಗಿ ಸ್ವಾತಂತ್ರೋತ್ಸವ ಆಚರಿಸಲಾಯಿತು.

ಹಿರಿಮೆಯನ್ನು ಕಡೂರು ಪುರಸಭೆ: ಶಾಸಕ ಕೆ.ಎಸ್‌. ಆನಂದ್

ಕನ್ನಡಪ್ರಭ ವಾರ್ತೆ, ಕಡೂರು

ಪಟ್ಟಣದ ವೇದಾ ಪಾರ್ಕಿನಲ್ಲಿ ಕಡೂರು ಪುರಸಭೆಯಿಂದ ದೇಶಕ್ಕೆ ಸ್ವಾತಂತ್ರ ಬಂದ 79 ನೇ ವರ್ಷದ ಸವಿ ನೆನಪಿಗಾಗಿ 100 ಅಡಿ ಎತ್ತರದ ಧ್ವಜ ಕಂಬ ನಿರ್ಮಿಸಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ವಿಶೇಷವಾಗಿ ಸ್ವಾತಂತ್ರೋತ್ಸವ ಆಚರಿಸಲಾಯಿತು.

ಶಿವಮೊಗ್ಗ- ಬೆಂಗಳೂರು ರಾ. ಹೆದ್ದಾರಿ 206ರಲ್ಲಿ ಹಾದು ಹೋಗುವ ಕಡೂರು ವೇದಾ ಪಾರ್ಕಿನಲ್ಲಿ ದೇಶ ಪ್ರೇಮದ ಪ್ರತೀಕವಾಗಿ ಬೃಹತ್ ಧ್ವಜ ಕಂಬ ನಿರ್ಮಿಸಿ ತ್ರಿವರ್ಣ ಧ್ವಜಾರೋಹಣವನ್ನು ನೇರವೇರಿಸಲಾಯಿತು.

ಶಾಸಕ ಕೆ.ಎಸ್‌. ಆನಂದ್ 100 ಅಡಿ ಎತ್ತರದ ಧ್ವಜ ಕಂಬದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿ, ದೇಶಾಭಿಮಾನದ ಮಹತ್ವ ಸಾರುವ ಮೂಲಕ ಪುರಸಭೆ ₹33.90 ಲಕ್ಷ ವೆಚ್ಚದಲ್ಲಿ 100 ಅಡಿ ಎತ್ತರದ ಧ್ವಜಸ್ತಂಬದಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಕ್ಷೇತ್ರದ ಹಿರಿಮೆಯನ್ನು ಕಡೂರು ಪುರಸಭೆ ಹೆಚ್ಚಿಸಿದ್ದು ಹಲವು ವಿಶೇಷತೆಗಳನ್ನು ನಿರ್ಮಿಸಿರುವ ಪುರಸಭೆಯಿಂದ ಇದು ಹೊಸತನದ ಮೈಲಿಗಲ್ಲಾಗಿದೆ.

ಪುರಸಭಾಧ್ಯಕ್ಷರ ಕನಸಿನ ಕಾಳಜಿ ಪ್ರತೀಕವಾಗಿ ದೇಶಾಭಿಮಾನ ಮೂಡಿಸುವ ಬಾನೆತ್ತರದ ತ್ರಿವರ್ಣ ಧ್ವಜ ಜಿಲ್ಲೆಯ ಲ್ಲಿಯೇ ಪ್ರಪ್ರಥಮವಾಗಿ ಕಡೂರಿನಲ್ಲಿ ಸ್ಥಾಪಿಸಿ, ವೇದಾಪಾರ್ಕ್ ಆವರಣದಲ್ಲಿ ಮೂಲಭೂತ ಸೌಕರ್ಯ ಅಳವಡಿಸುವ ಜೊತೆಗೆ ಪಟ್ಟಣದ ಜನತೆಗೆ ನೆಚ್ಚಿನ ವಿಶ್ರಾಂತಿ ತಾಣವಾಗಿ ಮಾರ್ಪಡಿಸಿರುವುದು ಶ್ಲಾಘನೀಯ ಎಂದರು.

