ಕನ್ನಡಪ್ರಭ ವಾರ್ತೆ ಮಂಡ್ಯ
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (ಮಂಡ್ಯ ಶಾಖೆ) ವತಿಯಿಂದ ನಗರದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಸಭಾಂಗಣದಲ್ಲಿ ಕೃಷಿ ಸಾಲ ಸಂಪರ್ಕ ಕಾರ್ಯಕ್ರಮ ಹಾಗೂ ಕೃಷಿ ಸಾಲ ಫಲಾನುಭವಿಗಳು ಮತ್ತು ಸ್ವಸಹಾಯ ಸಂಘದ ಸದಸ್ಯರಿಗೆ ಪೂರ್ವ-ಮಂಜೂರಾತಿ ಪತ್ರಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮೀಣ ಅಭಿವೃದ್ಧಿಯಿಂದ ಮಾತ್ರ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ. ಇದರಲ್ಲಿ ಹೆಣ್ಣುಮಕ್ಕಳ ಸಬಲೀಕರಣ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂಬುದು ಪ್ರಧಾನಮಂತ್ರಿಯವರ ಆಶಯವಾಗಿದೆ. ಮಹಿಳೆಯರು ಸಾಲದ ನೆರವಿನಿಂದ ಮನೆಯಲ್ಲೇ ಉಪ್ಪಿನಕಾಯಿ, ಟೊಮೆಟೋ ಕೆಚಪ್ ಮುಂತಾದ ಸಣ್ಣ ಕೈಗಾರಿಕೆಗಳನ್ನು ಪ್ರಾರಂಭಿಸಿ ಆರ್ಥಿಕವಾಗಿ ಬೆಳೆಯಬೇಕು. ತಾವು ಗಳಿಸಿದ ಆದಾಯದಲ್ಲಿ ಶೇ.೨೦ರಿಂದ ೩೦ರಷ್ಟನ್ನು ಭವಿಷ್ಯಕ್ಕಾಗಿ ಉಳಿತಾಯ ಮಾಡಬೇಕು ಎಂದರು.ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಬೆಂಗಳೂರು ವಲಯದ ಪ್ರಾದೇಶಿಕ ಮುಖ್ಯಸ್ಥ ಸತೀಶ್ ಬಾಬು ಮಾತನಾಡಿ, ಸೆಂಟ್ರಲ್ ಬ್ಯಾಂಕ್ ೧೯೧೧ ರಲ್ಲಿ ಭಾರತೀಯರಿಗಾಗಿ ಭಾರತೀಯರೇ ಪ್ರಾರಂಭಿಸಿದ ಮೊದಲ ಸ್ವದೇಶಿ ಬ್ಯಾಂಕ್ ಆಗಿದೆ. ಪ್ರಸ್ತುತ ದೇಶಾದ್ಯಂತ ೪೫೦೦ ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. ಗ್ರಾಮೀಣ ಹಾಗೂ ಕೃಷಿ ವಲಯದ ಅಭಿವೃದ್ಧಿಗೆ ಬ್ಯಾಂಕ್ ಸದಾ ಬದ್ಧವಾಗಿದೆ. ರೈತರು, ಮಹಿಳಾ ಸ್ವಸಹಾಯ ಸಂಘಗಳು ಹಾಗೂ ಸಣ್ಣ ಉದ್ಯಮಿಗಳಿಗೆ ಆರ್ಥಿಕ ನೆರವು ನೀಡುವುದು ಮತ್ತು ಅವರ ಆರ್ಥಿಕ ಮಟ್ಟವನ್ನು ಸುಧಾರಿಸುವುದು ಈ ಸಾಲ ಸಂಪರ್ಕ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕೃಷಿ ವಿವಿ ಆಡಳಿತ ಮಂಡಳಿ ಸದಸ್ಯರಾದ ಡಾ.ಎಸ್.ಸಿ.ಅಶ್ವತ್ಥನಾರಾಯಣ, ಕಾನೂನು ಸಲಹೆಗಾರ ಎಂ. ಗುರುಪ್ರಸಾದ್, ನಿವೃತ್ತ ಬ್ಯಾಂಕ್ ಅಧಿಕಾರಿ ಜಯರಾಮಯ್ಯ, ಬ್ಯಾಂಕ್ ಸಿಬ್ಬಂದಿ ಮಂಡ್ಯ ಶಾಖೆಯ ಮುಖ್ಯಸ್ಥ ಪ್ರಜ್ವಲ್ ಹಾಗೂ ತಂಡದ ಸದಸ್ಯರಾದ ನಾಗೇಶ್, ಕಾರ್ತಿಕ್, ಭೂಮಿಕಾ, ಲಾವಣ್ಯ, ಸುನೀಲ್‌ಕುಮಾರ್ ಇತರರಿದ್ದರು.