ಮನುಷ್ಯ ಕಳೆದುಕೊಳ್ಳಬೇಡಿ: ಡಾ.ಅಭಿನವ ಬ್ರಹ್ಮಾನಂದ ಶ್ರೀ

KannadaprabhaNewsNetwork |  
Published : Feb 16, 2025, 01:47 AM IST
ಫೋಟೋವಿವರ- (15ಎಂಎಂಎಚ್‌1)  ಮರಿಯಮ್ಮನಹಳ್ಳಿಯ ನಗರೇಶ್ವರ ದೇವಸ್ಥಾನದಲ್ಲಿ ಇತ್ತೀಚಿಗೆ ನಡೆದ ಗೀತಾಮೃತ ಧ್ಯಾನ ಮಂದಿರದ ಹತ್ತನೇ ವರ್ಷದ ವಾರ್ಷಿಕೋತ್ಸವದಲ್ಲಿ ಡಾ. ಅಭಿನವ ಬ್ರಹ್ಮಾನಂದ ಮಹಾಸ್ವಾಮಿಜಿ ಮಾತನಾಡಿದರು | Kannada Prabha

ಸಾರಾಂಶ

ಮನುಷ್ಯ ಯಾವುದೇ ಕಾರಣಕ್ಕೂ ಎಂದಿಗೂ ಮನುಷ್ಯತ್ವ ಕಳೆದುಕೊಳ್ಳಬಾರದು

ಮರಿಯಮ್ಮನಹಳ್ಳಿ: ಮನುಷ್ಯ ಯಾವುದೇ ಕಾರಣಕ್ಕೂ ಎಂದಿಗೂ ಮನುಷ್ಯತ್ವ ಕಳೆದುಕೊಳ್ಳಬಾರದು ಎಂದು ಬೆಳಗಾವಿ ಜಿಲ್ಲೆಯ ಪರಮಾನಂದವಾಡಿಯ ಗುರುದೇವ ಬ್ರಹ್ಮಾನಂದ ಆಶ್ರಮದ ಪೀಠಾಧ್ಯಕ್ಷ ಡಾ.ಅಭಿನವ ಬ್ರಹ್ಮಾನಂದ ಶ್ರೀ ಹೇಳಿದರು.ಇಲ್ಲಿನ ನಗರೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ಗೀತಾಮೃತ ಧ್ಯಾನ ಮಂದಿರದ 10ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರು ಧ್ಯಾನ ಮಾಡುವುದನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು. ನಿತ್ಯ ಅರ್ಧ ಗಂಟೆಯಾದರೂ ಧ್ಯಾನ ಮಾಡಬೇಕು. ಧ್ಯಾನದಿಂದ ಮಾನಸಿಕ ನೆಮ್ಮದಿ ಪಾಕಾಡಿಕೊಳ್ಳಬಹುದು. ಧ್ಯಾನ ಮತ್ತು ಯೋಗ ಮಾಡುವ ಮೂಲಕ ಆರೋಗ್ಯ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು ಎಂದು ಅವರು ಹೇಳಿದರು.

ಇಂದಿನ ಸಮಾಜದಲ್ಲಿ ಕೆಲ ವ್ಯಕ್ತಿಗಳಲ್ಲಿ ವಿಕೃತಿ ಮನಸು ಹೆಚ್ಚಾಗುತ್ತಿರುವುದು ಆತಂಕಕಾರಿಯಾಗಿದೆ. ವಿಕೃತಿ ಮನಸನ್ನು ಯಾರೂ ಬೆಳೆಸಿಕೊಳ್ಳಬಾರದು. ಪ್ರತಿಯೊಬ್ಬರೂ ವಿಶಾಲ ಮನೋಭಾವನೆ ಬೆಳೆಸಿಕೊಂಡು ಶಾಂತಿ, ನೆಮ್ಮದಿ, ಸಮಾಧಾನ ಕಂಡುಕೊಳ್ಳಬೇಕು ಎಂದು ಅವರು ಹೇಳಿದರು.

ಮನೆಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿ ಹೇಳಿ ಕೊಡಬೇಕು. ಮಕ್ಕಳನ್ನು ಉತ್ತಮ ವ್ಯಕ್ತಿಗಳಾಗಿ ಬೆಳೆಸಬೇಕು. ಆಗ ಉತ್ತಮ ಸಮಾಜ ನಿರ್ಮಿಸಿದಂತಾಗುತ್ತದೆ ಎಂದು ಅವರು ಹೇಳಿದರು.

ಆಂಧ್ರಪ್ರದೇಶದ ರಾಯಚೂಟಿಯ ಜಂಗಮಯ್ಯ ಮಾತನಾಡಿ, ಧ್ಯಾನದಿಂದ ಉತ್ತಮ ಜ್ಞಾನ ಪಡೆಯಬಹುದು ಎಂದು ಅವರು ಹೇಳಿದರು.

ಬೆಂಗಳೂರಿನ ಪಿರಾಮಿಡ್‌ ವ್ಯಾಲಿ ಕೋಟೇಶ್ವರ ರಾವ್‌, ಬಳ್ಳಾರಿಯ ವಕೀಲ ಲಿಂಗನಗೌಡ್ರು, ಹನುಮಂತ ರಾವ್‌ ಮುಖ್ಯಅತಿಥಿಗಳಾಗಿ ಭಾಗವಹಿಸಿ ಸಭೆಯಲ್ಲಿ ಮಾತನಾಡಿದರು.

ಮರಿಯಮ್ಮನಹಳ್ಳಿಯ ಗೀತಾಮೃತ ಧ್ಯಾನ ಮಂದಿರದ ವ್ಯವಸ್ಥಾಪಕ ಆರ್‌.ಬಸವರಾಜ ಸಮಾರಂಭದ ಅಧ್ಯಕ್ಷತೆ ವಹಿಸಿ ಸಭೆಯಲ್ಲಿ ಮಾತನಾಡಿದರು.

ಕಾರ್ಯಕ್ರಮದ ನಂತರ ಗೀತಾಮೃತ ಕಲಾ ಟ್ರಸ್ಟ್‌ನ ಕಲಾವಿದರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ಮರಿಯಮ್ಮನಹಳ್ಳಿಯ ನಗರೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ಗೀತಾಮೃತ ಧ್ಯಾನ ಮಂದಿರದ ಹತ್ತನೇ ವರ್ಷದ ವಾರ್ಷಿಕೋತ್ಸವದಲ್ಲಿ ಡಾ.ಅಭಿನವ ಬ್ರಹ್ಮಾನಂದ ಶ್ರೀ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