ಜೀವನ ಸಂಸ್ಕೃತಿಯನ್ನು ಬಿಂಬಿಸುವ ಜನಪದ ಸಾಹಿತ್ಯ

KannadaprabhaNewsNetwork |  
Published : Dec 23, 2024, 01:04 AM IST
ತಾಳಿಕೋಟೆ 1 | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ತಾಳಿಕೋಟೆ: ಜೀವನ ಸಂಸ್ಕೃತಿಯನ್ನು ಬಿಂಬಿಸುವದಾಗಿದ್ದು, ಇದುವೇ ಜನಪದ ಸಾಹಿತ್ಯ. ಜನಪದದ ಜೀವನದ ಮೌಲ್ಯರೂಪಿಸಿದ್ದಲ್ಲದೇ ಸಾಹಿತ್ಯ ಮೂಲ ಬೇರಾಗಿದೆ ಎಂದು ವಿಜಯಪುರದ ಹಲಸಂಗಿ ಗೆಳೆಯರ ಪ್ರತಿಷ್ಠಾನದ ಸಂಚಾಲಕ ಪ್ರೊ.ದೊಡ್ಡಣ್ಣ ಭಜಂತ್ರಿ ಅಭಿಪ್ರಾಯ ಪಟ್ಟರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ: ಜೀವನ ಸಂಸ್ಕೃತಿಯನ್ನು ಬಿಂಬಿಸುವದಾಗಿದ್ದು, ಇದುವೇ ಜನಪದ ಸಾಹಿತ್ಯ. ಜನಪದದ ಜೀವನದ ಮೌಲ್ಯರೂಪಿಸಿದ್ದಲ್ಲದೇ ಸಾಹಿತ್ಯ ಮೂಲ ಬೇರಾಗಿದೆ ಎಂದು ವಿಜಯಪುರದ ಹಲಸಂಗಿ ಗೆಳೆಯರ ಪ್ರತಿಷ್ಠಾನದ ಸಂಚಾಲಕ ಪ್ರೊ.ದೊಡ್ಡಣ್ಣ ಭಜಂತ್ರಿ ಅಭಿಪ್ರಾಯ ಪಟ್ಟರು.ತಾಲೂಕಿನ ಮಿಣಜಗಿ ಗ್ರಾಮದಲ್ಲಿ ಗ್ರಾಮದೇವತೆ ಹಾಗೂ ಮಾಯಮ್ಮದೇವಿಯ ಜಾತ್ರಾ ಮಹೋತ್ಸವ ಅಂಗವಾಗಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಜಾನಪದ ಉತ್ಸವ ಉದ್ಘಾಟಿಸಿ ಮಾತನಾಡಿದರು. ಕೃಷಿ ಕಾಯಕದಲ್ಲಿ ಬೇಸರಿಕೆ ಕಳೆದುಕೊಳ್ಳಲು ವಿವಿಧ ಜನಪದ ಕಟ್ಟಿ ಹಾಡಿದವರು ಜನಪದದವರೇ ಆಗಿದ್ದಾರೆ. ಜನಪದ ಇದೊಂದು ಸಾಹಿತ್ಯ. ಭೂಮಿಗೆ ತಾಯಿ ಎಂಬ ಸ್ಥಾನಮಾನ ನೀಡಲಾಗಿದ್ದು, ಅದ್ಭುತ ಹೊಗಳಿಕೆಯ ಮೂಲಕ ಜೀವನದ ಮೌಲ್ಯ ನೀಡಿರುವದು ಜನಪದ ಸಾಹಿತ್ಯ. ಹಲಸಂಗಿ ಗೆಳೆಯರು ಜಾನಪದ ಸಾಹಿತ್ಯಕ್ಕೆ ಮೆರಗು ತರುವ ಕೆಲಸ ಮಾಡಿದ್ದಾರೆ ಎಂದು ಗುಣಗಾನ ಮಾಡಿದರು.