ಜಾನಪದದ ಮೌಲ್ಯಗಳು ಎಂದಿಗೂ ಬದಲಾಗಲ್ಲ: ರಾಜ್ಯಾಧ್ಯಕ್ಷ ಡಾ. ಜಾನಪದ ಎಸ್.ಬಾಲಾಜಿ

KannadaprabhaNewsNetwork |  
Published : Mar 13, 2026, 01:30 AM IST
12 ಬೀರೂರು 4 ತಾಲ್ಲೂಕಿನ ಚಿಕ್ಕಬಾಸೂರು ಗ್ರಾಮದಲ್ಲಿ ಕನ್ನಡ ಜಾನಪದ ಪರಿಷತ್ ತಾಲ್ಲೂಕು ಘಟಕದ ವತಿಯಿಂದ ನಡೆದ ತಾಲ್ಲೂಕು ಕನ್ನಡ ಜಾನಪದ ಸಮ್ಮೇಳನವನ್ನು ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ. ಜಾನಪದ ಎಸ್.ಬಾಲಾಜಿ ಉದ್ಘಾಟಿಸಿದರು. ಓಣಿತೋಟ ರತ್ನಾಕರ್, ಸೂರಿಶ್ರೀನಿವಾಸ್, ಸಿ.ಜೆ. ತಿಮ್ಮಯ್ಯ, ಪರಮೇಶ್, ವಿಶಾಲಾಕ್ಷಮ್ಮ, ಶೋಭಾ ಮತ್ತಿ | Kannada Prabha

ಸಾರಾಂಶ

ಬೀರೂರುಕಾಲ ಬದಲಾದರೂ ಜನಪದದ ಮೌಲ್ಯಗಳು ಎಂದಿಗೂ ಬದಲಾಗುವುದಿಲ್ಲ, ನೆಲದ ಮಣ್ಣಿಗೂ ಜನಪದದ ಕಲೆಗೂ ಅವಿನಾಭಾವ ಸಂಬಂಧವಿದೆ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ. ಜಾನಪದ ಎಸ್.ಬಾಲಾಜಿ ಅಭಿಪ್ರಾಯಪಟ್ಟರು.

