ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಸಂಘ ಮಹಿಳಾ ಘಟಕದ ಸಹಯೋಘದಲ್ಲಿ ನಡೆದ ಕಾವ್ಯಾನು ಸಂಧಾನ ಕವಿತೆಯ ಓದು-ವ್ಯಾಖ್ಯಾನ- ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಅಕ್ಷರ ವಂಚಿತರಿಂದ ಬಂದ ವಿವೇಕವನ್ನು ನಾವು ಕಳೆದುಕೊಂಡಿದ್ದೇವೆ. ಜನಪದವನ್ನೂ ಮರೆಯುತ್ತಿದ್ದೇವೆ. ಪ್ರಸ್ತುತ ದಿನಗಳಲ್ಲಿ ಅವಿಭಕ್ತ ಕುಟುಂಬಗಳು ಸಂಪೂರ್ಣವಾಗಿ ಮರೆಯಾಗುತ್ತಿವೆ. ಇದನ್ನು ನೆನೆದುಕೊಳ್ಳುವುದಕ್ಕೂ ಸಾಧ್ಯವಾಗದ ಸಂದರ್ಭದಲ್ಲಿ ಬದುಕುತ್ತಿದ್ದೇವೆ, ಜನಪದ ಹಾಡುಗಳೇ ಸೊಗಸಾಗಿದ್ದವು, ಮದುವೆ ಸಮಾರಂಭದಲ್ಲಿ ಹಾಡುತ್ತಿದ್ದ ಜನಪದ ಹಾಡುಗಳು ಮರೆಯಗಾಗಿವೆ ಎಂದರು.ಮನುಷ್ಯನ ಮನಸ್ಸನ್ನು ಸಾಹಿತ್ಯದಿಂದ ತನ್ನೆಡೆಗೆ ಸೆಳೆಯುವ ಶಕ್ತಿ ಇರುವುದು ಭಾರತೀಯ ಸಂಗೀತಕ್ಕೆ ಮಾತ್ರ. ಬೇರೆ ದೇಶಗಳಲ್ಲಿ ಹಾಡು ಹೇಳುತ್ತಲೇ ಹುಚ್ಚರಾಗಿದ್ದಾರೆ, ಆದರೆ, ಭಾರತ ದೇಶದ ಸಂಗೀತ, ಕಲೆ ಹಾಗೂ ಸಾಹಿತ್ಯ ಎಲ್ಲರನ್ನೂ ಆಕರ್ಷಿಸುವಂತಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಆರೋಗ್ಯ, ಅನ್ನ, ಅಕ್ಷರ ಇವೆಲ್ಲವನ್ನೂ ಕೊಟ್ಟಂತಹ ಭೂಪ, ಇವರು ಭಾರತ ದೇಶದ ಯಾವ ರಾಜರು ಮಾಡದ ಕೆಲಸ ಮಾಡಿ ಹೋಗಿದ್ದಾರೆ, ಇವರ ಋಣ ನಮ್ಮ ಮೇಲಿದೆ ಎಂದು ನೆನಪಿಸಿದರು.
ನಮ್ಮ ಜೀವನದ ಬೇರುಗಳನ್ನು ಹುಡುಕಬೇಕಿದೆ, ಅದು ಯಾವ ಬೇರೆಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಜ್ಞಾನವನ್ನು ಅರಿತು ಬಾಳುವುದು ಒಂದು ಘಟ್ಟವಾಗಿದೆ. ಮಹಿಳಾ ವೇದಿಕೆಯಿಂದ ಕಾವ್ಯಾನುಸಂಧಾನ ಕಾರ್ಯಕ್ರಮವು ಒಂದು ಮಾದರಿ ಕಾರ್ಯಕ್ರಮವಾಗಿದೆ ಎಂದು ಶ್ಲಾಘಿಸಿದರು.
ಸಾಹಿತಿ ಮಂಜುಳಾ ಜಯಪ್ರಕಾಶಗೌಡ ಅವರು ಅಧ್ಯಕ್ಷತೆ ವಹಿಸಿದ್ದರು. ಗುರು ದೀಕ್ಷ ಗೀತೆಗಳನ್ನು ಸುಸ್ವರ ಸಂಗೀತ ಶಾಲಾ ವಿದ್ಯಾರ್ಥಿಗಳು ಹಾಡಿ ರಂಜಿಸಿದರು. ಕಾರ್ಯಕ್ರಮದಲ್ಲಿ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ನಾಗರೇವಕ್ಕ, ಕಾರ್ಯದರ್ಶಿ ಅನಿತಾ ಮಂಗಲ ಭಾಗವಹಿಸಿದ್ದರು.