ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಗಾಂಧಿ ಭವನದಲ್ಲಿ ಜನಕಲಾರಂಗ, ಜಿಲ್ಲಾ ಕಲಾವಿದರ ಬಳಗ ಮತ್ತು ಜನಪರ ಸಂಘಟನೆಗಳ ಸಂಯುಕ್ತವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ನಮ್ಮ ಮಕ್ಕಳಿಗೆ ಸಿನಿಮಾ, ಟಿ.ವಿ. ಮತ್ತು ಮೊಬೈಲ್ ಮಾಯಾಲೋಕದಲ್ಲಿ ತೇಲಿಸುವುದನ್ನು ಬಿಟ್ಟು ಜಾನಪದ ಸಂಸ್ಕೃತಿಯಿಂದ ನಮ್ಮ ಪರಂಪರೆಯನ್ನು ಪರಿಚಯಿಸಿ ಅವರ ವ್ಯಕ್ತಿತ್ವವನ್ನು ಗಟ್ಟಿಗೊಳಿಸಬೇಕು. ಮಾಯಾ ಲೋಕವನ್ನು ಅಪ್ಪಿಕೊಳ್ಳುತ್ತಾ, ನಮ್ಮದಲ್ಲದ ಲೋಕವನ್ನು ಬೆಳೆಸುವ ಅಪಾಯದ ಪ್ರಯತ್ನಗಳು ನಡೆಯುತ್ತಿರುವ ದಿನಗಳಲ್ಲಿ ಜಾನಪದ ಸಂಸ್ಕೃತಿಯ ಮೂಲಕ ನಮ್ಮನ್ನು ನಾವು ಉಳಿಸಿಕೊಳ್ಳಲು ಸಾಧ್ಯ ಎಂದು ಪ್ರತಿಪಾದಿಸಿದರು.ನೆಲದ ಸಂಸ್ಕೃತಿ ಉಳಿಸಿಕೊಳ್ಳಿ:
ಇವತ್ತಿಗೆ ಜನಪದ ಜನಪರ, ನೆಲದಪರ, ಪ್ರಕೃತಿ ಮತ್ತು ಪರಿಸರ ಪರವಾದ ಮಾತುಗಳನ್ನು ಆಡಿ ಜೀರ್ಣಿಸಿಕೊಳ್ಳದೇ ಕಷ್ಟಕರವಾಗಿದೆ. ಆದರೂ, ಧೃತಿಗೆಡದೆ ನಮ್ಮೊಳಗೆ ಇದಕ್ಕೆ ಪೂರಕವಾದ ವಾತಾವರಣ ಸೃಷ್ಠಿಸಿಕೊಳ್ಳಬೇಕಿದೆ ಎಂದ ಅವರು, ಸರ್ಕಾರ ನೀಡಿರುವ ಪದವಿಯನ್ನು ಜವಾಬ್ದಾರಿಯುತವಾಗಿ ಸದಸ್ಯರ ಬೆಂಬಲದೊಡನೆ ಜನಪದ ನೆಲೆಯಲ್ಲೇ ನಿಭಾಯಿಸುವುದಾಗಿ ಹೇಳಿದರು.
ಅಭಿನಂನದನಾ ಭಾಷಣ ಮಾಡಿದ ಸಾಮಾಜಿಕ ಚಿಂತಕ ಇಂದೂಧರ ಹೊನ್ನಾಪುರ, ಸಾಂಸ್ಕೃತಿಕತೆ, ನೈತಿಕತೆ ಮತ್ತು ವೈಜ್ಞಾನಿಕವಾದ ಧಾರ್ಮಿಕತೆ ಇಲ್ಲದೆ, ಇಂದಿನ ಸಾಮಾಜಿಕ ಚಳವಳಿಗಳು ಸೋಲುತ್ತಿವೆ. ಸೊರಗುತ್ತಿವೆ, ಭವಿಷ್ಯದ ದೃಷ್ಠಿಯಿಂದ ದಲಿತ-ರೈತ ಸೇರಿದಂತೆ ವಿವಿಧ ಚಳವಳಿಗಳ ಪುನರುತ್ಥಾನ ಆಗಬೇಕೆಂದು ಆಶಿಸಿದರು.
ಗೊಲ್ಲಹಳ್ಳಿ ಶಿವಪ್ರಸಾದ್ ಬರಹ ಮತ್ತು ಬದುಕು ದಲಿತ ಚಳವಳಿಗೆ ಮಾತ್ರ ಸೀಮಿತವಾದದ್ದು. ಕೋಲಾರ-ಚಿಕ್ಕಬಳ್ಳಾಪುರ ಭಾಗದಲ್ಲಿ ಎಲ್ಲಾ ಜನಪರ ಹೋರಾಟದ ಮುಂಚೂಣಿಯಲ್ಲಿದ್ದಾರೆ. ಅವರ ಜನಪದ ಜನರ ಬದುಕಿನ ಪರವಾಗಿ ಇಂದಿಗೂ ಉಳಿದಿದೆ. ಅವರ ಅನುಭವ ನೋವು-ಸಂಕಟ ಜೀವಪದವಾಗಿದೆ ಎಂದು ಬಣ್ಣಿಸಿದರು.
ಜಾನಪದ ವಿವಿ ಸಿಂಡಿಕೇಟ್ ಸದಸ್ಯ ಗೊರವಾಲೆ ಚಂದ್ರಶೇಖರ್, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾದ ಮಂಜೇಶ್ ಚನ್ನಾಪುರ, ಡಾ. ಕೆಂಪಮ್ಮ ಅವರನ್ನು ಅಭಿನಂದಿಸಲಾಯಿತು. ಗೊಲ್ಲಹಳ್ಳಿ ಶಿವಪ್ರಸಾದ್ ರಚನೆಯ ಗೀತೆಗಳನ್ನು ಹಾಡಲಾಯಿತು.