ದೇವಾಲಯ ಆವರಣಕ್ಕೆ ಶಾಸಕರ ನಿಧಿಯಿಂದ ಮೇಲ್ಛಾವಣಿ: ಶಾಸಕ ಜಿ.ಎಚ್.ಶ್ರೀನಿವಾಸ್

KannadaprabhaNewsNetwork |  
Published : Oct 28, 2025, 12:03 AM IST
ಶ್ರೀ ಪ್ರಸನ್ನರಾಮೇಶ್ವರಸ್ವಾಮಿ ದೇವಾಲಯದಲ್ಲಿ ಪ್ರತಿ ಸೋಮವಾರ ಅನ್ನಪ್ರಸಾದ ವಿತರಿಸುವ ಕಾರ್ಯಕ್ರಮ ಉದ್ಗಾಟನೆ | Kannada Prabha

ಸಾರಾಂಶ

ತರೀಕೆರೆ, ಪಟ್ಟಣದ ಶ್ರೀ ಪ್ರಸನ್ನ ರಾಮೇಶ್ವರಸ್ವಾಮಿ ದೇವಾಲಯದಲ್ಲಿ ಶಾಸಕರ ನಿಧಿಯಿಂದ ದೇವಾಲಯದ ಆವರಣದಲ್ಲಿ ಶೀಟ್‌ನ ಮೇಲ್ಛಾವಣಿ ಹಾಕಿಸಲಾಗುವುದು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.

-ಶ್ರೀ ಪ್ರಸನ್ನರಾಮೇಶ್ವರಸ್ವಾಮಿ ದೇವಾಲಯದಲ್ಲಿ ಪ್ರತಿ ಸೋಮವಾರ ಅನ್ನಪ್ರಸಾದ ವಿತರಣಾ ಕಾರ್ಯಕ್ರಮ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಪಟ್ಟಣದ ಶ್ರೀ ಪ್ರಸನ್ನ ರಾಮೇಶ್ವರಸ್ವಾಮಿ ದೇವಾಲಯದಲ್ಲಿ ಶಾಸಕರ ನಿಧಿಯಿಂದ ದೇವಾಲಯದ ಆವರಣದಲ್ಲಿ ಶೀಟ್‌ನ ಮೇಲ್ಛಾವಣಿ ಹಾಕಿಸಲಾಗುವುದು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.ಶ್ರೀ ಪ್ರಸನ್ನ ರಾಮೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ದೇವಾಲಯ ಸಮಿತಿಯಿಂದ ಏರ್ಪಾಡಾಗಿದ್ದ ಪ್ರತಿ ಸೋಮವಾರ ಅನ್ನಪ್ರಸಾದ ವಿತರಣಾ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು.ಇಂದು ತುಂಬಾ ಸಂತೋಷದ ದಿನವಾಗಿದೆ. ಪಟ್ಟಣದಲ್ಲಿ ಪ್ರತಿ ಸೋಮವಾರ ಅನ್ನಪ್ರಸಾದ ವ್ಯವಸ್ಥೆ ಕೈಗೊಂಡಿರುವ ದೇವಾಲಯವಾಗಿದೆ. ದೇವಸ್ಥಾನಕ್ಕೆ ಬೋರ್ ವೆಲ್ ವ್ಯವಸ್ಥೆ ಮಾಡಲಾಗಿದ್ದು, ದೇವಸ್ಥಾನ ಅಭಿವೃದ್ಧಿಯಾಗಿದೆ. ಎಲ್ಲಾ ಜಾತಿಯವರು ಆಗಮಿಸುವ ದೇವಸ್ಥಾನದಲ್ಲಿ ಪ್ರಸಾದ ದೊರೆತರೆ ಎಲ್ಲರಿಗೂ ಸಂತೋಷವಾಗುತ್ತದೆ ಎಂದು ಹೇಳಿದರು.

