ಪತ್ರಕರ್ತ ಜಿತೇಂದ್ರ ರಚಿಸಿ, ಹಾಡಿರುವ ಜಾನಪದ ಗೀತೆ ಬಿಡುಗಡೆ

KannadaprabhaNewsNetwork | Published : Feb 16, 2025 1:47 AM

ಸಾರಾಂಶ

ಪತ್ರಕರ್ತ ಜಿತೇಂದ್ರ ಕಾಂಬಳೆ ಅವರು ರಚಿಸಿ, ಹಾಡಿರುವ ಬಡವನ ಪ್ರೀತಿ ಮರತ್ಯಾಕ ಜಾನಪದ ಗೀತೆಯನ್ನು ಬೆಳಗಾವಿ ಮಾಧ್ಯಮ ಬಳಗದಿಂದ ಶನಿವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಬಿಡುಗಡೆಗೊಳಿಸಲಾಯಿತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಪತ್ರಕರ್ತ ಜಿತೇಂದ್ರ ಕಾಂಬಳೆ ಅವರು ರಚಿಸಿ, ಹಾಡಿರುವ ಬಡವನ ಪ್ರೀತಿ ಮರತ್ಯಾಕ ಜಾನಪದ ಗೀತೆಯನ್ನು ಬೆಳಗಾವಿ ಮಾಧ್ಯಮ ಬಳಗದಿಂದ ಶನಿವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಬಿಡುಗಡೆಗೊಳಿಸಲಾಯಿತು.

ಜಿತೇಂದ್ರ ಕಾಂಬಳೆ ಅವರು ಈವರೆಗೆ ಚಲನಚಿತ್ರಗೀತೆ ಸೇರಿ 7 ಹಾಡುಗಳನ್ನು ರಚನೆ ಮಾಡಿದ್ದಾರೆ. ಅವರ 8ನೇ ಗೀತೆಯನ್ನು ನಾರ್ಥ್ ಫಸ್ಟ್ ಕರ್ನಾಟಕ ಯೂಟೂಬ್ ಚಾನಲ್ ನಲ್ಲಿ ಬೆಳಗಾವಿಯ ವರದಿಗಾರರು ಬಿಡುಗಡೆ ಮಾಡಿದರು. ಇದೇ ವೇಳೆ ಗೀತೆಯ ಪೋಸ್ಟರ್ ಬಿಡುಗಡೆಗೊಳಿಸಿ, ಕೇಕ್ ಕತ್ತರಿಸಿ ಸಂಭ್ರಮಿಸಿದರು. ಬಳಿಕ ಜಿತೇಂದ್ರ ಅವರನ್ನು ಸತ್ಕರಿಸಿ ಶುಭ ಹಾರೈಸಲಾಯಿತು.ವರದಿಗಾರರಾದ ರಾಜು ಗವಳಿ, ಮೆಹಬೂಬ್ ಮಕಾನದಾರ್, ಮಂಜುನಾಥ ಪಾಟೀಲ, ಸಹದೇವ ಮಾನೆ, ಶ್ರೀಧರ ಕೋಟಾರಗಸ್ತಿ ಹಾಡಿನ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು‌. ಈ ವೇಳೆ ವರದಿಗಾರರಾದ ಮೃತ್ಯುಂಜಯ ಯಲ್ಲಾಪುರಮಠ, ರಜನಿಕಾಂತ ಯಾದವಾಡೆ, ಚಂದ್ರಕಾಂತ ಸುಗಂಧಿ, ಅನಿಲ ಕಾಜಗಾರ, ಮೈಲಾರಿ ಪಟಾತ, ಮಂಜುನಾಥ ರೆಡ್ಡಿ, ಛಾಯಾಗ್ರಾಹಕರಾದ ಅಡಿವೆಪ್ಪ ಪಾಟೀಲ, ರೋಹಿತ್ ಶಿಂಧೆ, ಅರುಣ ಯಳ್ಳೂರಕರ್, ಸುನೀಲ ಗಾವಡೆ, ನಾಗೇಶ ಕುಂಬಳಿ, ಪ್ರವೀಣ ಶಿಂಧೆ ಸೇರಿದಂತೆ ಮತ್ತಿತರರು ಇದ್ದರು.ನಾರ್ಥ್ ಫಸ್ಟ್ ಕರ್ನಾಟಕ ಸಂಪಾದಕ ಮಹಾಂತೇಶ ಕುರುಬೇಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈಟಿವಿ ಭಾರತ ವರದಿಗಾರ ಸಿದ್ದನಗೌಡ ಪಾಟೀಲ ನಿರೂಪಿಸಿದರು. ಪಬ್ಲಿಕ್ ನೆಕ್ಸ್ಟ್ ವರದಿಗಾರ ಪ್ರಹ್ಲಾದ ಪೂಜಾರಿ ವಂದಿಸಿದರು.ಬಡವನ ಪ್ರೀತಿ ಮರತ್ಯಾಕ ಗೀತೆಯು ಹಣ ಮತ್ತು ಪ್ರೀತಿಯ ನಡುವಿನ ವ್ಯತ್ಯಾಸವನ್ನು ತಿಳಿಸುತ್ತಿದ್ದು, ಎಲ್ಲರ ಮನಮುಟ್ಟುವಂತಿದೆ. ಜಿತೇಂದ್ರ ಕಾಂಬಳೆ ವೃತ್ತಿಯಲ್ಲಿ ಪತ್ರಕರ್ತನಾದರೂ ಪ್ರವೃತ್ತಿಯಲ್ಲಿ ಅವರೊಬ್ಬ ಕಲಾವಿದ. ನಾಟಕ, ಸಿನಿಮಾ, ಕಿರುಚಿತ್ರ, ಗಾಯನ, ಗೀತೆ ರಚನೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ನಮ್ಮ ಸಹೋದ್ಯೋಗಿಯ ಈ ಪ್ರತಿಭೆಯನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಜವಾಬ್ದಾರಿ.

-ಶ್ರೀಕಾಂತ ಕುಬಕಡ್ಡಿ, ಹಿರಿಯ ವರದಿಗಾರ.

Share this article