ಸಂವಿಧಾನದ ಆಶಯ ಪಾಲಿಸಿ

KannadaprabhaNewsNetwork |  
Published : Jan 27, 2026, 03:30 AM IST
26ಕೆಪಿಎಲ್01ಕೊಪ್ಪಳ ವಿಶ್ವವಿದ್ಯಾಲಯದಲ್ಲಿ ನಡೆದ 77 ನೇ ಗಣರಾಜ್ಯೋತ್ಸವದಲ್ಲಿ ರಾಷ್ಟ್ರಧ್ವಜಾರೋಹಣ ಉಪಕುಲಪತಿ ಪ್ರೊ. ಎಸ್.ವಿ. ಡಾಣಿ ಧ್ವಜಾರೋಹಣ ನೆರವೇರಿಸಿದರು. | Kannada Prabha

ಸಾರಾಂಶ

ದೇಶ ಈಗಾಗಲೇ ತಾಂತ್ರಿಕ, ಆರ್ಥಿಕ, ಶೈಕ್ಷಣಿಕವಾಗಿ ಬಹಳಷ್ಟು ಪ್ರಗತಿ ಸಾಧಿಸಿದೆ. ವಿಶ್ವಮಟ್ಟದಲ್ಲಿ ದೇಶ ಇನ್ನಷ್ಟು ಅಭಿವೃದ್ದಿ ಕಾಣಲು ವಿಶ್ವ ಗುರುವಾಗುವ ಕನಸನ್ನು ನನಸಾಗಿಸಲು ಎಲ್ಲರೂ ಒಂದಾಗಿ ದುಡಿಯಬೇಕು

ಕೊಪ್ಪಳ: ಸಂವಿಧಾನ‌ ನಿರ್ಮಾತೃಗಳು ಹಾಕಿಕೊಟ್ಟ ಸಂವಿಧಾನದ ಮೂಲ ಆಶಯಗಳಾದ ಸಹೋದರತೆ, ಸಮಾನತೆ ಇನ್ನಿತರ ಆದರ್ಶಗಳ ಪಾಲನೆಯಿಂದ ದೇಶ ಈಗ ವಿಶ್ವ ಗುರುವಾಗುವ ಹಂತಕ್ಕೆ ತಲುಪಿದ್ದು, ಪ್ರತಿಯೊಬ್ಬರೂ‌ ದೇಶದ ಅಭ್ಯುದಯಕ್ಕೆ ಕೈ ಜೋಡಿಸಬೇಕು ಎಂದು ಕೊಪ್ಪಳ‌ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ವಿ. ಡಾಣಿ‌ ಕರೆ ನೀಡಿದರು.

ತಾಲೂಕಿನ ಭಾನಾಪುರ ಬಳಿ ಇರುವ ಕೊಪ್ಪಳ ವಿಶ್ವವಿದ್ಯಾಲಯದಲ್ಲಿ ನಡೆದ 77ನೇ ಗಣರಾಜ್ಯೋತ್ಸವದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಅನೇಕ ಮಹನೀಯರ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳ ಫಲವಾಗಿ ದೊರೆತ ಸ್ವಾತಂತ್ರ್ಯದ‌ ಹಾಗೂ ಸಂವಿಧಾನದ ಆದರ್ಶ ಪ್ರತಿಯೊಬ್ಬರೂ ಗೌರವಿಸಬೇಕು.‌ ದೇಶ ಈಗಾಗಲೇ ತಾಂತ್ರಿಕ, ಆರ್ಥಿಕ, ಶೈಕ್ಷಣಿಕವಾಗಿ ಬಹಳಷ್ಟು ಪ್ರಗತಿ ಸಾಧಿಸಿದೆ. ವಿಶ್ವಮಟ್ಟದಲ್ಲಿ ದೇಶ ಇನ್ನಷ್ಟು ಅಭಿವೃದ್ದಿ ಕಾಣಲು ವಿಶ್ವ ಗುರುವಾಗುವ ಕನಸನ್ನು ನನಸಾಗಿಸಲು ಎಲ್ಲರೂ ಒಂದಾಗಿ ದುಡಿಯಬೇಕು ಎಂದರು.

ಕುಲಸಚಿವ ಪ್ರೊ. ಕೆ.ರಮೇಶ, ಆಡಳಿತಾಧಿಕಾರಿ ಪ್ರೊ.ತಿಮ್ಮಾರೆಡ್ಡಿ ಮೇಟಿ, ಉಪನ್ಯಾಸಕ ಡಾ.ವೀರೇಶ ಉತ್ತಂಗಿ, ಡಾ.ಪ್ರಿಯಾಂಕ ಕೊನ್ನೂರ, ಡಾ. ಬಸವರಾಜ ಗಡಾದ, ಡಾ. ಪ್ರವೀಣ ಪೊಲೀಸ್ ಪಾಟೀಲ, ಡಾ.ಪಾರ್ವತಿ ಕನಕಗಿರಿ, ನಾಗರಾಜ, ಮೌಲಾಸಾಬ್, ಸಿಬ್ಬಂದಿ ಪ್ರಕಾಶ ಕುರಿ, ತೌಫಿಕ ಅಹ್ಮದ, ಗಂಗಾಧರ, ಗಿರೀಶ ಸೇರಿದಂತೆ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ಸೇರಿ ರಾಜ್ಯದ 9 ಜಿಲ್ಲೆಗಳಲ್ಲಿ ಮಳೆ
ಪೌರಾಯುಕ್ತೆಗೆ ಬೆಂಕಿ ಧಮ್ಕಿ ಹಾಕಿದ್ದ ರಾಜೀವ್‌ ಅರೆಸ್ಟ್‌