ಕನ್ನಡಪ್ರಭ ವಾರ್ತೆ ಹಲಗೂರು
ಹಾಡ್ಲಿ ಸರ್ಕಾರಿ ಪ್ರೌಢಶಾಲೆ ರಂಗ ಮಂದಿರದ ಆವರಣದಲ್ಲಿ ಮಹೇಶ್ವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ 76ನೇ ಗಣರಾಜೋತ್ಸವ ಅಂಗವಾಗಿ ನಡೆದ ಜಾನಪದ ಕಲಾ ಜೆಂಕಾರ ಮತ್ತು ಸಂಕ್ರಾತಿ ಸಾಂಸ್ಕೃತಿಕ ಸಂಭ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಹಲವು ಜಾನಪದ ಕಲೆಗಳನ್ನು ಕಾಣಬಹುದು. ಪೋತ್ಸಾಹ ಹಾಗೂ ಕಲಾವಿದರ ಸಮಸ್ಯೆಯಿಂದ ಕಲೆ ನಶಿಸು ಹೋಗುತ್ತಿರುವ ಪ್ರಸ್ತುತ ಜಾನಪದ ಕಲೆಯನ್ನು ಪ್ರೋತ್ಸಾಹಿಸುವ ಆಗತ್ಯವಿದೆ ಎಂದರು.ಮಹೇಶ್ವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ನಿಂದ ಜಾನಪದ ಕಲೆಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡಲಾಗುವುದು, ಜಾನಪದ ಕಲೆಯಲ್ಲಿಯೇ ರಾಷ್ಟ್ರ ಮಟ್ಟದಲ್ಲಿ ಪ್ರತಿಭೆ ಅನಾವರಣ ಮಾಡುವ ಅವಕಾಶಗಳಿವೆ. ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಸೋಮಜಮ್ಮ, ಶಿಕ್ಷಕರಾದ ಎಂ.ಪಿ.ಶಿವಪ್ರಕಾಶ್, ಎಂ.ಸರವಣನ್, ಕೆ.ವಿನುತ, ಎಂ. ನಂಜಶೆಟ್ಟಿ, ಎಂ. ಜಯಮ್ಮ, ಎಚ್‌ಎಸ್ ಶಿವಕುಮಾರ್, ಪ್ರಜ್ವಲ್‌ಕುಮಾರ್, ಉಮಾ, ದ್ವಿತೀಯ ದರ್ಜೆ ಸಹಾಯಕ ಪುಟ್ಟರಾಜು, ನೌಕರ ಎಂ.ಎಲ್ ಮಂಜುನಾಥ್, ಕಲಾವಿದರಾದ ಎಂ ಮಹೇಂದ್ರ, ನಾಗೇಶ್, ಮಹೇಶ್, ಸೇರಿದಂತೆ ಇತರರು ಇದ್ದರು.