ಸ್ಟಾರ್ಟಪ್ ಯೋಜನೆಗಳತ್ತ ಗಮನ ಹರಿಸಿ: ಡಾ. ರಂಗಸ್ವಾಮಿ

KannadaprabhaNewsNetwork |  
Published : Oct 13, 2026, 02:30 AM IST
ಸೋದೆ ಶ್ರೀಗಳು ರ್‍ಯಾಂಕ್ ಪಡೆದ ಕುಮಾರಿ ಸಿಂಚನರನ್ನು ಸನ್ಮಾನಿಸಿದರು.  | Kannada Prabha

ಸಾರಾಂಶ

ಇಲ್ಲಿನ ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ 13 ನೇ “ಪದವಿ ಪ್ರದಾನ” ಸಮಾರಂಭವು ಕಾಲೇಜಿನ ಆವರಣದಲ್ಲಿ ನಡೆಯಿತು.

ಕಾಪು ; ಇಲ್ಲಿನ ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ 13 ನೇ “ಪದವಿ ಪ್ರದಾನ” ಸಮಾರಂಭವು ಕಾಲೇಜಿನ ಆವರಣದಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ದಾವಣಗೆರೆ ವಿವಿಯ ಕುಲಪತಿ ಡಾ. ಬಿ. ಇ. ರಂಗಸ್ವಾಮಿ ಅವರು, ಶಿಕ್ಷಣವು ಉಜ್ವಲ ಭವಿಷ್ಯದ ಅಡಿಪಾಯವಾಗಿದ್ದು ಇಂದು ಹೆಚ್ಚು ಬೇಡಿಕೆಯಲ್ಲಿರುವ ಸ್ಟಾರ್ಟ್ ಅಪ್ ಇಂಡಿಯಾ ಯೋಜನೆಯ ಅವಕಾಶಗಳನ್ನು ಬಳಸಿಕೊಳ್ಳಬೇಕು, ದೊಡ್ಡ ಕನಸಿನೊಂದಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಗೌರವ ಅತಿಥಿಯಾಗಿ ಆಗಮಿಸಿದ್ದ ಧಾರವಾಡದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ (ಐಐಟಿ)ಯ ನಿರ್ದೇಶಕ ಡಾ. ವೆಂಕಪ್ಪಯ್ಯ ಆರ್.ದೇಸಾಯಿ ಅವರು, ನಮ್ಮ ಮುಂದಿರುವ ಅನೇಕ ಸಮಸ್ಯೆಗಳ ಪರಿಹಾರಕ್ಕೆ ಕಡಿಮೆ ಬಳಕೆ, ಮರುಬಳಕೆ ಮತ್ತು ಮರುಸಂಸ್ಕರಣೆ” ತತ್ವಗಳನ್ನು ಅಳವಡಿಸಿಕೊಳ್ಳುವಂತೆ ಹಾಗೂ ವೃತ್ತಿಯಲ್ಲಿ ನೈತಿಕ ಮೌಲ್ಯಗಳಿಗೆ ಆದ್ಯತೆ ನೀಡುವಂತೆ ಪದವೀಧರರಿಗೆ ಕಿವಿ ಮಾತು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಶ್ರೀ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಅವರು ಸಿಂಚನ, ಕೀರ್ತಿ, ಎಂ. ಶಫಾಜ್ ಎ. ಆರ್., ಹರ್ಷಿತ್ ರಾಜು, ಅನ್ನಪೂರ್ಣ ಶೆಣೈ, ವಿಕಾಸ್, ರಕ್ಷಾ ಸುಬ್ರಮಣ್ಯ ಶೆಟ್ಟಿ ಅವರ ಶೈಕ್ಷಣಿಕ ಸಾಧನೆಗಾಗಿ ಚಿನ್ನದ ಪಕದಗಳನ್ನು ನೀಡಿ ಆಶೀರ್ವದಿಸಿದರು.ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಮತ್ತು ಡಾಟಾ ಸೈನ್ಸ್ ವಿಭಾಗದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ 4ನೇ ರ್‍ಯಾಂಕ್ ಪಡೆದ ಕುಮಾರಿ ಸಿಂಚನ ಅವರನ್ನು ಸನ್ಮಾನಿಸಲಾಯಿತು.