ಕನ್ನಡ ಜಾನಪದ ಸಮ್ಮೇಳನ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಬೀರೂರು

ಕಾಲ ಬದಲಾದರೂ ಜನಪದದ ಮೌಲ್ಯಗಳು ಎಂದಿಗೂ ಬದಲಾಗುವುದಿಲ್ಲ, ನೆಲದ ಮಣ್ಣಿಗೂ ಜನಪದದ ಕಲೆಗೂ ಅವಿನಾಭಾವ ಸಂಬಂಧವಿದೆ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ. ಜಾನಪದ ಎಸ್.ಬಾಲಾಜಿ ಅಭಿಪ್ರಾಯಪಟ್ಟರು.ಚಿಕ್ಕಬಾಸೂರು ಗ್ರಾಮದಲ್ಲಿ ಕಜಾಪ ತಾಲೂಕು ಘಟಕದಿಂದ ನಡೆದ ಕನ್ನಡ ಜಾನಪದ ಸಮ್ಮೇಳನ ಉದ್ಘಾಟಿಸಿ ಮಾತ ನಾಡಿ, ಜಾನಪದರು ಮೂಲೆ ಗುಂಪಾದರೆ ನಾಡು ಮೂಲೆ ಗುಂಪಾಗಲಿದೆ. ಜಾನಪದಕ್ಕೆ ಯಾವುದೇ ಧರ್ಮ, ಬಣ್ಣ, ಜಾತಿ ಯಿಲ್ಲದ ಮಾನವೀಯ ಮೌಲ್ಯಗಳ ಪರಿಚಯಿಸುವ ಕಲೆಯಾಗಿದೆ. ಯಾಂತ್ರಿಕೃತ ಬದುಕು ಬದಲಾದಂತೆ ಪೂರ್ವಿಕರ ಕಲೆಗಳು ನಶಿಸುತ್ತವೆ ಎಂಬುದು ತಪ್ಪು ಕಲ್ಪನೆ, ಕಲೆ ಜೀವಂತಿಕೆ ಉಳಿಸಲು ಪರಿವರ್ತನೆಗೊಳ್ಳಲಿದೆ ಹೊರತು ಕಲೆಗಳು ಎಂದಿಗೂ ನಶಿಸುವುದಿಲ್ಲ ಎಂದರು.ಸರ್ಕಾರ ರಾಜ್ಯದ ಶೇ.10ರಷ್ಟು ಜಾನಪದ ಕಲಾವಿದರಿಗೆ ಮಾಸಾಶನ ನೀಡುತ್ತಿದೆ. ಉಳಿದ 90% ರಷ್ಟು ಕಲಾವಿದರ ಜಾನಪದ ಕಲೆಗಳನ್ನು ಗುರುತಿಸುವ ಸಮೀಕ್ಷೆ ರಾಜ್ಯಾದ್ಯಂತ ನಡೆಸಲು ಜಾನಪದ ಪರಿಷತ್ ಘಟಕ ತಿರ್ಮಾನಿಸಿದೆ. ಕಲಾವಿದರಿಗೆ ಕನಿಷ್ಠ 5ಸಾವಿರ ಮಾಸಾಶನ ನೀಡುವಂತೆ ಈಗಾಗಲೇ ಮನವಿ ಸಲ್ಲಿಸಲಾಗಿದೆ ಎಂದರು.ಕಜಾಪ ಘಟಕ ಜಿಲ್ಲಾಧ್ಯಕ್ಷ ಓಣಿತೋಟ ರತ್ನಾಕರ್ ಮಾತನಾಡಿ, ಜಾನಪವನ್ನು ಪ್ರೋತ್ಸಾಹಿಸುವ ಕಾರ್ಯವಾಗಬೇಕಿದೆ. ಜಿಲ್ಲೆಯ ಸುಮಾರು 4500ಕ್ಕೂ ಹೆಚ್ಚು ಕಲಾವಿದರನ್ನು ಗುರುತಿಸುವ ಕೆಲಸ ಪರಿಷತ್‌ನಿಂದ ಮಾಡಲಾಗಿದೆ. ಮಕ್ಕಳ ಶೈಕ್ಷಣಿಕ ಪಠ್ಯದಲ್ಲಿ ಜಾನಪದ ಮೌಲ್ಯಗಳು ಮಾಯವಾಗಿರುವುದು ವಿಪರ್ಯಾಸ. ಈ ನಿಟ್ಟಿನಲ್ಲಿ ಮುಂದಿನ ಯುವ ಪೀಳಿಗೆಗೂ ಜಾನಪದ ಕಲೆಗಳನ್ನು ಬೆಳೆಸಲು ಶಿಕ್ಷಣದಲ್ಲಿ ಪರಿಚಯಿಸುವ ಕಾರ್ಯವಾಗಬೇಕಿದೆ ಎಂದರು.ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ಅಧುನಿಕರಣದ ಬದುಕಿನಲ್ಲಿ ಪ್ರಸ್ತುತ ದಿನಗಳು ಶ್ರಮದ ಸಂಸ್ಕೃತಿಯಿಂದ ವಿಮುಖ ರಾಗುತ್ತಿರುವುದು ಆತಂಕಕಾರಿ. ಈ ಹಿಂದೆ ಪೂರ್ವಿಕರು ಜಾನಪದ ಕಲೆಗಳ ಮೂಲಕವೇ ಆರೋಗ್ಯಕರ ಸಮಾಜ ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಿ ನಾಡಿಗೆ ಅಪಾರ ಕೊಡುಗೆ ನೀಡಿದ್ದರು ಎಂದರು.

