ಕಡೂರುತೋಟದಲ್ಲಿ ವಿದ್ಯುತ್ ತಂತಿ ತುಳಿದು ಮೃತಪಟ್ಟ ಮರಡೀಹಳ್ಳಿ ರೈತ ಹನುಮಂತಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಮಾಜಿ ಶಾಸಕ ವೈ.ಎಸ್.ವಿ. ದತ್ತ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಸರ್ಕಾರದಿಂದ ಕುಟುಂಬಕ್ಕೆ ನೆರವು ಒದಗಿಸಲು ಪ್ರಯತ್ನ
ಕನ್ನಡಪ್ರಭ ವಾರ್ತೆ. ಕಡೂರುತೋಟದಲ್ಲಿ ವಿದ್ಯುತ್ ತಂತಿ ತುಳಿದು ಮೃತಪಟ್ಟ ಮರಡೀಹಳ್ಳಿ ರೈತ ಹನುಮಂತಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಮಾಜಿ ಶಾಸಕ ವೈ.ಎಸ್.ವಿ. ದತ್ತ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಹನುಮಂತಪ್ಪನ ಪತ್ನಿ ನೇತ್ರಮ್ಮ ಹಾಗೂ ಮಕ್ಕಳಿಂದ ಮಾಹಿತಿ ಪಡೆದು ಈ ಘಟನೆ ನಡೆಯಬಾರದಿತ್ತು ನಡೆದು ಹೋಗಿದೆ ನಾವು ನಿಮ್ಮೊಂದಿಗಿದ್ದೇವೆ ಎಂದು ಧೈರ್ಯ ತುಂಬಿ ವೈಯಕ್ತಿಕ ನೆರವು ನೀಡಿದರು.ಸುದ್ದಿಗಾರರೊಂದಿಗೆ ಮಾತನಾಡಿ ಮರಡಿಹಳ್ಳಿಯ ಮೃತ ರೈತ ಹನುಮಂತಪ್ಪನ ಸಾವಿನ ಸಂಭಂದ ಪೊಲೀಸ್ ಮತ್ತು ಮೆಸ್ಕಾಂ ಅಧಿಕಾರಿಗಳೊಂದಿಗೆ ಮಾತನಾಡಿದ್ದು ಪ್ರಕರಣ ಎಫ್ ಐ.ಆರ್ ಆಗಿರುವುದರಿಂದ ಸರ್ಕಾರದ ಮಟ್ಟದಲ್ಲಿ ತೀರ್ಮಾನ ಆಗಬೇಕಿದೆ ಎಂದರು. ಘಟನೆ ಕುರಿತಂತೆ ಅಧಿಕಾರಿಗಳಿಂದ ಸಂಭಂದಿತ ದಾಖಲಾತಿಗಳನ್ನು ಪಡೆದು ತಾವು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರನ್ನು ಭೇಟಿ ಮಾಡಿ ಪ್ರಕರಣ ವಿವರಿಸುತ್ತೇನೆ. ಮೆಸ್ಕಾಂನ ನಿರ್ಲಕ್ಷದಿಂದ ರೈತನ ಬಲಿ ಯಾಗಿರುವ ಕಾರಣ ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಆಗ್ರಹಿಸುತ್ತೇನೆ. ಈ ಬಡ ಕುಟುಂಬ ಆರ್ಥಿಕವಾಗಿ ತುಂಬಾ ಸಂಕಷ್ಟಲ್ಲಿದೆ.ಈ ಕುಟುಂಬಕ್ಕೆ ಹೆಚ್ಚಿನ ಪರಿಹಾರ ಒದಗಿಸಲು ಸಚಿವರು ಮತ್ತು ಹಿರಿಯ ಅಧಿಕಾರಿಗಳ ಗಮನ ಸೆಳೆಯುವ ಪ್ರಾಮಾಣಿಕ ಪ್ರಯತ್ನ ಮಾಡು ತ್ತೇನೆ. ವೈಯಕ್ತಿಕವಾಗಿ ನನ್ನ ಕೈಲಾದ ನೆರವು ನೀಡಿದ್ದೇನೆ. ಸರ್ಕಾರದಿಂದ ಕುಟುಂಬಕ್ಕೆ ನೆರವು ಒದಗಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಸದರಿ ವಿಷಯವಾಗಿ ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳು ದತ್ತರವರಿಗೆ ಮನವಿ ಮಾಡಿದರು. ಸಂಘದ ಪದಾಧಿಕಾರಿಗಳು,ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.21ಕೆಕೆಡಿಯು1.
ಮಾಜಿ ಶಾಸಕ ವೈ.ಎಸ್. ವಿ. ದತ್ತರವರು ಕಡೂರು ತಾಲೂಕಿನ ಮರಡೀಹಳ್ಳಿ ಗ್ರಾಮದ ಮೃತ ರೈತ ಹನುಮಂತಪ್ಪನವರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.