ಜೇಸಿ ಪುಷ್ಪಗಿರಿ ಸಂಸ್ಥೆಗೆ 50 ವರ್ಷ ತುಂಬಿದ ಹಿನ್ನೆಲೆ ಜೇಸಿ ಸುವರ್ಣ ಸಂಭ್ರಮ ಜಾನಕಿ ಕನ್ವೆಂಷನ್ ಸಭಾಂಗಣದಲ್ಲಿ ನಡೆಯಿತು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಇಲ್ಲಿನ ಜೇಸಿ ಪುಷ್ಪಗಿರಿ ಸಂಸ್ಥೆಗೆ 50ವರ್ಷ ತುಂಬಿದ ಹಿನ್ನಲೆ ಜೇಸಿ ಸುವರ್ಣ ಸಂಭ್ರಮ ಮಂಗಳವಾರ ಜಾನಕಿ ಕನ್ವೆಂಷನ್ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಜೇಸಿ ಸಂಸ್ಥೆ ಸ್ಥಾಪಕ ಅಧ್ಯಕ್ಷ ಎಸ್.ಸಿ. ಮದನ್ ಮೋಹನ್ ಉದ್ಘಾಟಿಸಿದರು. ನಂತರ ಮಾತನಾಡಿ, ಜೇಸಿ ಸಂಸ್ಥೆ ಸಮಾಜದ ಯುವಕರಿಗೆ ಅತ್ಯುನ್ನತ ತರಬೇತಿ ನೀಡಿ ನಾಯಕತ್ವವನ್ನು ಅವರಲ್ಲಿ ಬೆಳೆಸಿ ಮುಖ್ಯವಾಹಿನಿಗೆ ತರುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಸಂಸ್ಥೆ ಮೂಲಕ ಸಾಕಷ್ಟು ಮಹಿಳಾ ಸಾಧಕಿಯರನ್ನು ಬೆಳೆಸುತ್ತಿದ್ದು, ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವುದನ್ನು ಕಾಣಬಹುದು. ಯುವ ಜನರು ಸಂಸ್ಥೆಯಲ್ಲಿ ಸದಸ್ಯತ್ವ ಪಡೆಯುವ ಮೂಲಕ ಉತ್ತಮ ಪ್ರಜೆಗಳಾಗಬೇಕು ಎಂದರು.ಕಳೆದ 50 ವರ್ಷಗಳ ಹಿಂದೆ ಜೇಸಿ ಸಂಸ್ಥೆಯನ್ನು ಪ್ರಾರಂಭಿಸಲಾಯಿತು. ಸಂಸ್ಥೆಯ ಸದಸ್ಯರ ನಿರಂತರ ಶ್ರಮದಿಂದಾಗಿ ಇಂದು ಹೆಮ್ಮರವಾಗಿ ಬೆಳೆದಿದೆ. ಮುಂದೆಯೂ ಇನ್ನೂ ಹೆಚ್ಚಿನ ಜನರ ಸೇವೆ ಮಾಡುವ ಮೂಲಕ ಇನ್ನಷ್ಟು ಸಮಾಜಕ್ಕೆ ಹತ್ತಿರವಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿ ಸಂಸ್ಥೆ ಅಧ್ಯಕ್ಷೆ ಜಗದಾಂಭ ಗುರುಪ್ರಸಾದ್ ವಹಿಸಿದ್ದರು. ವೇದಿಕೆಯಲ್ಲಿ ಜೇಸಿ ಸಂಸ್ಥೆಯ ವಲಯ ಅಧ್ಯಕ್ಷ ವಿಜಯಕುಮಾರ್, ಝೋನ್ ಛೇರ್‌ಮನ್ ಯೋಗೇಶ್, ಉದ್ಯಮಿ ಬಿ.ಎಸ್. ಸುವೀದ್, ಕಾರ್ಯದರ್ಶಿ ವಿನುತಾ ಸುದೀಪ್, ಪ್ರಮುಖರಾದ ಕೆ.ಎನ್. ತೇಜಸ್ವಿ, ಎಸ್.ಆರ್. ವಸಂತ್, ಜ್ಯೋತಿ ರಾಜೇಶ್, ದಿಶಾ ಗಿರೀಶ್, ಕಾರ್ಯಕ್ರಮದ ಯೋಜನಾ ನಿರ್ದೇಶಕ ಕೆ.ಜೆ. ಗಿರೀಶ್ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಕಳೆದ 50 ವರ್ಷಗಳಿಂದ ಸಂಸ್ಥೆಯ ಅಧ್ಯಕ್ಷರಾಗಿದ್ದವರನ್ನು ಗೌರವಿಸಲಾಯಿತು.