ವಿದೇಶಿ ಹಣ್ಣು, ವಾಣಿಜ್ಯ ಪುಷ್ಪಗಳ ಬೇಸಾಯ ಕುರಿತ ತರಬೇತಿ ಕಾರ್ಯಾಗಾರ, ಪ್ರದರ್ಶನ
ತೋಟಗಾರಿಕೆ ಬೆಳೆಯಲ್ಲಿ ಪುಷ್ಪ ಕೃಷಿ ಬಹು ಮುಖ್ಯವಾದ ಪಾತ್ರ ಹೊಂದಿದೆ. ಇದು, ಹೆಚ್ಚು ಆದಾಯ ತಂದುಕೊಡುತ್ತದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದ್ದಾರೆ.
ಕಾಫಿ ಮಂಡಳಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ ಹಾಗೂ ಕಾಫಿ ಮಂಡಳಿ ಸಂಯುಕ್ತಾಶ್ರಯದಲ್ಲಿ ಪ್ರಸಕ್ತ ಸಾಲಿನ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ ಅಪ್ರಧಾನ ವಿದೇಶಿ ಹಣ್ಣು ಮತ್ತು ವಾಣಿಜ್ಯ ಪುಷ್ಪಗಳ ಬೇಸಾಯದ ಕುರಿತು ನಡೆದ ತರಬೇತಿ ಕಾರ್ಯಾಗಾರ-ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.ಬಿಡಿ ಹೂವುಗಳನ್ನು ಹಾರ ತಯಾರಿಕೆ, ಬಾಕ್ವೇಟ್ ತಯಾರಿಕೆ, ದೇವರ ಪೂಜೆ, ವೇದಿಕೆ ಅಲಂಕಾರ ಮತ್ತು ಬಣ್ಣ ತೆಗೆಯಲು ಬಳಸಲಾಗುತ್ತಿದೆ. ಈ ಕೃಷಿಯಲ್ಲಿ ಪುಷ್ಪಗಳನ್ನು ಅತೀ ಕಡಿಮೆ ಭೂಮಿಯಲ್ಲಿ ಬೆಳೆದು ಹೆಚ್ಚು ಆದಾಯ ಗಳಿಸಬಹುದು ಎಂದು ತಿಳಿಸಿದರು.
ಸೋಮನಹಳ್ಳಿ ಕಾವಲಿನ ತೋಟಗಾರಿಕೆ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ ಡಾ.ನಟರಾಜ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ತೋಟಗಾರಿಕೆ ಅಧಿಕಾರಿ ಅರುಣ್‌ಕುಮಾರ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ನೇತ್ರಾವತಿ ಸ್ವಾಗತಿಸಿ, ನಟೇಶ್‌ಕುಮಾರ್ ವಂದಿಸಿದರು. 14 ಕೆಸಿಕೆಎಂ 2ಚಿಕ್ಕಮಗಳೂರಿನ ಕಾಫಿ ಮಂಡಳಿ ಸಭಾಂಗಣದಲ್ಲಿ ನಡೆದ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾತನಾಡಿದರು. ಜಿಪಂ ಸಿಇಓ ಕೀರ್ತನಾ, ಕಾಫಿ ಮಂಡಳಿ ಉಪ ನಿರ್ದೇಶಕ ವೆಂಕಟರೆಡ್ಡಿ, ಪೂರ್ಣಿಮಾ ಇದ್ದರು.