ಬೆಂಗಳೂರು : ಸ್ವಾತಂತ್ರ್ಯ ದಿನಾಚರಣೆ ದಿನವಾದ ಆ.15ರಂದು ವಿಧಾನಸೌಧ ಮುಂದೆ ಫ್ರೀಡಂ ಹಬ್ಬ ನಡೆಯಲಿರುವ ಹಿನ್ನೆಲೆಯಲ್ಲಿ ಮಧ್ಯಾಹ್ನ 12ರಿಂದ ರಾತ್ರಿ 10ರವರೆಗೆ ಸಾರ್ವಜನಿಕರ ವಾಹನಗಳ ಸಂಚಾರದಲ್ಲಿ ಮಾರ್ಪಾಡು ಮಾಡಲಾಗಿದೆ.

ವಿಶೇಷವಾಗಿ ಬೆಳಗ್ಗೆ 11ರಿಂದ ರಾತ್ರಿ 10 ಗಂಟೆವರೆಗೆ ಅಂಬೇಡ್ಕರ್ ರಸ್ತೆ ಮೂಲಕ ಕೆ.ಆರ್.ಸರ್ಕಲ್ ಕಡೆಗೆ ಮತ್ತು ಶೇಷಾದ್ರಿ ರಸ್ತೆಯ ಕೆ.ಆರ್.ಸರ್ಕಲ್‌ನಿಂದ ಅಂಬೇಡ್ಕರ್ ರಸ್ತೆ ಮೂಲಕ ಶಿವಾಜಿನಗರ, ವಸಂತನಗರ ಕಡೆಗೆ ಹೋಗುವ ಎಲ್ಲ ರೀತಿಯ ವಾಹನ ಸಂಚಾರ ನಿಷೇಧಿಸಲಾಗಿದೆ. ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.

ವಾಹನ ನಿಲುಗಡೆ ನಿಷೇಧ:

ಕ್ವೀನ್ಸ್ ರಸ್ತೆಯ ಎರಡು ಬದಿಯಲ್ಲಿ ಬಾಳೇಕುಂದ್ರಿ ವೃತ್ತದಿಂದ ಕ್ವೀನ್ಸ್ ಸರ್ಕಲ್ ಮತ್ತು ಕ್ವೀನ್ಸ್ ಸರ್ಕಲ್ ನಿಂದ ಸಿಟಿಒ ಜಂಕ್ಷನ್ ಲೋಕಭವನ (ರಾಜಭವನ) ರಸ್ತೆ, ಟಿ.ಚೌಡಯ್ಯ ರಸ್ತೆ, ರೇಸ್ ಕೋರ್ಸ್ ರಸ್ತೆ,, ಕಬ್ಬನ್ ಪಾರ್ಕ್ ಒಳಭಾಗದ ಕಿಂಗ್ ಸರ್ಕಲ್, ಪ್ರೆಸ್ ಕ್ಲಬ್ ಮುಂಭಾಗ ವಾಹನ ನಿಲುಗಡೆ ನಿಷೇಧಿಸಲಾಗಿದೆ.


ವಾಹನ ನಿಲುಗಡೆಗೆ ಅವಕಾಶ:

