ಕನ್ನಡಪ್ರಭ ವಾರ್ತೆ ಮೈಸೂರು
ಧ್ವಜಾರೋಹಣ ನೆರವೇರಿಸಿದ ಸಿಆರ್ ಪಿಎಫ್ ನಿವೃತ್ತ ಹೆಡ್ ಕಾನ್ಸ್ ಟೇಬಲ್ ಶಾಂತರಾಜು ಮಾತನಾಡಿ, ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರಾಣವನ್ನು ಮುಡಿಪಾಗಿಟ್ಟು ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು. ಅವರ ತ್ಯಾಗ ಬಲಿದಾನದಿಂದ ದೇಶದ ಜನರೆಲ್ಲರೂ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದಾರೆ ಎಂದು ಹೇಳಿದರು.
ಶಾಲಾ ಮುಖ್ಯೋಪಾಧ್ಯಾಯ ಎನ್.ಪಿ. ಸತೀಶ್ ಅಧ್ಯಕ್ಷತೆ ವಹಿಸಿದ್ದರು. ಡಿ. ರೋಹನ್ ನಾಯಕ್, ಪಿ. ಸೌಮ್ಯ ನಿರೂಪಿಸಿದರು. ಕೆ.ಎಸ್. ಹರ್ಷಿಕಾ ಸ್ವಾಗತಿಸಿದರು. ಮೇರಿ ರೋಸಲಿನ್ ವಂದಿಸಿದರು.