ಅಧಿಕಾರಿಗಳಿಗೆ ಡಿಸಿ ಫೌಜಿಯಾ ತರನ್ನುಮ್ ಸೂಚನೆ
ಕನ್ನಡಪ್ರಭ ವಾರ್ತೆ ಕಲಬುರಗಿಆಹಾರ ಸುರಕ್ಷಿತಾ ಮತ್ತು ಗುಣಮಟ್ಟ ಪ್ರಾಧಿಕಾರ ಕಲಬುರಗಿ ಎಫ್‍ಎಸ್‍ಎಸ್‍ಎಐ ವತಿಯಿಂದ ಜಿಲ್ಲಾಮಟ್ಟದ ಸಲಹಾ ಸಮಿತಿ ಸಭೆಯನ್ನು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ರವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಇಲಾಖೆಯ ಕಾರ್ಯವೈಖರಿಯ ಬಗ್ಗೆ ಪ್ರಗತಿ ಬಗ್ಗೆ ಚರ್ಚೆ ನಡೆಸಲಾಯಿತು.ಗುರುವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸರ್ಕಾರಿ ಅಧೀನದಲ್ಲಿರುವ ಸರ್ಕಾರಿ ವಸತಿ ನಿಲಯಗಳು, ಸರ್ಕಾರಿ ಶಾಲೆಗಳು, ಅಂಗನವಾಡಿ ಕೇಂದ್ರಗಳು ಭೇಟಿಗಳಿಗೆ ನೀಡಿ ಪರಿಶೀಲಿಸಿ ಆಹಾರ ಸುರಕ್ಷಿತಾ ಬಗ್ಗೆ ಅಧಿಕಾರಿಗಳಿಗೆ ಕ್ರಮವಹಿಸಿಲು ಡಿಸಿ ಸೂಚಿಸಿದರು.ಹೊಟೇಲ್ ಮತ್ತು ರೆಸ್ಟೋರೆಂಟಗಳಲ್ಲಿ ಆಹಾರ ತಯಾರಿಸುವ ಸಿಬ್ಬಂದಿಗಳ ಆರೋಗ್ಯ ತಪಾಸಣೆ, ಗುಣಮಟ್ಟದ ಆಹಾರ, ಕುಡಿಯುವ ನೀರು, ಬಿದಿ ಬದಿಯ ವ್ಯಾಪಾರದ ಆಹಾರ ಸುರಕ್ಷತೆ, ಚಿತ್ರಮಂದಿರದಲ್ಲಿನ ಆಹಾರ ಮಳಿಗೆಗಳ ಪರಿಶೀಲನೆ ಬಗ್ಗೆ ಕ್ರಮವಹಿಸಬೇಕು. ಯಾವುದೇ ಲೋಪ ಆಗದಂತೆ ಎಚ್ಚರ ವಹಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.
ಸಾರ್ವಜನಿಕರಲ್ಲಿ ಸತತವಾಗಿ ಜಾಗೃತಿ ಕಾರ್ಯಕ್ರಮವನ್ನು ಎಲ್ಲಾ ಹೋಬಳಿಮಟ್ಟ, ತಾಲೂಕು ಮಟ್ಟದಲ್ಲಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಬೇಕು. ಹೋಟೆಲ್, ಆಸ್ಪತ್ರೆ, ಅಂಗನವಾಡಿಗಳನ್ನು ಗಮನ ಹರಿಸಬೇಕು. ಈಟ್ ರೈಟ್ ಹಣ್ಣು ಮತ್ತು ವೆಜಿಟೆಬಲ್ ಮಾರುಕಟ್ಟೆಗಳು ತರಕಾರಿ ಮಂಡಿಯ ವ್ಯಾಪಾರಸ್ಥರು ಮಾರಾಟ ಮಾಡುವ ಹಣ್ಣು ಮತ್ತು ತರಕಾರಿಗಳ ಶುಚಿತ್ವ ಮತ್ತು ಗುಣಮಟ್ಟವನ್ನು ಸುಧಾರಿಸುವ ಉಪಕ್ರಮವಾಗಿದೆ ಇದು ಸ್ಥಳೀಯ ಮಾರುಕಟ್ಟೆಗಳಲ್ಲಿ ಶುದ್ದ ಮತ್ತು ತಾಜಾ ಹಣ್ಣುಗಳು ಮತ್ತು ತರಕಾರಿಗಳ ಬಗ್ಗೆ ಗ್ರಾಹಕರಿಗೆ ವಿಶ್ವಾಸವನ್ನು ಬೆಳೆಸುವ ಗುರಿಯನ್ನು ಹೊಂದಲು ತಿಳಿಸಿದರು.ಇದಕ್ಕೂ ಮುನ್ನ ಈಟ್ ರೈಟ್ ಇಂಡಿಯಾದ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಅಂಕಿತಾಧಿಕಾರಿಗಳಾದ ರತ್ನಕರ್ ತೋರಣ, ಡಿ.ಎಚ್.ಓ. ಶರಣಬಸಪ್ಪ ಖ್ಯಾತನಾಳ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶ ಬೀಮರಾಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶ ರಾಜಕುಮಾರ ರಾಠೋಡ, ಸೇರಿದಂತೆ ಎಲ್ಲಾ ತಾಲೂಕಿನ ಆಹಾರ ಸುರಕ್ಷತಾಧಿಕಾರಿಗಳಾದ ಶ್ರೀಶೈಲ ಮಳ್ಳಿ, ಪ್ರದೀಪಕುಮಾರ, ಅರವೀಂದ ಡಾಂಗೆ, ರವೀಂದ್ರ ಉಮೇಶ, ಶಿವಯೋಗಪ್ಪ ವೆಂಕಟೇಶ ಬಜಾರ ಉಪಸ್ಥಿತರಿದ್ದರು.