ಕನ್ನಡಪ್ರಭ ವಾರ್ತೆ ಹುಕ್ಕೇರಿ
ತಾಲೂಕಿನ ಘೋಡಗೇರಿ ಗ್ರಾಮದಲ್ಲಿ ಬುಧವಾರ ಘಟಪ್ರಭಾ ನದಿ ಪ್ರವಾಹ ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ಹಿರಣ್ಯಕೇಶಿ ನದಿ ಪಾತ್ರದಲ್ಲಿ ಬರುವ 16 ಗ್ರಾಮಗಳ ಗ್ರಾಮಸ್ಥರು ತಕ್ಷಣ ಸುರಕ್ಷಿತ ಸ್ಥಳಕ್ಕೆ ತೆರಳಬೇಕು. ಈ ಗ್ರಾಮಸ್ಥರಿಗೆ ತಾಲೂಕಾಡಳಿತ ಕಾಳಜಿ ಕೇಂದ್ರ ತೆರೆದು ಜನರಲ್ಲಿ ಪ್ರವಾಹ ಭೀತಿಯ ಆತಂಕ ನಿವಾರಿಸುವಂತೆ ಸೂಚಿಸಿದರು. ಚಿತ್ರಿ ಜಲಾಶಯದಿಂದ 35 ಸಾವಿರ ಕ್ಯು. ಮತ್ತು ನದಿಯ 7 ಸಾವಿರ ಕ್ಯು. ಸೇರಿ ಒಟ್ಟು 42 ಸಾವಿರ ಕ್ಯು. ಹಿರಣ್ಯಕೇಶಿ ನದಿಗೆ ಮತ್ತು ಹಿಡಕಲ್ ಜಲಾಶಯದಿಂದ 35 ಸಾವಿರ ಕ್ಯು. ನೀರು ಹರಿದು ಬರುತ್ತಿದೆ. ಇದರಿಂದ ಯರನಾಳ-ಹುಕ್ಕೇರಿ ಮತ್ತು ಘೋಡಗೇರಿ-ಹುಕ್ಕೇರಿ ರಸ್ತೆ ಸಂಪರ್ಕ ಕಡಿತವಾಗಿದ್ದು, ಪರ್ಯಾಯ ಮಾರ್ಗ ಬಳಸುವಂತೆ ಅವರು ತಿಳಿಸಿದರು.
ಕಂದಾಯ ನಿರೀಕ್ಷಕ ಮಲ್ಲಿಕಾರ್ಜುನ ಸಾರಾಪೂರಿ, ಪಿಡಿಒ ಮಲ್ಲಿಕಾರ್ಜುನ ಗುಡಸಿ, ಗ್ರಾಮ ಆಡಳಿತಾಧಿಕಾರಿ ಬಸವರಾಜ ಚೌಗಲಾ, ಮುಖಂಡರಾದ ರಾಚಯ್ಯಾ ಹಿರೇಮಠ, ಕಲಗೌಡ ಪಾಟೀಲ, ಆದರ್ಶ ಅಂಕಲಗಿ, ದುಂಡನಗೌಡ ಪಾಟೀಲ, ಗುರು ಕಡೇಲಿ, ಚನ್ನಪ್ಪಾ ಸೊಂಟನವರ, ಮುತ್ತು ಭೂಶಿ, ನಿರ್ವಾಣಿ ಅಂಕಲಗಿ, ಮುತ್ತು ಗೌರಿ, ಶ್ರೀಕಾಂತ ರುದ್ರಪ್ಪಗೋಳ, ಪುಂಡಲೀಕ ಪೂಜೇರಿ, ಬಾಬು ಅಂಕಲಗಿ, ಶ್ರೀಶೈಲ ಭೂಶಿ, ವಿಶಾಲ ಪೂಜೇರಿ, ಸುರೇಶ ರಾಜನ್ನವರ ಮತ್ತಿತರರು ಉಪಸ್ಥಿತರಿದ್ದರು.