ಕ್ರಾಂತಿಕಾರಿ ಸ್ವಾತಂತ್ರ್ಯ ಕಿಚ್ಚು ಹಚ್ಚಲು ಕಾರಣಕರ್ತರಾದವರೇ ಭಗತ್ ಸಿಂಗ್

KannadaprabhaNewsNetwork |  
Published : Mar 24, 2024, 01:33 AM IST
33 | Kannada Prabha

ಸಾರಾಂಶ

ಸ್ವಾತಂತ್ರ್ಯ ಪೂರ್ವ ದಲ್ಲಿ ದೇಶದ ಉಳಿವಿಗಾಗಿ ಶಾಂತಿಯುತವಾಗಿ ಒಂದು ತಂಡ ಇದ್ದರೇ ಕ್ರಾಂತಿಕಾರಿಯಾಗಿ ಒಂದು ತಂಡ ಬ್ರಿಟಿಷರ ವಿರುದ್ಧ ಹೋರಾಟವನ್ನು ಮಾಡಿ ಸ್ವಾತಂತ್ರ್ಯ ಪಡೆಯಲಾಯಿತು. ಈ ನಿಟ್ಟಿನಲ್ಲಿ ಬ್ರಿಟಿಷರ ಹಿಂದುಗಳ ಮಾರಣಹೋಮವನ್ನು ಧಿಕ್ಕರಿಸಿ ಭಗತ್ ಸಿಂಗ್ ಅವರ ಕುಟುಂಬ ಪಣ ತೊಟ್ಟಿತು, ಅತಿ ಹೆಚ್ಚು ಪರಿಣಾಮ ಬೀರಿದ್ದು ಜಲಿಯಾನ್ ವಾಲಿಬಾಗ್ ನ ಘಟನೆ, ಇದೆ ರೀತಿಯಲ್ಲಿ ಮುಂದುವರೆದ ಬ್ರಿಟಿಷರ ಅಂತ್ಯ ಮಾಡಲು ಪಾರ್ಲಿಮೆಂಟ್ ನ ಕೆಂಪು ಕೋಟೆ ಯ ಮೇಲೆ ಬಾಂಬ್ ದಾಳಿ ಮಾಡಿ ಬ್ರಟಿಷರೇ ಬಾರತ ಬಿಟ್ಟು ತೊಲಗಿ, ಇಂಕ್ವೀಲಾಬ್ ಜಿಂದಾ ಬಾದ್ ಎಂಬ ಘೊಷಣೆ ಎಂಬ ವಾಕ್ಯದಲ್ಲಿ ಹೋರಾಟ ಮಾಡಿ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿ ಕೇವಲ 23 ವರ್ಷದ ಯುವಕರಾಗಿದ್ದವರವನ್ನು ಮಾ. 23 ರಂದು ಬಲಿದಾನ ಮಾಡಿದ್ದು, ನಮ್ಮ ರಾಷ್ಟ್ರದ ಕರಾಳ ದಿಂದ ಎಂದು ಹಿಂದು ದೇಶಭಕ್ತ ಘೊಷಣೆ ಮಾಡಬೇಕೆಂದು ಕೋರಲಾಯಿತು

ಕನ್ನಡಪ್ರಭ ವಾರ್ತೆ ಮೈಸೂರು

ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಯುವಕರಲ್ಲಿ ಕ್ರಾಂತಿಕಾರಿ ಸ್ವಾತಂತ್ರ್ಯ ಕಿಚ್ಚು ಹಚ್ಚಲು ಕಾರಣಕರ್ತರಾದವರೇ ಭಗತ್ ಸಿಂಗ್ ಎಂದು ಮಾಜಿ ಸೈನಿಕ ಮಹೇಶ್ ಹೇಳಿದರು.

ಭಗತ್ ಸಿಂಗ್, ರಾಜ್ ಗುರು, ಸುಖದೇವ್ ಅವರ ಹುತಾತ್ಮರ ದಿನಾಚರಣೆ ಅಂಗವಾಗಿ ಜೈ ಹಿಂದ್ ಕಾರ್ಯಕ್ರಮವನ್ನು ಪ್ರಜ್ಞಾವಂತ ನಾಗರಿಕ ವೇದಿಕೆ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ನಂತರ ಅವರು ಮಾತನಾಡಿದರು.

