ರೋಶನಾರದಲ್ಲಿ ಫೀಲ್ಡ್ ಮಾಷ೯ಲ್ ಕಾರ್ಯಪ್ಪಗೆ ಪುಷ್ಪನಮನ

KannadaprabhaNewsNetwork |  
Published : Jan 30, 2026, 02:30 AM IST
ಚಿತ್ರ : 28ಎಂಡಿಕೆ1 : ರೋಶನಾರದಲ್ಲಿ  ಪುಪ್ಪನಮನ ಸಲ್ಲಿಸಿದ ಕಾಯ೯ಪ್ಪ ಅವರ ಪುತ್ರ ನಿವೃತ್ತ  ಏರ್ ಮಾಷ೯ಲ್ ನಂದಾಕಾಯ೯ಪ್ಪ. | Kannada Prabha

ಸಾರಾಂಶ

ಭಾರತೀಯ ಸೇನಾ ಪಡೆಗಳ ಪ್ರಥಮ ಮಹಾದಂಡನಾಯಕ ಫೀಲ್ಡ್ ಮಾಷ೯ಲ್ ಕೆ.ಎಂ.ಕಾಯ೯ಪ್ಪ ಅವರ 127 ನೇ ಜನ್ಮಜಯಂತಿಯನ್ನು ಮಡಿಕೇರಿಯ ರೋಶನಾರದಲ್ಲಿ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಭಾರತೀಯ ಸೇನಾ ಪಡೆಗಳ ಪ್ರಥಮ ಮಹಾದಂಡನಾಯಕ ಫೀಲ್ಡ್ ಮಾಷ೯ಲ್ ಕೆ.ಎಂ.ಕಾಯ೯ಪ್ಪ ಅವರ 127 ನೇ ಜನ್ಮಜಯಂತಿಯನ್ನು ಮಡಿಕೇರಿಯ ರೋಶನಾರದಲ್ಲಿ ಆಚರಿಸಲಾಯಿತು.ಫೀಲ್ಡ್ ಮಾಷ೯ಲ್ ಕಾಯ೯ಪ್ಪ ಅವರ ನೆಚ್ಚಿನ ಮನೆಯಾಗಿದ್ದ ರೋಶನಾರ ಬಳಿಯಲ್ಲಿರುವ ಕಾಯ೯ಪ್ಪ ಅವರ ಸಮಾಧಿ ಸ್ಥಳದಲ್ಲಿ ಗಣ್ಯರು ಪುಷ್ಪನಮನ ಸಲ್ಲಿಸಿದರು. ಕೊಡಗು ವಿದ್ಯಾಲಯದ ವಿದ್ಯಾಥಿ೯ಗಳಿಂದ ಫೀಲ್ಡ್ ಮಾಷ೯ಲ್ ಕಾಯ೯ಪ್ಪ ಅವರಿಗೆ ಪ್ರಿಯವಾಗಿದ್ದ ಭಜನೆ, ದೇಶಭಕ್ತಿಗೀತ ಗಾಯನ ಜರುಗಿತು.

ಈ ಸಂದಭ೯ ಮಾತನಾಡಿದ ಕಾಯ೯ಪ್ಪ ಅವರ ಪುತ್ರ ನಿವೃತ್ತ ಏರ್ ಮಾಷ೯ಲ್ ನಂದಾಕಾಯ೯ಪ್ಪ,

ಪ್ರತಿ ಭಾರತೀಯನಿಗೂ ತನ್ನ ದೇಶ ಮೊದಲಾಗಬೇಕು. ಭಾರತೀಯತೆ ಆದ್ಯತೆಯಾಗಿರಬೇಕು. ಕೃತಕ ಬುದ್ಧಿಮತ್ತೆಯ ಪ್ರಭಾವ ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ಮಾಧ್ಯಮಗಳಲ್ಲಿ ಬಂದದ್ದೆಲ್ಲಾ ನಿಜವಾಗಿರುವುದಿಲ್ಲ. ಯಾವುದೇ ವಿಚಾರಗಳನ್ನು ಪರಾಮಶಿ೯ಸಿ ಎಂದು ಕಿವಿಮಾತು ಹೇಳಿದರು. ಯಾವುದೇ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ ಭಾರತೀಯ ಸೇನಾ ಪಡೆಯಲ್ಲಿ ಕಾಯ೯ನಿವ೯ಹಿಸಲು ಆದ್ಯತೆ ನೀಡಿ ಎಂದು ಕಿವಿಮಾತು ಹೇಳಿದರು.

