ಜನಪದ ಕಲೆಗಳು ಜ್ಞಾನಪ್ರದ ಕಲೆಗಳಾಗಿವೆ: ಪರ್ಯಾಯ ಪುತ್ತಿಗೆ ಶ್ರೀ

KannadaprabhaNewsNetwork |  
Published : Oct 30, 2024, 12:40 AM IST
28ಜನಪದ | Kannada Prabha

ಸಾರಾಂಶ

ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠ ಆಶ್ರಯದಲ್ಲಿ ಕರ್ನಾಟಕ ಜಾನಪದ ಪರಿಷತ್‌, ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಹಾಗೂ ಜಾನಪದ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನಗಳ ಆಶ್ರಯದಲ್ಲಿ ‘ಜಾನಪದ ಹಬ್ಬ-೨೦೨೪ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಮಾನವನ ಸಹಜ ಭಾವನೆಗಳನ್ನು ವ್ಯಕ್ತಪಡಿಸುವ ಮೂಲಕ ಉತ್ತಮ ಸಂದೇಶಗಳನ್ನು ನೀಡುವ ನಮ್ಮ ನಾಡಿನ ಜನಪದ ಕಲೆಗಳು ಶ್ರೇಷ್ಠ ಕಲೆಗಳಾಗಿವೆ. ಇವು ಜ್ಞಾನಪ್ರದ ಕಲೆಗಳಾಗಿವೆ ಎಂದು ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರು ಹೇಳಿದರು.ಅವರು ಭಾನುವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠ ಆಶ್ರಯದಲ್ಲಿ ಕರ್ನಾಟಕ ಜಾನಪದ ಪರಿಷತ್‌, ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಹಾಗೂ ಜಾನಪದ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನಗಳ ಆಶ್ರಯದಲ್ಲಿ ಆಯೋಜಿಸಲಾದ ‘ಜಾನಪದ ಹಬ್ಬ-೨೦೨೪’ನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.ಜಾನಪದ ಕಲೆಗಳಲ್ಲಿ ಪಾಶ್ಚಿಮಾತ್ಯ ದೇಶಗಳ ಕಲೆಗಳಂತೆ ಕೃತಿಮತೆ ಇಲ್ಲ. ಜಾನಪದ ಕಲೆಗಳು ಜೀವನಕ್ಕೆ ಸಹಜತೆಯನ್ನು ತಂದು ಕೊಡುತ್ತವೆ ಎಂದ ಅವರು, ದೀಪಾವಳಿಯ ಪರ್ವದ ಸಂದರ್ಭದಲ್ಲಿ ಈ ಜಾನಪದ ಹಬ್ಬವನ್ನು ಆಯೋಜಿಸಿರುವ ಡಾ.ತಲ್ಲೂರು ಅಭಿನಂದನಾರ್ಹರು ಎಂದರು.ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಮಾತನಾಡಿ, ಇಂದು ಶ್ರೀಮಂತಿಕೆ ಹಾಗೂ ಅಧಿಕಾರವನ್ನು ಪೂಜಿಸುವ ಕೆಲಸವಾಗುತ್ತಿದೆ. ಶ್ರೀಮಂತಿಗೆ ತಪ್ಪಲ್ಲ ಆದರೆ ಅದು ನೈತಿಕತೆಯಿಂದ ಬರಬೇಕು. ಮಾವೀಯತೆ ಮರೆಯಬಾರದು. ಮಾನವೀಯತೆ ನಮ್ಮ ಹಿರಿಯರು ಕಟ್ಟಿಕೊಟ್ಟ ಜೀವನ ಮೌಲ್ಯವಾಗಿದೆ. ಅದನ್ನು ಅನುಸರಿಸಿದರೆ ನಾವು ಶಾಂತಿ, ಸಾಮರಸ್ಯದಿಂದ ಬದುಕಬಹುದು ಎಂದು ಕಿವಿಮಾತು ಹೇಳಿದರು.ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್‌ ಪ್ರವರ್ತಕ ಡಾ.ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ಜಾನಪದ ಪರಿಷತ್ತಿನ ಮೂಲಕ ನಾಡಿನ ಜಾನಪದ ಕಲೆಗಳನ್ನು ಉಳಿಸುವ, ಕಲಾವಿದರಿಗೆ ಪ್ರೋತ್ಸಾಹ ನೀಡುವುದಕ್ಕಾಗಿ, ಕೈಯಿಂದ ಹಣ ಖರ್ಚಾದರೂ ಪರ್ವಾಗಿಲ್ಲ, ನಮ್ಮ ಜಾನಪದ ಕಲೆಗಳು ಉಳಿಯಬೇಕು ಎನ್ನುವ ಉದ್ದೇಶದಿಂದ ಕುಣಿತ ಭಜನೆ ಸ್ಪರ್ಧೆ, ಜಾನಪದ ವೈಭವ, ಕಲಾತಂಡಗಳಿಗೆ ಪ್ರೋತ್ಸಾಹ ನೀಡುವ ಕಾರ್ಯ ನಿರಂತರ ನಡೆಸಲಾಗುತ್ತಿದೆ ಎಂದರು.ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್, ಅದಾನಿ ಸಮೂಹ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಉದ್ಯಮಿ ವರುಣ್ ರಾಮದಾಸ್ ನಾಯಕ್ ಗುಜ್ಜಾಡಿ, ತಲ್ಲೂರು ಫ್ಯಾಮಿಲಿ ಟ್ರಸ್ಟ್ ಟ್ರಸ್ಟಿ ಗಿರಿಜಾ ತಲ್ಲೂರು ಶಿವರಾಮ ಶೆಟ್ಟಿ, ಪರಿಷತ್ತಿನ ಜಿಲ್ಲಾ ಕಾರ್ಯಾಧ್ಯಕ್ಷ ಬಿ.ಅರುಣ್ ಕುಮಾರ್ ಹೆಗ್ಡೆ ಉಪಸ್ಥಿತರಿದ್ದರು.ಪರಿಷತ್ತಿನ ಕಾರ್ಯದರ್ಶಿ ರವಿರಾಜ್ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಡುಪಿ ತಾಲೂಕು ಅಧ್ಯಕ್ಷ ಸುನೀಲ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಅಮಿತಾಂಜಲಿ ಕಿರಣ್ ನಿರೂಪಿಸಿದರು. ಪ್ರಶಾಂತ್ ಭಂಡಾರಿ ವಂದಿಸಿದರು.ಸಭಾ ಕಾರ್ಯಕ್ರಮದ ಬಳಿಕ ವಿವಿಧ ಕಲಾತಂಡಗಳಿಂದ ಕುಣಿತ ಭಜನೆ. ಹೋಳಿ ಕುಣಿತ, ಗೋಂದೋಳು, ಜಾನಪದ ವಾದ್ಯಗೋಷ್ಠಿ, ಕಲಾಮಯಂ ತಂಡದಿoದ ಜಾನಪದ ವೈಭವ ಮೊದಲಾದ ಕಾರ್ಯಕ್ರಮಗಳು ಪ್ರಸ್ತುತಿಗೊಂಡವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಕ್ರಮ ಡ್ರಗ್ಸ್‌ ವಾಸನೆ ತಡೆಗೆ ನಾಯಿಗಳ ಮಲಮೂತ್ರ!
ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಭರದ ಸಿದ್ಧತೆ