- ಅವಳಿ ತಾಲೂಕುಗಳಲ್ಲಿ "ನಮ್ಮ ನಡೆ ಮತಗಟ್ಟೆ ಕಡೆ " ಜಾಗೃತಿ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಸಹಾಯಕ ಚುನಾವಣಾಧಿಕಾರಿ ವಿ.ಅಭಿಷೇಕ್ ಹಾಗೂ ಸ್ವೀಪ್ ಸಮಿತಿ ಮುಖ್ಯಸ್ಥೆ ಹಾಗೂ ತಾ.ಪಂ. ಇ.ಒ. ಸುಮಾ "ನಮ್ಮ ನಡೆ ಮತಗಟ್ಟೆ ಕಡೆ " ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿದರು.
ವಿಶೇಷ ಮತದಾನ ಜಾಗೃತಿಃ ತಾಲೂಕಿನ ಕುಂದೂರು ಗ್ರಾಮದಲ್ಲಿ ನೂರಾರು ವಿಶೇಷಚೇತನರು ಬೈಕ್ ರ್ಯಾಲಿ ಮೂಲಕ ಜಾಥ ನಡೆಸಿ, ಮತದಾನದ ಬಗ್ಗೆ ಜಾಗೃತಿ ಮೂಡಿಸಿದರೆ ಮಾತು ಬಾರದ 15 ಜನರು ತಮ್ಮ ಸಂಜ್ಞೆ ಮೂಲಕ ಮತದಾನ ಬಗೆ ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು.ಹೊನ್ನಾಳಿ ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಪುರಸಭೆ ವತಿಯಿಂದ ಆಯೋಜಿಸಿದ್ದ ಮತದಾನ ಜಾಗೃತಿ ವೇಳೆ ಮಕ್ಕಳು ನೃತ್ಯದ ಮೂಲಕ ಜಾಗೃತಿ ಮೂಡಿಸಿದರು.
ಸ್ವೀಪ್ ಮುಖ್ಯಸ್ಥೆ ಹಾಗೂ ತಾಪಂ ಇಒ ಸುಮಾ ಮಾತನಾಡಿ, ಮಹಿಳೆಯರು ತಮ್ಮ ತಮ್ಮ ಸ್ನೇಹಿತೆಯರು ಹಾಗೂ ಬಂಧು ಬಳಗದ ಜತೆ ಮತಗಟ್ಟೆಗೆ ಬೇಗ ಬಂದು ಮತದಾನ ಮಾಡಿದರೆ ಮಾತ್ರ ಯೋಗ್ಯ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನಡೆಸುವ ಅಭ್ಯರ್ಥಿಗೆ ಮತ ನೀಡಿದಂತೆ ಆಗುತ್ತದೆ. ಆದ್ದರಿಂದ ಎಲ್ಲ ಮತದಾರರು ಮತಗಟ್ಟೆ ಕಡೆ ತಮ್ಮ ನಡೆ ಇರಲಿ ಎಂದರು.
ಕುಂದೂರು ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷ ಚಿದಾನಂದಮೂರ್ತಿ, ಸದಸ್ಯರಾದ ಸುರೇಶ್, ಪ್ರಸನ್ನಕುಮಾರ್, ಆಂಜನೆಯ, ರಹಮತ್ ಉಲ್ಲಾ ಖಾನ್, ಪಿಡಿಒ ವಿಜಯಕುಮಾರ ಗೌಡ, ವ್ಯವಸ್ಥಾಪಕ ಮಹ್ಮದ್ ರಫಿ, ಭೋಜರಾಜ್, ಶೈಲಜಾ ವಿಶೇಷಚೇತನರು ಉಪಸ್ಥಿತರಿದ್ದರು.- - - -29ಎಚ್ಎಲ್ಐ1:
"ನಮ್ಮ ನಡೆ ಮತಗಟ್ಟೆ ಕಡೆ " ಕಾಲ್ನಡಿಗೆ ಜಾಥಾಕ್ಕೆ ಸಹಾಯಕ ಚುನಾವಣಾಧಿಕಾರಿ ವಿ.ಅಭಿಷೇಕ್, ಸ್ವೀಪ್ ಸಮಿತಿ ಮುಖ್ಯಸ್ಥೆ ಹಾಗೂ ತಾ.ಪಂ. ಇಒ ಸುಮಾ ಚಾಲನೆ ನೀಡಿದರು.