ಸಾಂಸ್ಕೃತಿಕ ಚಿಂತಕ ಮೋಹನ್ ಕಟ್ಟಿಮನಿ ಮಾತನಾಡಿ, ಹಬ್ಬಗಳಲ್ಲಿ ಜಾನಪದ ಸಾಹಿತ್ಯ ಮೆರುಗು ತರುವಲ್ಲಿ ಗ್ರಾಮಾಂತರ ಮಟ್ಟದಲ್ಲಿ ಮುಂದುವರೆಸಿದೆ. ಜನಪದ ಕುಂಟುತ್ತಾ ಸಾಗಿದ್ದು, ಕನ್ನಡ ಜಾನಪದ ಪರಿಷತ್‌ನ ಬೆಂಗಳೂರು ಹಾಗೂ ಜಿಲ್ಲಾ ಘಟಕಗಳು ಮೇಲೆತ್ತುತ್ತಿವೆ. ಜಾತ್ರೋತ್ಸವಗಳಿಗೆ ಮೆರುಗು ನೀಡಲು ಜಿಲ್ಲಾ ಮಟ್ಟದ ಜಾನಪದ ಉತ್ಸವದ ಕಾರ್ಯ ಮಹತ್ವದ್ದಾಗಿದೆ ಎಂದರು. ಪ್ರಥಮವಾಗಿ ಮಣ್ಣನ್ನು ಪೂಜಿಸುವ ಮೂಲಕ ಮಣ್ಣೆತ್ತಿನ ಅಮವಾಸ್ಯೆ, ಹಾಗೆ ಮುಂದೆ ಗುಳ್ಳವ್ವನ ಆಚರಣೆ, ಗಂಡ ಹೆಂಡಿರ ಜಗಳವನ್ನು ಜಾನಪದದಲ್ಲಿ ಸೂಕ್ಷ್ಮವಾಗಿ ಹೇಳುತ್ತಿವೆ. ಸಂಸ್ಕಾರ ಮತ್ತು ತಿದ್ದಿ ಬುದ್ದಿ ಹೇಳುವಂತಹ ನಾಗಪ್ಪನ ಹಾಲೇರೆಯೋಣ ನಾಗಪ್ಪನ ಹಾಗೆ ಹೆಡೆ ಎತ್ತಿ ಆಡೋಣವೆಂಬ ಜಾನಪದ ಸಾಹಿತ್ಯವನ್ನು ಮರೆತರೆ ಮುಂದೆ ಕಷ್ಟ ಪಟ್ಟಿರೀ ಎಂದು ಎಚ್ಚರಿಸಿದರು.ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ ಮಾತನಾಡಿ, ಸಂಸ್ಕೃತಿಕ ಲೋಕವನ್ನು ಪ್ರತಿಬಿಂಬಿಸುವ ಕಾರ್ಯ ಮಿಣಜಗಿ ಗ್ರಾಮದ ಜಾತ್ರೋತ್ಸವದಲ್ಲಿ ನಡೆಯುತ್ತಿದೆ. ಜನಪದವೆಂಬುದು ಒಂದು ಒಳ್ಳೆಯ ಸಂಸ್ಕೃತಿಯನ್ನು ಇಂದಿನ ಕಾಲದಲ್ಲಿ ನೆನಪಿಸುವ ಕೆಲಸ ಮಾಡುತ್ತಿದೆ. ಇದನ್ನು ಉಳಿಸಿ ಬೆಳೆಸುವಂತಹ ಕಾರ್ಯದಲ್ಲಿ ಎಲ್ಲರು ತೊಡಗಿಕೊಳ್ಳಬೇಕೆಂದರು.