ಸರ್ಕಾರವೂ ಸಹ ಹಸಿವಿನಿಂದ ಯಾರೂ ಇರಬಾರದು ಎಂದು ಅನ್ನಭಾಗ್ಯ ಯೋಜನೆ ಅನುಷ್ಠಾನ ಮಾಡಲಾಗಿದೆ. ಗೃಹಲಕ್ಷ್ಮಿ, ಗೃಹಜ್ಯೋತಿ ಇತ್ಯಾದಿ ಐದು ಗ್ಯಾರಂಟಿ ಯೋಜನೆ ಜಾರಿಗೆ ತರಲಾಗಿದೆ.ಪುರಸಭೆ ಸದಸ್ಯ ಟಿ.ದಾದಾಪೀರ್ ಮಾತನಾಡಿ ದೇವಾಲಯದಲ್ಲಿ ಪ್ರತಿ ಸೋಮವಾರ ಅನ್ನಪ್ರಸಾದ ವಿತರಣೆ ನಡೆಯುತ್ತಿರುವುದು ಸಂತೋಷ ತಂದಿದೆ. ಶ್ರೀ ಪ್ರಸನ್ನ ರಾಮೇಶ್ವರಸ್ವಾಮಿ ದೇವಾಲಯ ಬಹಳ ಪ್ರಾಚೀನವಾದುದು. ಭಕ್ತರಿಗೆ ದೇವಸ್ಥಾನ, ಪ್ರಾರ್ಥನಾ ಸ್ಥಳಗಳು ನೆಮ್ಮದಿ ನೀಡುತ್ತದೆ. ದೇವಾಲಯದಲ್ಲಿ ಮಳೆ ತರಿಸುವ ಪರ್ಜನ್ಯ ಜಪ, ಶ್ರೀ ರುದ್ರಹೋಮ ನಡೆಯುತ್ತದೆ. ದೇವಾಲಯದಲ್ಲಿ ಹರಕೆ ಹೊತ್ತರೆ ಅದು ಈಡೇರುತ್ತದೆ ಎಂಬ ದೃಢ ನಂಬಿಕೆ ಭಕ್ತರಲ್ಲಿದೆ. ಎಲ್ಲ ದಾನಕ್ಕಿಂತ ಅನ್ನದಾನ ಬಹಳ ಶ್ರೇಷ್ಠ ದಾನ ಎಂದು ಹೇಳಿದರು.ಪುರಸಭಾ ಮಾಜಿ ಅಧ್ಯಕ್ಷ ಟಿ.ಎಸ್.ಧರ್ಮರಾಜ್ ಮಾತನಾಡಿ ದೇವಾಲಯಕ್ಕೆ ಹೊಂದಿಕೊಂಡಿರುವ ಜಾಗದಲ್ಲಿ ಶಾಸಕರ ನಿಧಿಯಿಂದ ಉದ್ಯಾನವನ ನಿರ್ಮಿಸಬೇಕು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್‌ ಅವರಲ್ಲಿ ಮನವಿ ಮಾಡಿದ ಅವರು ಅನ್ನದಾಸೋಹಕ್ಕೆ ಪ್ರತಿ ಸೋಮವಾರ ಮಳೆಗಾಲದಲ್ಲಿ ತೊಂದರೆ ಯಾಗುವುದರಿಂದ ದೇವಸ್ಥಾನ ಆವರಣದಲ್ಲಿ ಮೇಲ್ಚಾವಣಿ ವ್ಯವಸ್ಥೆ ಮತ್ತು ಬೋರ್ ವೆಲ್.ಗೆ ವಿದ್ಯುತ್ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದರು.ಕುಂಬಾರಬೀದಿ ಮಠದ ಶ್ರೀ ಜಗದೀಶ ಶಿವಾಚಾರ್ಯ ಮಹಾಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ ಶ್ರೀ ಪ್ರಸನ್ನ ರಾಮೇಶ್ವರಸ್ವಾಮಿ ದೇವಾಲಯ ಬಹಳ ಪ್ರಾಚೀನ ಪರಂಪರೆ ಹೊಂದಿದೆ. ಅನ್ನದಾಸೋಹ ನಡೆಯುತ್ತಿರುವುದು ಬಹಳ ಸಂತೋಷ ತಂದಿದೆ ಎಂದು ಹೇಳಿದರು. ಶಾಸಕ ಜಿ.ಎಚ್.ಶ್ರೀನಿವಾಸ್ ಅವರ ಪತ್ನಿ ವಾಣಿಶ್ರೀನಿವಾಸ್, ಪುರಸಭೆ ಸದಸ್ಯೆ ಪಾರ್ವತಮ್ಮ, ಶ್ರೀ ಪ್ರಸನ್ನ ರಾಮೇಶ್ವರ ಸೇವಾ ಸಮಿತಿ ಅಧ್ಯಕ್ಷ ಚೇತನ್, ಉಪಾಧ್ಯಕ್ಷ ಉದೇಶ್, ಸಮಿತಿ ಪದಾಧಿಕಾರಿ ಗಳು, ಸದಸ್ಯರು, ಅನ್ನಪ್ರಸಾದ ದಾನಿಗಳಾದ ಲಕ್ಷ್ಮೀದೇವಿ ಪಾಂಡುರಂಗಪ್ಪ ಮತ್ತು ಮಕ್ಕಳು, ಕಲ್ ಗುಡ್ಡ ಶಾರದಮ್ಮ ನಿಂಗಪ್ಪ ಮತ್ತು ಮಕ್ಕಳು, ಸುಮಿತ್ರಮ್ಮ.ಡಿ.ಶಂಕರಪ್ಪ ದೊಡ್ಡಮನೆ ಮತ್ತು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.-

27ಕೆಟಿಆರ್.ಕೆ.1ಃ

ತರೀಕೆರೆಯಲ್ಲಿ ಶ್ರೀ ಪ್ರಸನ್ನ ರಾಮೇಶ್ವರ ಸೇವಾ ಸಮಿತಿಯಿಂದ ಶ್ರೀ ಪ್ರಸನ್ನ ರಾಮೇಶ್ವರಸ್ವಾಮಿ ದೇವಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಂಬಾರಬೀದಿ ಮಠ ಶ್ರೀ ಜಗದೀಶ ಶಿವಾಚಾರ್ಯ ಮಹಾ ಸ್ವಾಮೀಜಿ, ಶಾಸಕ ಜಿ.ಎಚ್.ಶ್ರೀನಿವಾಸ್, ಅವರ ಪತ್ನಿ ವಾಣಿ ಶ್ರೀನಿವಾಸ್, ಶ್ರೀ ಪ್ರಸನ್ನ ರಾಮೇಶ್ವರ ಸೇವಾ ಸಮಿತಿ ಅಧ್ಯಕ್ಷ ಚೇತನ್, ಪುರಸಭೆ ಸದಸ್ಯರಾದ ಟಿ.ದಾದಾಪೀರ್, ಪಾರ್ವತಮ್ಮ, ಪುರಸಭಾ ಮಾಜಿ ಅಧ್ಯಕ್ಷ ಟಿ.ಎಸ್.ಧರ್ಮರಾಜ್ ಮತ್ತಿತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!