ತಾಲೂಕು ಘಟಕದ ಅಧ್ಯಕ್ಷ ಸಿ.ಜೆ. ತಿಮ್ಮಯ್ಯ ಮಾತನಾಡಿ, ಪರಿಷತ್ ಮೂಲಕ ಪ್ರಥಮಬಾರಿಗೆ ತಾಲೂಕು ಸಮ್ಮೇಳನ ಆಯೋಜಿಸಲಾಗಿದೆ.ತಾಲೂಕು ಘಟಕ ಜಾನಪದ ಕಲಾವಿದರನ್ನು ಗುರುತಿಸುವ ಕಾರ್ಯವನ್ನು ನಿರಂತರ ಮಾಡುವ ಮೂಲಕ ತಾಲೂಕಿನಾದ್ಯಂತ ಸಂಘಟನೆಗೆ ಒತ್ತು ಕೊಡಲಾಗುತ್ತದೆ ಎಂದರು.ಚಿತ್ರನಟ ಕಡೂರು ಧರ್ಮಣ್ಣ ಮಾತನಾಡಿ, ಗ್ರಾಮೀಣ ಸೊಗಡಿನ ಜಾನಪದ ಕಲೆಗಳನ್ನು ನಗರಪ್ರದೇಶಗಳಲ್ಲಿ ಕಾಣಲು ಸಾಧ್ಯವಿಲ್ಲ ಎಂದರು.

ಸಮ್ಮೇಳನಾಧ್ಯಕ್ಷ ಎಂ.ಸಿ. ಭೋಗಪ್ಪರನ್ನು ಅಲಂಕೃತಗಾಡಿಯಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ಕಲಾತಂಡ ದೊಂದಿಗೆ ಮೆರವಣಿಗೆ ನಡೆಸಲಾಯಿತು. ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು. ತಾಲೂಕು ಘಟಕದ ನೂತನ ಪದಾಧಿಕಾರಿಗಳು ಪದಗ್ರಹಣ ಮಾಡಿದರು.

ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎಂ.ಎಸ್. ವಿಶಾಲಾಕ್ಷಮ್ಮ, ತಾಲೂಕು ಘಟಕದ ಅಧ್ಯಕ್ಷೆ ಶೋಭಾ ಶ್ರೀನಿವಾಸ್, ಯುಗ ಧರ್ಮರಾಮಣ್ಣ, ಎಸ್.ಎಸ್.ವೆಂಕಟೇಶ್, ಚಿಕ್ಕನಲ್ಲೂರು ಪರಮೇಶ್, ಪ್ರೋ. ಕೆ.ಎಸ್. ಕೌಜಲಗಿ, ಜಾನಪದ ಪರಿಷತ್ ತಾಲೂಕು ಪ್ರಧಾನಕಾರ್ಯದರ್ಶಿ ಸಿ.ಜಿ. ಗಿರೀಶ್, ಖಜಾಂಚಿ ಸಿ.ಎಚ್. ಅನಂತ, ಕೆ.ಜಿ.ವಸಂತಕುಮಾರ್, ಆರ್.ಬಿ. ಮಂಜುನಾಥ್, ನಾಗರಾಜಪ್ಪ, ಹಿರಿಯ ಜಾನಪದ ಕಲಾವಿದೆ ಚೌಡಮ್ಮ ಮತ್ತಿತರಿದ್ದರು.12 ಬೀರೂರು 4 ತಾಲೂಕಿನ ಚಿಕ್ಕಬಾಸೂರು ಗ್ರಾಮದಲ್ಲಿ ನಡೆದ ತಾಲೂಕು ಕನ್ನಡ ಜಾನಪದ ಸಮ್ಮೇಳನವನ್ನು ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ. ಜಾನಪದ ಎಸ್.ಬಾಲಾಜಿ ಉದ್ಘಾಟಿಸಿದರು. ಓಣಿತೋಟ ರತ್ನಾಕರ್, ಸೂರಿಶ್ರೀನಿವಾಸ್, ಸಿ.ಜೆ. ತಿಮ್ಮಯ್ಯ, ಪರಮೇಶ್, ವಿಶಾಲಾಕ್ಷಮ್ಮ, ಶೋಭಾ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚನ್ನರಾಯಪಟ್ಟಣದಲ್ಲಿ ವಿಶ್ವ ಮಹಿಳಾ ದಿನಾಚರಣೆ
ಸಾಹಿತ್ಯದ ಮೂಲಕ ಜಗತ್ತಿಗೆ ಕೊಡುಗೆ ನೀಡಿದ ಜೈನಧರ್ಮ: ಪ್ರೊ. ಶಾಂತಿನಾಥ ದಿಬ್ಬದ