ವಿಕಾಸ ಪಬ್ಲಿಕ್ ಸ್ಕೂಲ್ ಮಕ್ಕಳು ರೈತ ಗೀತೆ ಹಾಡಿದರು. ಹಿರೂರ ಭೋಗೇಶ್ವರ ಭಜನಾ ಮಂಡಳಿಯಿಂದ ಭಜನಾ ಪದ, ಕುಂಟೋಜಿ ಬಸವೇಶ್ವರ ಹಂತಿ ಮೇಳದಿಂದ ಹಂತಿಪದ, ಕುಂಟೋಜಿ ಚೌಡಕಿ ಮೇಳದಿಂದ ರೇಣುಕಾ ಎಲ್ಲಮ್ಮ ಚೌಡಕಿ ಪದ, ಸಿಂದಗಿ ಲಕ್ಷ್ಮೀದೇವಿ ವಾಲಗ ಸಂಘದವರಿಂದ ಡೊಳ್ಳಿನ ವಾಲಗ, ತಡಲಗಿ ರಾಮಧೂತ ಹೆಜ್ಜೆ ಮೇಳದಿಂದ ಹೆಜ್ಜೆ ಕುಣಿತ, ರೇಣುಕಾದೇವಿ ತೊಗತಿ ಮಸೂತಿಯಿಂದ ಜೋಗತಿ ಕುಣಿತ, ಕರಿಮಲ್ಲೇಶ್ವರ ಗೊರವರ ಕುಣಿತ ಸೇರಿ ಇತರರು ತಮ್ಮ ಕಲೆ ಪ್ರದರ್ಶಿಸಿದರು.ಕಜಾಪ ನಿಡಗುಂದಿ ತಾಲೂಕಾಧ್ಯಕ್ಷ ವೈ.ಎಸ್.ಗಂಗಶೆಟ್ಟಿ ಪ್ರಾಸ್ಥಾವಿಕ ಮಾತನಾಡಿದರು. ಕಜಾಪದ ಶಿವಾನಂದ ಮಳ್ಳಿ, ಬಸವರಾಜ ಹಾರಿವಾಳ, ಸಿದ್ದರಾಮ ಬಿರಾದಾರ, ಎ.ಆರ್.ಮುಲ್ಲಾ, ಗಂಗಾಧರ ಬಡಿಗೇರ, ಪ್ರೊ.ಜಿ.ಎಂ.ಹಳ್ಳೂರ, ಹಿರಿಯ ಪತ್ರಕರ್ತ ಜಿ.ಟಿ.ಘೋರ್ಪಡೆ, ದೇವೆಂದ್ರ ಕೊಪ್ಪದ, ಈರಸಂಗಪ್ಪಗೌಡ ಪಾಟೀಲ, ಬಾಪುಗೌಡ ಬಿರಾದಾರ, ಎಸ್.ಐ.ಬಿರಾದಾರ ಸನ್ಮಾನಿಸಲಾಯಿತು. ತಾಳಿಕೋಟೆ ಕಜಾಪ ಅಧ್ಯಕ್ಷ ಸಿದ್ದನಗೌಡ ಕಾಶಿನಕುಂಟಿ ಸ್ವಾಗತಿಸಿದರು. ಶಿಕ್ಷಕ ಆರ್.ಎಸ್.ವಾಲಿಕಾರ ನಿರೂಪಿಸಿದರು. ಸಿದ್ದು ಕರಡಿ ವಂದಿಸಿದರು.

೨೨ಟಿಎಲ್‌ಕೆ ೧ಚಿತ್ರ ಚಿತ್ರ ವಿವರಣೆ : ತಾಳಿಕೋಟೆ : ತಾಲೂಕಿನ ಮಿಣಜಗಿ ಗ್ರಾಮದಲ್ಲಿ ಶ್ರೀ ಗ್ರಾಮದೇವತೆ(ದ್ಯಾಮವ್ವದೇವಿ) ಹಾಗೂ ಶ್ರೀ ಮಾಯಮ್ಮದೇವಿಯ ಜಾತ್ರಾ ಮಹೋತ್ಸವ ಅಂಗವಾಗಿ ಕಜಾಪ ವತಿಯಿಂದ ಏರ್ಪಡಿಸಲಾದ ಜಿಲ್ಲಾ ಮಟ್ಟದ ಜಾನಪದ ಉತ್ಸವ ಕಾರ್ಯಕ್ರಮವನ್ನು ಪ್ರೋ.ದೊಡ್ಡಣ್ಣ ಬಜಂತ್ರಿ ಅವರು ಡೊಳ್ಳು ಭಾರಿಸುವ ಮೂಲಕ ಉದ್ಘಾಟಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