ಫೀಲ್ಡ್ ಮಾಷ೯ಲ್ ಕಾಯ೯ಪ್ಪ ಅವರ ಪುತ್ರಿ ನಳಿನಿ ಕಾಯ೯ಪ್ಪ ಸಮಾಧಿ ಸ್ಥಳದಲ್ಲಿ ಜ್ಯೋತಿ ಬೆಳಗಿದರು. .ಫೀಲ್ಡ್ ಮಾಷ೯ಲ್ ಕಾಯ೯ಪ್ಪ ಕುರಿತು ಪ್ರಬಂಧ ಸ್ಪಧೆ೯ಯಲ್ಲಿ ಪ್ರಥಮ ಬಹುಮಾನ ಪಡೆದ ಕೂಡಿಗೆ ಸೈನಿಕ ಶಾಲಾ ಕೆಡೆಟ್ ಧ್ರುವ್ ಭಾರಧ್ವಾಜ್ ಅವರಿಗೆ ಕಾಯ೯ಪ್ಪ ಅವರ ಸೊಸೆ ಮೀನಾ ಕಾಯ೯ಪ್ಪ ಟ್ರೋಫಿ ಪ್ರದಾನ ಮಾಡಿದರು. ಕೊಕ್ಕಲೇರ ಮಹತ್ವ ಅಪ್ಪಯ್ಯ ಕಾಯ೯ಪ್ಪ ಕುರಿತು ಮಾಹಿತಿ ನೀಡಿದರು. ಫೀಲ್ಡ್ ಮಾಷ೯ಲ್ ಕಾಯ೯ಪ್ಪ ಅವರಿಗೆ ಪ್ರಿಯವಾಗಿದ್ದ ಘೋಷವಾಕ್ಯಗಳನ್ನು ಕೊಡಗು ವಿದ್ಯಾಲಯದ ವಿದ್ಯಾಥಿ೯ಗಳು ವಾಚಿಸಿದರು. ಕೊಡಗು ವಿದ್ಯಾಲಯದ ಆಡಳಿತ ಮಂಡಳಿ ನಿದೇ೯ಶಕರಾದ ಗುರುದತ್, ನಿಯತಾ ದೇವಯ್ಯ, ಕೊಡಗು ವಿದ್ಯಾಲಯದ ಪ್ರಾಂಶುಪಾಲ ಕೆ.ಎಸ್. ಸುಮಿತ್ರಾ, ಆಡಳಿತಾಧಿಕಾರಿ ಪಿ.ರವಿ , ನಿವೃತ್ತ ಕನ೯ಲ್ ಬಿ.ಜಿ.ವಿ. ಕುಮಾರ್, ಕನ೯ಲ್ ಕಾವೇರಪ್ಪ ಪ್ರೇಮ್ ನಾಥ್, ಬಾಬು ಸೋಮಯ್ಯ ಹಾಜರಿದ್ದರು. ಮಾಜಿ ಸೈನಿಕರು, ಕೊಡಗು ವಿದ್ಯಾಲಯದ ಎನ್ ಸಿಸಿ ಕೆಡೆಟ್ ಗಳು, ವಿದ್ಯಾಥಿ೯, ಶಿಕ್ಷಕರು, ಕೂಡಿಗೆ ಶಾಲಾ ವಿದ್ಯಾಥಿ೯ಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆಗೆ ಕಾಲಿಟ್ಟಿರೋ ಹುಷಾರ್‌, ಕಚ್ಲಿಕ್ಕೆ ಕಾಯ್ತಿವೆ ಬೀದಿ ನಾಯಿ
ನಗರದಲ್ಲಿ ಡ್ರಗ್ಸ್ ಮಾರಾಟಕ್ಕೆಯತ್ನಿಸಿದ ಮೂವರ ಬಂಧನ