ಆಡಳಿತ ಮಂಡಳಿಯ ಸದಸ್ಯ ಡಾ. ಗುರುರಾಜ್ ಕಿದಿಯೂರ್, ಹರೀಶ್ ಬೆಳ್ಮಣ್, ಪ್ರೊ. ಬಿ. ಎಸ್. ರೆವಣಕರ್, ಶ್ಯಾಮ ಸುಂದರ್, ನಂದಕುಮಾರ್ ಉಪಾಧ್ಯಾಯ, ಡೀನ್‌ಗಳಾದ ಡಾ. ಸುದರ್ಶನ್ ರಾವ್, ಡಾ. ನಾಗರಾಜ್ ಭಟ್, ಡಾ. ಸಚಿನ್ ಭಟ್ ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು ಹಾಜರಿದ್ದರು.ಶ್ರೀ ಸೋದೆ ವಾದಿರಾಜ ಎಜ್ಯುಕೇಶನ್ ಟ್ರಸ್ಟ್ ಕಾರ್ಯದರ್ಶಿ ರತ್ನಕುಮಾರ್ ಪದವಿಧರ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಪ್ರಾಂಶುಪಾಲ ಡಾ. ನಾಗರಾಜ್ ಭಟ್ ಸ್ವಾಗತಿಸಿದರು. ಡಾ. ಸುದರ್ಶನ್ ರಾವ್ ಪದವೀಧರರಿಗೆ ಪ್ರಮಾಣವಚನ ಭೋದಿಸಿದರು. ಡಾ. ಸಚಿನ್ ಎಸ್ ಭಟ್ ವಂದಿಸಿದರು. ಪ್ರಾಧ್ಯಾಪಕ ಸಹನ ಎಸ್. ಆರ್. ಮತ್ತು ಡಾ. ಪುನೀತ್ ಬೇಕಲ್ ನಿರೂಪಿಸಿದರು

ವೈಫಲ್ಯ ಎದುರಿಸುವ ಶಕ್ತಿ ಬೆಳೆಸಿಕೊಳ್ಳಿ: ಸೋದೆ ಶ್ರೀ

ಪ್ರಾಮಾಣಿಕತೆ, ನೈತಿಕ ಮೌಲ್ಯಗಳು, ಸಾಮಾಜಿಕ ಜವಾಬ್ದಾರಿ, ನಿರಂತರ ಕಲಿಕೆ ಹಾಗೂ ಮತ್ತು ವೈಫಲ್ಯಗಳನ್ನು ಧೈರ್ಯದಿಂದ ಎದುರಿಸುವ ಶಕ್ತಿಯನ್ನು ಇಂದಿನ ಯುವಜನತೆ ಬೆಳೆಸಿಕೊಳ್ಳಬೇಕು ಎಂದು ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಪದವಿ ಪಡೆದು ಕಾಲೇಜಿನಿಂದ ನಿರ್ಗಮಿಸುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯ ಹಿಂದೆ ಪೋಷಕರ ತ್ಯಾಗ ಮತ್ತು ಶಿಕ್ಷಕರ ಸಮರ್ಪಣೆ ಇರುತ್ತದೆ, ಇದನ್ನು ನೆನಪಿಟ್ಟುಕೊಂಡು ಸಮಾಜದ ಉನ್ನತಿಗೆ ಕೊಡುಗೆ ನೀಡಬೇಕು ಎಂದವರು ಆಶೀರ್ವದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಜಗೋಳಿ ಪಿಯು ಕಾಲೇಜಲ್ಲಿ ಆಳ್ವಾಸ್ ಎನ್‌ಎಸ್‌ಎಸ್‌ ಶಿಬಿರ ಆರಂಭ
ಕಾರ್ಕಳ: ಬಾವಿಗೆ ಬಿದ್ದ ಗೂಳಿಯ ರಕ್ಷಣೆ