ಸ್ಕೌಟ್ಸ್ ಮತ್ತು ಗೈಡ್ಸ್ ಪಾರ್ಕಿಂಗ್ ಸ್ಥಳ, ಫ್ರೀಡಂಪಾರ್ಕ್, ಎಂಎಲ್ ಸಿಪಿ ಪಾರ್ಕಿಂಗ್ ಸ್ಥಳ, ಕಂಠೀರವ ಕ್ರೀಡಾಂಗಣ, ಕಂಠೀರವ ಕ್ರೀಡಾಂಗಣ (ಪ್ಯಾಲೆಸ್‌ರಸ್ತೆ) ಕ್ರೀಡಾಂಗಣ, ಯುನಿವರ್ಸಿಟಿ ಪಾರ್ಕಿಂಗ್ (ಜ್ಞಾನಜ್ಯೋತಿ ಆಡಿಟೋರಿಯಂ) ಬಳಿ, ಸರ್ಕಾರಿ ಕಲಾ ಕಾಲೇಜು(ಗ್ಯಾಸ್ ಕಾಲೇಜು) ಪಾರ್ಕಿಂಗ್ ಸ್ಥಳ, ಯುಬಿ ಸಿಟಿ ಪಾರ್ಕಿಂಗ್, ಶಿವಾಜಿನಗರ ಎಂಎಲ್ ಸಿಪಿ ಪಾರ್ಕಿಂಗ್ ಸ್ಥಳ, ನೆಹರೂ ತಾರಾಲಯ, ಸೆಂಟ್ ಜೋಸೆಫ್ ಹೈಸ್ಕೂಲ್ ಮೈದಾನ, ಲಿಂಕ್ ರಸ್ತೆ (ಚಿನ್ನಸ್ವಾಮಿ ಕ್ರೀಡಾಂಗಣ).

ಕ್ಯಾಬ್ ಪಿಕ್ ಅಪ್ ಮತ್ತು ಡ್ರಾಪ್ ಸ್ಥಳ:

ಕ್ಯಾಬ್ ಬಳಸುವ ಸಾರ್ವಜನಿಕರು ಲೋಕಭವನ( ರಾಜಭವನ) ರಸ್ತೆಯ ಸಿಟಿಒ ಜಂಕ್ಷನ್ ಬಳಿ ಹತ್ತಿಸಿಕೊಳ್ಳಲು, ಕಬ್ಬನ್ ಪಾರ್ಕ್ ಮೆಟ್ರೋ ಬಳಿ ಇಳಿಸಲು, ಅದೇ ರೀತಿ ಕೆ.ಆರ್.ವೃತ್ತದ ಬಳಿ ಹತ್ತಲು ಹಾಗೂ ಇಳಿಸಲು ಅ‍ವಕಾಶ ಕಲ್ಪಿಸಲಾಗಿದೆ.

ಬಿಎಂಟಿಸಿ ಬಸ್ ವ್ಯವಸ್ಥೆ ಇರುವ ಸ್ಥಳಗಳು:

ಕಾರ್ಯಕ್ರಮದ ನಂತರ ಎಂ.ಎಸ್.ಬಿಲ್ಡಿಂಗ್ ಒಳಭಾಗದ (ದೇವರಾಜ ಅರಸು ರಸ್ತೆ) ಬಸ್ ನಿಲುಗಡೆ ಸ್ಥಳದಿಂದ ಬಿಎಂಟಿಸಿ ಬಸ್‌ಗಳು ಐದು ಮಾರ್ಗಗಳಲ್ಲಿ ಸಂಚರಿಸಲಿವೆ. ಮಾರ್ಗ ಸಂಖ್ಯೆ 1ರಲ್ಲಿ ಕೆ.ಆರ್.ಸರ್ಕಲ್, ಟೌನ್‌ಹಾಲ್, ಸಿಟಿ ಮಾರ್ಕೆಟ್, ಮೈಸೂರು ರಸ್ತೆ, ಸ್ಯಾಟಲೈಟ್ ಕಡೆಗೆ, ಮಾರ್ಗ ಸಂಖ್ಯೆ 2ರಲ್ಲಿ ಐ.ಐ.ಟಿ, ಬಸವೇಶ್ವರ ಸರ್ಕಲ್, ರೇಸ್‌ಕೋರ್ಸ್ ರಸ್ತೆ, ಶೇಷಾದ್ರಿಪುರಂ, ಮಲ್ಲೇಶ್ವರಂ, ಮತ್ತಿಕೆರೆ, ಸುಮ್ಮನಹಳ್ಳಿ ಕಡೆಗೆ, ಮಾರ್ಗ ಸಂಖ್ಯೆ3ರಲ್ಲಿ ಕೆ.ಆರ್.ಸರ್ಕಲ್, ಹಡ್ಸನ್‌ಸರ್ಕಲ್, ಡೈರಿವೃತ್ತ, ಶಾಂತಿನಗರ, ಮಡಿವಾಳ, ಎಲೆಕ್ಟ್ರಾನಿಕ್ ಸಿಟಿ ತೆರಳಬಹುದು.

