ಜಾನಪದ ಸಾಹಿತ್ಯ ಗ್ರಾಮೀಣ ಬದುಕಿನ ಜೀವನಾಡಿ: ಸತೀಶ್ ಅರಳೀಕೊಪ್ಪ

KannadaprabhaNewsNetwork |  
Published : Oct 28, 2025, 12:03 AM IST
೨೭ಬಿಹೆಚ್‌ಆರ್ ೧: ಬಾಳೆಹೊನ್ನೂರಿನ ವಾಣಿ ಕಲೆ ಮತ್ತು ಸಾಹಿತ್ಯ ಅಧ್ಯಯನ ಕೇಂದ್ರದಲ್ಲಿ ಜಿಲ್ಲಾ ಚುಸಾಪ ಆಯೋಜಿಸಿದ್ದ ಜಾನಪದ ಕಾರ್ಯಕ್ರಮದಲ್ಲಿ ಗ್ರಾಮೀಣ ಜಾನಪದ ಕಲಾವಿದರನ್ನು ಗೌರವಿಸಲಾಯಿತು. ಸತೀಶ್ ಅರಳೀಕೊಪ್ಪ, ಯಜ್ಞಪುರುಷಭಟ್, ಬಿ.ಎಚ್.ಕೃಷ್ಣಮೂರ್ತಿ, ಶ್ರೀನಿವಾಸ್, ಯಶೋಧ ಇದ್ದರು. | Kannada Prabha

ಸಾರಾಂಶ

ಬಾಳೆಹೊನ್ನೂರು ಜಾನಪದ ಸಾಹಿತ್ಯ ಗ್ರಾಮೀಣ ಬದುಕಿನ ಜೀವನಾಡಿಯಾಗಿದ್ದು, ಇಂದಿಗೂ ಕೆಲವು ಕುಟುಂಬಗಳು ಜಾನಪದ ಸಾಹಿತ್ಯದ ಅಸ್ತಿತ್ವ ಉಳಿಸಿಕೊಂಡು ಬಂದಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕು ಅಧ್ಯಕ್ಷ ಸತೀಶ್ ಅರಳೀಕೊಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಜಾನಪದ ಸಾಹಿತ್ಯ ಗ್ರಾಮೀಣ ಬದುಕಿನ ಜೀವನಾಡಿಯಾಗಿದ್ದು, ಇಂದಿಗೂ ಕೆಲವು ಕುಟುಂಬಗಳು ಜಾನಪದ ಸಾಹಿತ್ಯದ ಅಸ್ತಿತ್ವ ಉಳಿಸಿಕೊಂಡು ಬಂದಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕು ಅಧ್ಯಕ್ಷ ಸತೀಶ್ ಅರಳೀಕೊಪ್ಪ ಹೇಳಿದರು.ಪಟ್ಟಣದ ಮಾರಿಗುಡಿ ರಸ್ತೆ ಶ್ರೀ ವಾಣಿ ಕಲೆ ಮತ್ತು ಸಾಹಿತ್ಯ ಅಧ್ಯಯನ ಕೇಂದ್ರದ ಆವರಣದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ನಿಂದ ದೀಪಾವಳಿ ಅಂಗವಾಗಿ ಆಯೋಜಿಸಿದ್ದ ಜಾನಪದ ಕಾರ್ಯಕ್ರಮದಲ್ಲಿ ಮಾತನಾಡಿದರು. ಆಧುನಿಕತೆ ಭರಾಟೆಯಲ್ಲಿ ಜಾನಪದ ಸಾಹಿತ್ಯ ಮೂಲೆ ಗುಂಪಾಗುತ್ತಿದ್ದು ಕಲಾವಿದರನ್ನು ಹಾಗೂ ಜನಪದ ಸಾಹಿತ್ಯ ಉಳಿಸಿಕೊಂಡು ಬರಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಸುಮಾರು 25 ವರ್ಷಗಳಿಂದ ಜಾನಪದ ಕಲೆಯನ್ನು ಹಾಗೂ ಕಲಾವಿದರನ್ನು ಪ್ರೋತ್ಸಾಹಿಸಿಕೊಂಡು ಬರುತ್ತಿದೆ ಎಂದರು.

