ಡಾ.ಅಂಬೇಡ್ಕರ್‌ ತತ್ವಾದರ್ಶ ಪಾಲಿಸಿ

KannadaprabhaNewsNetwork |  
Published : Apr 15, 2026, 02:30 AM IST
14ಉಳಉ1 | Kannada Prabha

ಸಾರಾಂಶ

ಅಂಬೇಡ್ಕರ್‌ ಸಂವಿಧಾನ ರಚಿಸುವದರ ಮೂಲಕ ಎಲ್ಲರಿಗೂ ಸಮಾನತೆ ಕಂಡ ಮಹಾನ್ ಚೇತನರಾಗಿದ್ದಾರೆ.

ಗಂಗಾವತಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ತತ್ವಾದರ್ಶಗಳನ್ನು ಸರ್ವರು ಪಾಲಿಸಬೇಕು ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ನಗರದ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಡಾ. ಬಿ.ಆರ್. ಅಂಬೇಡ್ಕರ 135ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಂಬೇಡ್ಕರ್‌ ಸಂವಿಧಾನ ರಚಿಸುವದರ ಮೂಲಕ ಎಲ್ಲರಿಗೂ ಸಮಾನತೆ ಕಂಡ ಮಹಾನ್ ಚೇತನರಾಗಿದ್ದಾರೆ.ದೇಶದಲ್ಲಿ ಶಾಂತಿ ಸೌಹಾರ್ದ್ಯತೆಗೆ ಸಂವಿಧಾನವು ಪ್ರಮುಖವಾದದ್ದು ಎಂದರು.

ಈ ಸಂದರ್ಭದಲ್ಲಿ ನಗರಸಭಾ ಪೌರಾಯುಕ್ತ ವಿರೂಪಾಕ್ಷಮೂರ್ತಿ,ತಾಪಂ ಇಓ ರಂಗಾರೆಡ್ಡಿ, ಡಿವೈಎಸ್ಪಿ ಜಾಯಪ್ಪ ನ್ಯಾಮಗೌಡರ್, ತಹಸೀಲ್ದಾರ ಮಹಾಂತಗೌಡ, ಅಂಬಣ್ಣ, ಮಾಗಿ ಹುಲಗಪ್ಪ, ನ್ಯಾಯವಾದಿ ಹುಸೇನಪ್ಪ ಹಂಚಿನಾಳ, ಸೋಮನಾಥ, ಯಮನೂರು ಚೌಡ್ಕಿ ಸೇರಿದಂತೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಇತರ ಅಧಿಕಾರಿಗಳು ಭಾಗವಹಿಸಿದ್ದರು.

ಮೆರವಣಿಗೆ:ನಗರದ ನ್ಯಾಯಾಲಯ ಮುಂಭಾಗದಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌ ಪ್ರತಿಮೆಗೆ ಶಾಸಕ ಗಾಲಿ ಜನಾರ್ದನ ರೆಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ ಪುಷ್ಪ ಗುಚ್ಚ ಸಮರ್ಪಿಸಿ ಮೆರವಣಿಗೆಗೆ ಚಾಲನೆ ನೀಡಿದರು.

ಈ ವೇಳೆ ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ, ಕಾಂಗ್ರೆಸ್ ಮುಖಂಡ ಸರ್ವೇಶ ಮಾಂತಗೌಂಡ, ಪೌರಾಯುಕ್ತ ವಿರೂಪಾಕ್ಷಮೂರ್ತಿ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.

ಬಿಜೆಪಿ ಕಚೇರಿ: ನಗರದ ಹೊಸಳ್ಳಿ ರಸ್ತೆಯ ಮಾರ್ಗದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಡಾ. ಬಿ.ಆರ್.ಅಂಬೇಡ್ಕರ್‌ 135ನೇ ಜಯಂತಿ ಆಚರಿಸಲಾಯಿತು.ಭಾವಚಿತ್ರಕ್ಕೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಮಾಲಾರ್ಪಣೆ ಮಾಡಿದರು. ಈ ವೇಳೆ ಮಾಜಿ ಶಾಸಕ ಪರಣ್ಣ ಮುನವಳ್ಳಿ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ, ಚಂದ್ರಶೇಖರ್ ಹೀರೂರು, ಡಿ.ಕೆ. ಆಗೋಲಿ ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಬೇಡ್ಕರ್‌ ವ್ಯಕ್ತಿಯಲ್ಲ ಜಗತ್ತಿನ ಶಕ್ತಿ
ನಾಯಿ, ಬೆಕ್ಕುಗಳಿಗಿಲ್ಲದ ಮೈಲಿಗೆ ಮನುಷ್ಯರಿಗೆ ಏಕೆ?