ಜೂನ್‌ನಿಂದ ಬೀದರ್‌-ಕಲಬುರಗಿಗೆಬೆಂಗ್ಳೂರಿಂದ ವಿಮಾನ ಸೇವೆ ಶುರು

KannadaprabhaNewsNetwork |  
Published : May 23, 2026, 03:45 AM IST
ಪೋಟೋ ವಿವರಣೆ ಎಂ ಎಲ್ ಕೆ 1ಮೊಳಕಾಲ್ಮೂರು ತಾಲೂಕಿನ ಚಿಕ್ಕೇರಹಳ್ಳಿ ಯಲ್ಲಿ ಮಳೆಯಿಂದಾಗಿ ರೈತ ವೆಂಕಟೇಶ್ ಬಾಳೆ ತೋಟ ಹಾನಿಯಾಗಿರುವುದು.ಪೋಟೋ ವಿವರಣೆ ಎಂ ಎಲ್ ಕೆ 2 ಮೊಳಕಾಲ್ಮೂರುತಾಲೂಕಿನ ನೇರ್ಲಹಳ್ಳಿ ರೈತ ಪುಟ್ಟಮ್ಮ ಅವರಿಗೆ ಸೇರಿದ ತೆಂಗಿನ ಮರಗಳು ನೆಲಕ್ಕುರುಳಿರುವುದು.ಪೋಟೋ ವಿವರಣೆ ಎಂ ಎಲ್ ಕೆ 3 ಮೊಳಕಾಲ್ಮೂರು ತಾಲೂಕಿನ ಬಿಜಿಕೆರೆ ಗ್ರಾಮದ ದಲಿತ ಕಾಲೋನಿಯಲ್ಲಿ ರಾಜ ಕಾಲುವೆ ಇಲ್ಲದ ಪರಿಣಾಮ ಚರಂಡಿ ನೀರು ಕಣಗಳಿಗೆ ನುಗ್ಗಿರುವುದು. | Kannada Prabha

ಸಾರಾಂಶ

ಕಲ್ಯಾಣ ಕರ್ನಾಟಕ ಭಾಗದ ಬೀದರ್‌ ಮತ್ತು ಕಲಬುರಗಿ ವಿಮಾನ ನಿಲ್ದಾಣಗಳಿಗೆ ಬೆಂಗಳೂರಿನಿಂದ ಕ್ರಮವಾಗಿ ಜೂ.1 ಮತ್ತು ಜೂ.10ರಿಂದ ವಿಮಾನಯಾನ ಸೇವೆ ಪುನರಾರಂಭಿಸಲಾಗುತ್ತಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಲ್ಯಾಣ ಕರ್ನಾಟಕ ಭಾಗದ ಬೀದರ್‌ ಮತ್ತು ಕಲಬುರಗಿ ವಿಮಾನ ನಿಲ್ದಾಣಗಳಿಗೆ ಬೆಂಗಳೂರಿನಿಂದ ಕ್ರಮವಾಗಿ ಜೂ.1 ಮತ್ತು ಜೂ.10ರಿಂದ ವಿಮಾನಯಾನ ಸೇವೆ ಪುನರಾರಂಭಿಸಲಾಗುತ್ತಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸ್ಟಾರ್‌ ಏರ್‌ಲೈನ್ಸ್‌ ಸಂಸ್ಥೆಯು ಬೆಂಗಳೂರಿನಿಂದ ಬೀದರ್‌, ಕಲಬುರಗಿಗೆ ವಿಮಾನಯಾನ ಸೇವೆ ಒದಗಿಸಲಿದೆ. ಅದಕ್ಕೆ ಬೆಂಬಲ ನೀಡಲು ಸರ್ಕಾರವು 28.47 ಕೋಟಿ ರು.ಗಳನ್ನು ವಯಾಬಲಿಟಿ ಗ್ಯಾಪ್‌ ಫಂಡಿಂಗ್‌ ಆಗಿ ಕೊಡುತ್ತಿದೆ. ಎರಡೂ ಕರೆಯ ವಿಮಾನ ಪ್ರಯಾಣಕ್ಕೆ ಈಗಾಗಲೇ ಮುಂಗಡ ಬುಕ್ಕಿಂಗ್‌ ಆರಂಭಿಸಲಾಗಿದೆ ಎಂದರು.

ಈ ಹಿಂದೆ ಕಲಬುರಗಿಗೆಯಿದ್ದ ವಿಮಾನಸೇವೆ ನಷ್ಟದ ಕಾರಣ ಸ್ಥಗಿತಗೊಂಡಿತ್ತು. ಬೀದರ್‌ಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ವಿಶೇಷ ನೆರವಿನಿಂದ ಒಂದು ವಿಮಾನ ಸೇವೆ ನೀಡಲಾಗುತ್ತಿತ್ತು. ಅದೂ ಸ್ಥಗಿತಗೊಂಡಿತ್ತು. ಇದೀಗ ಸರ್ಕಾರವು ಕಲ್ಯಾಣ ಕರ್ನಾಟಕ ಭಾಗದ ಬೆಳವಣಿಗೆ ಪರಿಗಣಿಸಿ ಪ್ರಾದೇಶಿಕ ವಿಮಾನಯಾನ ಸಂಪರ್ಕ ಉಪಕ್ರಮದಡಿ ವಿಮಾನ ಸೇವೆ ಮತ್ತೆ ಆರಂಭಿಸಲಾಗುತ್ತಿದೆ. ಅಲ್ಲದೆ, ರಾಜ್ಯದ 2 ಮತ್ತು 3ನೇ ಸ್ತರದ ನಗರಗಳಿಗೆ ವಿಮಾನ ಸಂಪರ್ಕ ಒದಗಿಸಬೇಕು ಎನ್ನುವುದು ಸರ್ಕಾರದ ಕಾಳಜಿಯಾಗಿದೆ. ಅದರಿಂದ ಪ್ರಾದೇಶಿಕ ಆರ್ಥಿಕ ಅಭಿವೃದ್ಧಿ ಜತೆಗೆ ಮೂಲಸೌಕರ್ಯ ಕೂಡ ಸುಧಾರಿಸಲಿದೆ ಎಂದು ವಿವರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೃತ ರೈತ ಕುಟುಂಬಕ್ಕೆ ವೈ.ಎಸ್.ವಿ. ದತ್ತ ಸಾಂತ್ವನ
ಬೌರಿಂಗ್‌ ದುರಂತಕ್ಕೆ ಅವೈಜ್ಞಾನಿಕ ನಿರ್ಮಾಣ ಕಾರಣ: ಲೋಕಾ ವರದಿ