ಸರ್ಕಾರಿ ಸ್ವತಂತ್ರ ಪಿಯು ಕಾಲೇಜಿನ ಪ್ರಾಚಾರ್ಯ ಬಿ.ಎಚ್.ಕೃಷ್ಣಮೂರ್ತಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಬಿಡುವಿನ ವೇಳೆಯಲ್ಲಿ ಜಾನಪದ ಸಾಹಿತ್ಯವನ್ನು ಬಾಯಿಂದ ಬಾಯಿಗೆ ತಲುಪಿಸುತ್ತಿದ್ದು ಅದನ್ನು ಉಳಿಸಿಕೊಂಡು ಬರಬೇಕಾಗಿದೆ. ಜಾನಪದ ಸಾಹಿತ್ಯದಲ್ಲಿ ಬದುಕಿನ ಬೆಂದಾಟ ಬಿಂಬಿಸುವ ಅಂಶವಿದ್ದು ಅರ್ಥಗರ್ಭಿತ ಸಾಲುಗಳಲ್ಲಿ ಅನಕ್ಷರಸ್ಥ ಕಲಾವಿದರು ಹಾಡಿಕೊಂಡು ಬರುತ್ತಿದ್ದಾರೆ. ಅವರಿಗೆ ಪ್ರೋತ್ಸಾಹ ನೀಡುತ್ತಿರುವುದು ಸಮಯೋಚಿತ ಎಂದರು. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಯಜ್ಞಪುರುಷ ಭಟ್ ಮಾತನಾಡಿ, ಜಿಲ್ಲಾ ಚುಸಾಪ ಕಲಾವಿದರನ್ನು ಮನೆಗೆ ಕರೆಯಿಸಿ ಅವರಿಂದ ಜಾನಪದ ಹಾಡುಗಳನ್ನು ಹಾಡಿಸಿ ಅವರಿಗೆ ಗೌರವಿಸುತ್ತಾ ಬಂದಿದೆ. ಜಿಲ್ಲೆ ಹಾಗೂ ರಾಜ್ಯಮಟ್ಟಕ್ಕೂ ಜಾನಪದ ಕಲಾವಿದರನ್ನು ಕಳುಹಿಸಿ ಕೊಟ್ಟು ಪ್ರೋತ್ಸಾಹಿಸಲಾಗಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕಲಾವಿದರನ್ನು ಮನೆಗೆ ಕರೆಯಿಸಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು. ಕಲಾವಿದರಾದ ಚಂದ್ರಶೇಖರ್, ಕುಮಾರ್, ಬಾಲ ಕಲಾವಿದ ದಿಯಾನ್ ಜಾನಪದ ಹಾಡುಗಾರಿಕೆಯನ್ನು ನಡೆಸಿಕೊಟ್ಟರು. ಸ್ಥಳೀಯರಾದ ಕೆ.ಜೆ.ಶ್ರೀನಿವಾಸ್, ಯಶೋಧ ಮತ್ತಿತರರು ಹಾಜರಿದ್ದರು.೨೭ಬಿಹೆಚ್‌ಆರ್ ೧:

ಬಾಳೆಹೊನ್ನೂರಿನ ವಾಣಿ ಕಲೆ ಮತ್ತು ಸಾಹಿತ್ಯ ಅಧ್ಯಯನ ಕೇಂದ್ರದಲ್ಲಿ ಜಿಲ್ಲಾ ಚುಸಾಪ ಆಯೋಜಿಸಿದ್ದ ಜಾನಪದ ಕಾರ್ಯಕ್ರಮದಲ್ಲಿ ಗ್ರಾಮೀಣ ಜಾನಪದ ಕಲಾವಿದರನ್ನು ಗೌರವಿಸಲಾಯಿತು. ಸತೀಶ್ ಅರಳೀಕೊಪ್ಪ, ಯಜ್ಞಪುರುಷಭಟ್, ಬಿ.ಎಚ್.ಕೃಷ್ಣಮೂರ್ತಿ, ಶ್ರೀನಿವಾಸ್, ಯಶೋಧ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!