ಸ್ವಾತಂತ್ರ್ಯ ಪೂರ್ವ ದಲ್ಲಿ ದೇಶದ ಉಳಿವಿಗಾಗಿ ಶಾಂತಿಯುತವಾಗಿ ಒಂದು ತಂಡ ಇದ್ದರೇ ಕ್ರಾಂತಿಕಾರಿಯಾಗಿ ಒಂದು ತಂಡ ಬ್ರಿಟಿಷರ ವಿರುದ್ಧ ಹೋರಾಟವನ್ನು ಮಾಡಿ ಸ್ವಾತಂತ್ರ್ಯ ಪಡೆಯಲಾಯಿತು. ಈ ನಿಟ್ಟಿನಲ್ಲಿ ಬ್ರಿಟಿಷರ ಹಿಂದುಗಳ ಮಾರಣಹೋಮವನ್ನು ಧಿಕ್ಕರಿಸಿ ಭಗತ್ ಸಿಂಗ್ ಅವರ ಕುಟುಂಬ ಪಣ ತೊಟ್ಟಿತು, ಅತಿ ಹೆಚ್ಚು ಪರಿಣಾಮ ಬೀರಿದ್ದು ಜಲಿಯಾನ್ ವಾಲಿಬಾಗ್ ನ ಘಟನೆ, ಇದೆ ರೀತಿಯಲ್ಲಿ ಮುಂದುವರೆದ ಬ್ರಿಟಿಷರ ಅಂತ್ಯ ಮಾಡಲು ಪಾರ್ಲಿಮೆಂಟ್ ನ ಕೆಂಪು ಕೋಟೆ ಯ ಮೇಲೆ ಬಾಂಬ್ ದಾಳಿ ಮಾಡಿ ಬ್ರಟಿಷರೇ ಬಾರತ ಬಿಟ್ಟು ತೊಲಗಿ, ಇಂಕ್ವೀಲಾಬ್ ಜಿಂದಾ ಬಾದ್ ಎಂಬ ಘೊಷಣೆ ಎಂಬ ವಾಕ್ಯದಲ್ಲಿ ಹೋರಾಟ ಮಾಡಿ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿ ಕೇವಲ 23 ವರ್ಷದ ಯುವಕರಾಗಿದ್ದವರವನ್ನು ಮಾ. 23 ರಂದು ಬಲಿದಾನ ಮಾಡಿದ್ದು, ನಮ್ಮ ರಾಷ್ಟ್ರದ ಕರಾಳ ದಿಂದ ಎಂದು ಹಿಂದು ದೇಶಭಕ್ತ ಘೊಷಣೆ ಮಾಡಬೇಕೆಂದು ಕೋರಲಾಯಿತು

ನಗರಪಾಲಿಕೆ ಮಾಜಿ ಸದಸ್ಯೆ ಪ್ರಮೀಳಾ ಭರತ್ ಯುವಕರು ದೇಶದ ರಕ್ಷಣೆಗೆ ಮುಂದಾಗಲಿ, ಮಳೆ, ಗಾಳಿ, ಚಳಿ, ಬಿಸಿಲನ್ನು ಲೆಕ್ಕಿಸದೆ ದೇಶದ ರಕ್ಷಣೆ ಮಾಡುವರು ನಮ್ಮ ಸೈನಿಕರು. ಅವರ ಸೇವೆ ಎಷ್ಟೇ ವರ್ಣಿಸಿದರೂ ಸಾಲದು. ಯುವ ಜನಾಂಗ ದೇಶದ ರಕ್ಷಣೆಗಾಗಿ ಸೇನೆಗೆ ಸೇರ್ಪಡೆಯಾಗಲು ಮುಂದಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಹುತಾತ್ಮರ ಭಾವಚಿತ್ರ ಹಿಡಿದು ಇಂಕ್ವಿಲಾಬ್ ಜಿಂದಾವಾದ್, ಅಮರ್ ರಹೇ ಭಗತ್ ರಾಜಗುರು ಸುಖದೇವ್ ಎಂದು ಘೋಷಣೆ ಕೂಗಿದರು.

ಕೆ.ಜೆ. ರಮೇಶ್, ಜಗದೀಶ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಅಪೂರ್ವ ಸುರೇಶ್, ಅಜಯ್ ಶಾಸ್ತ್ರಿ, ವಿಘ್ನೇಶ್ವರ ಭಟ್, ನಾರಾಯಣ ಶರ್ಮ, ನಾಗಮಣಿ, ಸುದರ್ಶನ್, ಚರಣ್, ಸುಕನ್ಯಾ, ರಾಮ್, ದಯಾನಂದ್, ಮಹಿಳಾ ವಿಜಯ್ ಕುಮಾರ್, ಬೈರತಿ ಲಿಂಗರಾಜು, ರಮೇಶ್ ಇದ್ದರು.

PREV

Recommended Stories

ಮದ್ದೂರು ಗಣೇಶ ಗಲಾಟೆಗೆ ಪೂರ್ಣ ಮುಸ್ಲಿಮರೇ ಕಾರಣ: ಸಚಿವ ಚಲುವ
ಬುರುಡೆ ಕೇಸ್‌ : ಸಾಕ್ಷಿದಾರರ ಬಂಧನ..? ಮಟ್ಟಣ್ಣವರ್‌, ಜಯಂತ್‌, ಅಭಿಷೇಕ್, ಮನಾಫಾ ವಿಠಲಗೆ ಗ್ರಿಲ್