ಜನಪದ ಸಾಹಿತ್ಯವು ಧರ್ಮಾತೀತ: ಡಾ.ಎಸ್. ಬಾಲಾಜಿ

KannadaprabhaNewsNetwork | Published : Jun 25, 2024 12:38 AM

ಸಾರಾಂಶ

ರಾಜ್ಯ ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕ ಆಶ್ರಯದಲ್ಲಿ ಉಡುಪಿ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಶಾಂತಿನಗರದ ಮಣಿಪಾಲ ಸಾರ್ವಜನಿಕ ಗಣೇಶ ಸಮಿತಿ ಸಭಾಂಗಣದಲ್ಲಿ ನಡೆಯಿತು. ಪರಿಷತ್ ರಾಜ್ಯಾಧ್ಯಕ್ಷ ಡಾ.ಎಸ್. ಬಾಲಾಜಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಮಣಿಪಾಲ

ರಾಜ್ಯ ಕನ್ನಡ ಜಾನಪದ ಪರಿಷತ್ ಇದರ ಉಡುಪಿ ಜಿಲ್ಲಾ ಘಟಕ ಆಶ್ರಯದಲ್ಲಿ ಉಡುಪಿ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಶಾಂತಿನಗರದ ಮಣಿಪಾಲ ಸಾರ್ವಜನಿಕ ಗಣೇಶ ಸಮಿತಿ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಪರಿಷತ್ ರಾಜ್ಯಾಧ್ಯಕ್ಷ ಡಾ.ಎಸ್. ಬಾಲಾಜಿ ಉದ್ಘಾಟಿಸಿ, ಜನಪದ ಸಾಹಿತ್ಯವು ಧರ್ಮಾತೀತವಾಗಿದೆ. ಜಾನಪದದಿಂದ ಹಲವಾರು ಸಂಸ್ಕೃತಿಯ ಪರಿಚಯ ನಮಗೆ ದೊರೆಯುತ್ತದೆ. ಈ ನಿಟ್ಟಿನಲ್ಲಿ ಜನಪದ ಸಾಹಿತ್ಯ ಮತ್ತು ಅದರ ದಾಖಲೀಕರಣ ಅಗತ್ಯವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾನಪದ ಪರಿಷತ್ ಜಿಲ್ಲಾ ಅಧ್ಯಕ್ಷ ಡಾ. ಗಣೇಶ್ ಗಂಗೊಳ್ಳಿ ವಹಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಮೂಡುಸರಗ್ರಿಯ ಧರ್ಮದರ್ಶಿ ಭಾಸ್ಕರ್ ಗುಂಡಿಬೈಲು, ಜಿ.ಪಂ. ಮಾಜಿ ಅಧ್ಯಕ್ಷ ಉಪೇಂದ್ರ ನಾಯಕ್, ಮಹಿಳಾ ಪ್ರತಿನಿಧಿ ಅಹಲ್ಯ ಹೆಗ್ಡೆ, ಮಹಾಮಾಯಿ ಭಜನಾ ಮಂಡಳಿಯ ಸಂಸ್ಥಾಪಕಿ ಮೋಹಿನಿ ಭಟ್, ಶ್ರುತಿ ಜಿ. ಶೆಣೈ, ಜಿಲ್ಲಾ ಘಟಕದ ಖಜಾಂಚಿ ಚಂದ್ರ ಹಂಗಾರುಕಟ್ಟೆ ಮುಂತಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹಿರಿಯ ಜಾನಪದ ಕಲಾವಿದೆ ಸರಸ್ವತಿ ಪಿತ್ರೋಡಿ ಅವರನ್ನು ಸನ್ಮಾನಿಸಲಾಯಿತು. ರಾಜಾಧ್ಯಕ್ಷರು ಮತ್ತು ಜಿಲ್ಲಾಧ್ಯಕ್ಷರನ್ನು ಗೌರವಿಸಲಾಯಿತು.

ನೂತನ ತಾಲೂಕು ಅಧ್ಯಕ್ಷೆ ಮಾಯಾ ಕಾಮತ್ ಮತ್ತು ಅವರ ತಂಡಕ್ಕೆ ಪ್ರಮಾಣ ಪತ್ರ ನೀಡಲಾಯಿತು. ಪ್ರ.ಕಾರ್ಯದರ್ಶಿ ಕುಸುಮ ಕಾಮತ್ ವಂದಿಸಿದರು. ಜಿಲ್ಲಾ ಸಂ.ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು. ನಾಗರಾಜ್ ಆಚಾರ್ಯ, ಲಲಿತಾ ಮಲ್ಪೆ, ಸುಜಾತಾ ಪೂಜಾರಿ, ಪ್ರಭಾ ರಾವ್, ದೇವದಾಸ ಕಾಮತ್, ಮುಕ್ತ ಶ್ರೀನಿವಾಸ ಭಟ್, ಸವಿತಾ ಶೆಟ್ಟಿ, ಶಿವಪ್ರಸಾದ್, ಗಜೇಂದ್ರ ಶೇಟ್,ನಿತ್ಯಾನಂದ ನಾಯಕ್ ಮೊದಲಾದವರು ಉಪಸ್ಥಿತರಿದ್ದರು. ನಂತರ ಭಜನಾ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು.

Share this article