ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ ತಾಲೂಕಿನ ಕೃಷ್ಣಾ ನದಿ ಪಾತ್ರದಲ್ಲಿ ಸೋಮವಾರ ಸಂಜೆಯ ವೇಳೆಗೆ ನೀರಿನ ಪ್ರಮಾಣ ಮತ್ತಷ್ಟು ಹೆಚ್ಚಾಗಿದ್ದು, ನದಿ ಪಾತ್ರದ ಗ್ರಾಮಗಳ ಜನರಲ್ಲಿ ಪ್ರವಾಹ ಭೀತಿ ಶುರುವಾಗಿದೆ. ಸೋಮವಾರ ಬೆಳಗಿನಿಂದ ನದಿ ನೀರು ಇಳಿಯಬಹುದು ಎಂದು ತಾಲೂಕಿನ ಅಸ್ಕಿ, ಆಸಂಗಿ, ತಮದಡ್ಡಿ ಸೇರಿದಂತೆ ನದಿ ಪಾತ್ರದ ಜನ ಊಹಿಸಿದ್ದರು. ಆದರೆ ಬೆಳಗಿನಿಂದ ಒಂದು ಅಡಿಗೂ ಹೆಚ್ಚು ನೀರು ಏರಿಕೆಯಾಗಿದೆ ಎಂದು ಅಸ್ಕಿ ಗ್ರಾಮದ ತೋಟದ ನಿವಾಸಿ ಹಣಮಂತ ತಳವಾರ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ತಾಲೂಕಿನ ಕೃಷ್ಣಾ ನದಿ ಪಾತ್ರದಲ್ಲಿ ಸೋಮವಾರ ಸಂಜೆಯ ವೇಳೆಗೆ ನೀರಿನ ಪ್ರಮಾಣ ಮತ್ತಷ್ಟು ಹೆಚ್ಚಾಗಿದ್ದು, ನದಿ ಪಾತ್ರದ ಗ್ರಾಮಗಳ ಜನರಲ್ಲಿ ಪ್ರವಾಹ ಭೀತಿ ಶುರುವಾಗಿದೆ. ಸೋಮವಾರ ಬೆಳಗಿನಿಂದ ನದಿ ನೀರು ಇಳಿಯಬಹುದು ಎಂದು ತಾಲೂಕಿನ ಅಸ್ಕಿ, ಆಸಂಗಿ, ತಮದಡ್ಡಿ ಸೇರಿದಂತೆ ನದಿ ಪಾತ್ರದ ಜನ ಊಹಿಸಿದ್ದರು. ಆದರೆ ಬೆಳಗಿನಿಂದ ಒಂದು ಅಡಿಗೂ ಹೆಚ್ಚು ನೀರು ಏರಿಕೆಯಾಗಿದೆ ಎಂದು ಅಸ್ಕಿ ಗ್ರಾಮದ ತೋಟದ ನಿವಾಸಿ ಹಣಮಂತ ತಳವಾರ ಹೇಳಿದ್ದಾರೆ.ಬೆಳಿಗ್ಗೆ ೭ರ ಸುಮಾರಿಗೆ ಇಂಚಿಂಚು ಏರಲು ಪ್ರಾರಂಭಿಸಿದ್ದು, ಸಂಜೆಯವರೆಗೆ ಒಂದು ಅಡಿ ಏರಿಕೆ ಕಂಡಿದೆ. ಅದಕ್ಕಾಗಿ ನಮ್ಮ ತೋಟದ ಮನೆಯನ್ನು ಬಿಟ್ಟು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾಗಿ ತಿಳಿಸಿದ್ದಾರೆ. ಆಸ್ಕಿ ಗ್ರಾಮವನ್ನು ನೀರು ಸಂಪೂರ್ಣ ಆವರಿಸಿದ್ದು, ಪ್ರಮುಖ ರಸ್ತೆ ಎತ್ತರವಿರುವುದಿಂದ ಸಂಚಾರ ಇದೆ. ನದಿಯಲ್ಲಿ ನೀರು ಇನ್ನಷ್ಟು ಏರಿಕೆ ಕಂಡರೆ ಅಸ್ಕಿ ಗ್ರಾಮ ಸಂಪೂರ್ಣ ಜಲಾವೃತವಾಗುವ ಸಾಧ್ಯತೆ ಇದೆ ಎಂದು ಗ್ರಾಮದ ನಿವಾಸಿ ಹೊಳೆಪ್ಪ ಹಾದಿಮನಿ ತಿಳಿಸಿದರು.
ದನ ಕರುಗಳು, ನದಿ ಪಾತ್ರದಲ್ಲಿರುವ ಮನೆಗಳ ಕುಟುಂಬಸ್ಥರು ಸಂಪೂರ್ಣ ಮನೆ ಖಾಲಿಮಾಡಿ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ. ಯಾವುದೇ ಜನ-ಜಾನುವಾರು ಜೀವಹಾನಿಯಾಗಿಲ್ಲ. ಜನರಲ್ಲಿ ಜಾಗೃತಿ ಮೂಡಿಸಲು ತಾಲೂಕಾಡಳಿತ ಕ್ರಮಗಳನ್ನು ಕೈಗೊಂಡಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.