ಮಾರ್ಗ ಸಂಖ್ಯೆ 4ರಲ್ಲಿ ಹಡ್ಸನ್‌ಸರ್ಕಲ್,ಲಾಲ್‌ಬಾಗ್ ರಸ್ತೆ, ಬಸವನಗುಡಿ ರಸ್ತೆ, ಮಾರ್ಗ ಸಂಖ್ಯೆ 5ರಲ್ಲಿ ರೇಸ್ ಕೋರ್ಸ್ ರಸ್ತೆ, ಶೇಷಾದ್ರಿಪುರಂ, ಸಂಪಿಗೆ ರಸ್ತೆ, ಮಲ್ಲೇಶ್ವರಂ, ನವರಂಗ್. ಮೆಜೆಸ್ಟಿಕ್ ರಸ್ತೆ, ಕೆಂಗೇರಿ, ಬಸವೇಶ್ವರ ರಸ್ತೆ, ಸಿ.ಟಿ.ಒ ಜಂಕ್ಷನ್ (ಬಿ.ಆರ್.ವಿ. ರಸ್ತೆ) ಬಸ್ ಮಾರ್ಗಗಳು, ಮಾರ್ಗ ಸಂಖ್ಯೆ 1ರಲ್ಲಿ ಮಣಿಪಾಲ್ ಸೆಂಟರ್, ಹಳೆ ಮದ್ರಾಸ್ ರಸ್ತೆ, ಕೆ.ಆರ್.ಪುರಂ ಕಡೆಗೆ, ಮಾರ್ಗ ಸಂಖ್ಯೆ 2ರಲ್ಲಿ ಟ್ರಿನಿಟಿ ಜಂಕ್ಷನ್, ಓಲ್ಡ್ ಏರ್‌ಪೋರ್ಟ್, ಮಾರತಹಳ್ಳಿ, ವೈಟ್‌ಫೀಲ್ಡ್ ಕಡೆಗೆ ತೆರಳಬಹುದು.ಮಾರ್ಗ ಸಂಖ್ಯೆ 3ರಲ್ಲಿ ಬಾಳೆಕುಂದ್ರಿ ಸರ್ಕಲ್ ನಿಂದ ಕನ್ನಿಂಗ್‌ಹ್ಯಾಂ ರಸ್ತೆ, ಓಲ್ಡ್ ಉದಯಟಿವಿ, ಮೇಖ್ರಿ ಸರ್ಕಲ್, ಯಲಹಂಕ ಕಡೆಗೆ, ಮಾರ್ಗ ಸಂಖ್ಯೆ 4ರಲ್ಲಿ ಬಾಳೆಕುಂದ್ರಿ ಸರ್ಕಲ್ ನಿಂದ ಕನ್ನಿಂಗ್‌ಹ್ಯಾಂ ರಸ್ತೆ, ಓಲ್ಡ್ ಉದಯಟಿವಿ, ಕಂಟೋನ್ಮೆಂಟ್, ಟ್ಯಾನರಿ ರಸ್ತೆ, ನಾಗಾವರ, ಮಾರ್ಗ ಸಂಖ್ಯೆ 5ರಲ್ಲಿ ಬಾಳೆಕುಂದ್ರಿ, ಕನ್ನಿಂಗ್‌ಹ್ಯಾಂ ರಸ್ತೆ, ಓಲ್ಡ್ ಉದಯಟಿವಿ, ಮೇಖ್ರಿ ಸರ್ಕಲ್, ಸದಾಶಿವನಗರ, ಯಶವಂತಪುರ, ಮಾದಾವರ ಕಡೆಗೆ ತೆರಳಲು ಅವಕಾಶ ಕಲ್ಪಿಸಲಾಗಿದೆ.