ಪುರಸಭಾ ಅಧ್ಯಕ್ಷ ಭಂಡಾರಿಶ್ರೀನಿವಾಸ್ ಮಾತನಾಡಿ, ಸ್ವಾತಂತ್ರ್ಯ ಸಂಭ್ರಮದ ಅಂಗವಾಗಿ ವಿನೂತನ ಹೆಜ್ಜೆ ಇಡುವ ಸಂಕಲ್ಪದೊಂದಿಗೆ ಪುರಸಭೆ ಅನುದಾನದಲ್ಲಿ ವಿಶೇಷ ಕಾರ್ಯ ಕೈಗೆತ್ತಿಕೊಂಡು ಈ ಬೃಹತ್‌ ಧ್ವಜಸ್ತಂಭ ನಿರ್ಮಿಸಲಾಗಿದೆ. ಅಭಿವೃದ್ಧಿ ಜೊತೆಗೆ ಯುವಕರಲ್ಲಿ ದೇಶಾಭಿಮಾನ ಮೂಡಿಸಲು ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ಎಂದರು. ಧ್ವಜಾರೋಹಣಕ್ಕೂ ಮುನ್ನಾ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್ ವೇದಾ ಪಾರ್ಕಿಗೆ ಭೇಟಿ ನೀಡಿ ಪುರಸಭೆ ಆಡಳಿತ ಮಂಡಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷೆ ಮಂಜುಳಾ ಚಂದ್ರು, ಸದಸ್ಯರಾದ ಯಾಸೀನ್, ಮರುಗುದ್ದಿ ಮನು, ಜಿ.ಸೋಮಯ್ಯ, ಹಾಲಮ್ಮ, ಜ್ಯೋತಿ ಆನಂದ್, ಮೋಹನ್, ಸುಧಾ ಉಮೇಶ್, ಲತಾರಾಜು, ವಿಜಯಾ ಚಿನ್ನರಾಜು, ಕಮಲಾ ವೆಂಕಟೇಶ್, ಪುಷ್ಪಲತಾ ಮಂಜುನಾಥ್, ಪದ್ಮಾ ಶಂಕರ್, ಮಂಡಿ ಇಕ್ಬಾಲ್, ಯತಿರಾಜ್, ಶ್ರೀಕಾಂತ್, ಗೋವಿಂದು, ಮುಖ್ಯಾಧಿಕಾರಿ ಕೆ.ಎಸ್.ಮಂಜುನಾಥ್, ಶಾಂತಪ್ಪ ಒಡೆಯರ್, ತಿಪ್ಪೇಶ್, ಮಂಜುನಾಥ್, ಆಸಂದಿ ಕಲ್ಲೇಶ್, ಬಾಸೂರು ಚಂದ್ರಮೌಳಿ, ಕೆಡಿಪಿ ಸದಸ್ಯ ಜಿ. ಅಶೋಕ್ ಇದ್ದರು.-- ಬಾಕ್ಸ್ ಸುದ್ದಿ--

ಗಮನ ಸೆಳೆದ ಬಾನೆತ್ತರದ ತ್ರಿವರ್ಣಧ್ವಜಪಟ್ಟಣದ ಹೊರವಲಯದ ವೇದಾನದಿ ತಟದ ವೇದಾ ಪಾರ್ಕಿನಲ್ಲಿ ಸ್ಥಾಪಿತಗೊಂಡ 100 ಅಡಿ ಎತ್ತರದ ತ್ರಿವರ್ಣ ಧ್ವಜಸ್ತಂಬ ಸ್ವಯಂಚಾಲಿತ ಯಂತ್ರದಿಂದ ಕಾರ್ಯನಿರ್ವಹಿಸಲಿದ್ದು, ದಿನದ 24 ಗಂಟೆ, ವಾರದ ಏಳು ದಿನಗಳು ಹಾರಾಡಲಿದೆ. ಧ್ವಜಸ್ತಂಭದ ಸುತ್ತಲೂ ಆಕರ್ಷಣೀಯ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಧ್ವಜಾರೋಹಣದ ಬಳಿಕ ಆಗಮಿಸಿದ್ದ ಪಟ್ಟಣದ ನಾಗರಿಕರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಧ್ವಜಸ್ತಂಭದ ಬಳಿ ನಿಂತು ತಮ್ಮ ಮೊಬೈಲ್ ಗಳಲ್ಲಿ ಸೆಲ್ಪಿ ಕ್ಲಿಕ್ಕಿಸಿಕೊಳ್ಳುವ ಮೂಲಕ ಪುರಸಭೆ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.15ಕೆಕೆಡಿಯು1.

ಕಡೂರು ಪಟ್ಟಣದ ವೇದಾಪಾರ್ಕ್ ಆವರಣದಲ್ಲಿ 100 ಅಡಿ ಎತ್ತರದ ಧ್ವಜಸ್ತಂಭವನ್ನು ಶಾಸಕ ಕೆ.ಎಸ್.ಆನಂದ್ ಲೋಕಾರ್ಪಣೆ ಗೊಳಿಸಿದರು. ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಮಂಜುಳಾ ಚಂದ್ರು, ಹಾಲಮ್ಮ, ಜ್ಯೋತಿ, ಸುಧಾಉಮೇಶ್, ಪುಷ್ಪಲತಾ, ಮನು ಮತ್ತಿತರಿದ್ದರು.15ಕೆಕೆಡಿಯು1ಎ.

ಕಡೂರು ಪಟ್ಟಣದ ವೇದಾಪಾರ್ಕಿನಲ್ಲಿ 79 ನೇ ಸ್ವಾತಂತ್ರೋತ್ಸ ವದ ಅಂಗವಾಗಿ ಪುರಸಭೆಯಿಂದ ನಿರ್ಮಿಸಿದ 100 ಅಡಿ ಎತ್ತರದ ತ್ರಿವರ್ಣಧ್ವಜಸ್ತಂಭ ಲೋಕಾರ್ಪಣೆಗೊಂಡಿರುವುದು.

PREV

Recommended Stories

ಸೆಂಚುರಿ ಕ್ಲಬ್‌ ಸೇರಿಯೇ ಬಿಟ್ಟಿತು ಸು ಫ್ರಂ ಸೋ
ಶ್ರೀಕೃಷ್ಣನೆಂಬ ನಿತ್ಯ ಸತ್ಯನಿಗೆ ಜನ್ಮಾಷ್ಟಮೀ